ಸಂಯಮ ಸಡಿಲಿಕೆ

காமக் கணிச்சி உடைக்கும் நிறையென்னும்
நாணுத்தாழ் வீழ்த்த கதவு.   (1251)

ಲಜ್ಜೆಯೆನ್ನುವ ಕೀಲಿ ಹಾಕಿದ ಸಂಯಮದ ಬಾಗಿಲನ್ನು ಕಾಮವೆಂಬ ಕೊಡಲಿಯು ಒಡೆದು ಹಾಕುತ್ತದೆ. (ಕಾಮವು ಲಜ್ಜೆಯನ್ನು ಅತಿಕ್ರಮಿಸಿ ಸಂಯಮವನ್ನೂ ಸಡಿಲಿಸುತ್ತದೆ ಎಂದು ಭಾವ)

காமம் எனவொன்றோ கண்ணின்றென் நெஞ்சத்தை
யாமத்தும் ஆளும் தொழில்.   (1252)

ಎಲ್ಲರೂ ವಿಶ್ರಾಂತಿ ಹೊಂದಿರುವ ನಡು ರಾತ್ರಿಯಲ್ಲೂ ನನ್ನ ಮನಸ್ಸನ್ನು (ಹಿಂಸಿಸಿ) ದುಡಿಸಿಕೊಳ್ಳುತ್ತಿರುವ ಕಾಮಕ್ಕೆ ಕಣ್ಣಿಲ್ಲವೆಂಬುದು ದಿಟ!

மறைப்பேன்மன் காமத்தை யானோ குறிப்பின்றித்
தும்மல்போல் தோன்றி விடும்.   (1253)

ನಾನೋ ಕಾಮವನ್ನು (ಮನಸ್ಸಿನಾಳದಲ್ಲಿ) ಮರೆಸಿಕೊಳ್ಳಲೆತ್ತಿಸುತ್ತಿದ್ದೇನೆ. ಆದರೆ ಅದು ಯಾವ ಸೂಚನೆಯೂ ಇಲ್ಲದೆ (ಸೀನಿನಂತೆ) ತನ್ನನ್ನು ಒಮ್ಮೆಲೇ ಹೊರಗೆ ತೋರ್ಪಡಿಸಿಕೊಳ್ಳುತ್ತಿದೆ.

நிறையுடையேன் என்பேன்மன் யானோஎன் காமம்
மறையிறந்து மன்று படும்.   (1254)

ನಾನೋ ಇದುವರೆಗೆ ಸಂಯಮದಿಂದ ಇರುವುದಾಗಿ ತಿಳಿದುಕೊಂಡಿದ್ದೆ; ಆದರೆ ನನ್ನ ಕಾಮವು ಮರೆಯನ್ನು ಹಿರಿದು ಬಹಿರಂಗವಾಗಿ ಬಯಲು ಮಾಡಿಕೊಳ್ಳುತ್ತಿದೆ.

செற்றார்பின் செல்லாப் பெருந்தகைமை காமநோய்
உற்றார் அறிவதொன்று அன்று.   (1255)

ತಮ್ಮನ್ನು ಹಗೆಯಂತೆ ಅಗಲಿದ ಪ್ರಿಯತಮನ ಹಿಂದೆ ಹೋಗದೆ, ಅಭಿಮಾನವನ್ನು ಕಾಪಾಡಿಕೊಳ್ಳುವುದು ಕಾಮವೇದನೆಗೊಳಗಾದವರಲ್ಲಿ ಸಾಧ್ಯವಿಲ್ಲ.

செற்றவர் பின்சேறல் வேண்டி அளித்தரோ
எற்றென்னை உற்ற துயர்.   (1256)

ಪ್ರೇಯಸಿಯನ್ನು ತೊರೆದು ಹೋದ ಇನಿಯನ ಹಿಂದ ಸಾರಲು ಬಯಸಿದ ನೆಲೆಯಲ್ಲಿರುವ ನನ್ನ ದುರ್ಬರವಾದ ಕಾಮ ವೇದನೆಯು ಎಷ್ಟು ಸುಕುಮಾರವಾದುದೋ!

நாணென ஒன்றோ அறியலம் காமத்தால்
பேணியார் பெட்ப செயின்.   (1257)

ಇನಿಯನು ಪ್ರೇಮಾತುರನಾಗಿ ನನಗೆ ಇಷ್ಟವಾಗುವಂತಹ ಎಸಕಗೆಳನ್ನು ಮಾಡುವವನಾದರೆ, ನಾನು ನಾಚಿಕೆಯನ್ನು ತೊರೆದು ಇರಬಲ್ಲೆನು.

பன்மாயக் கள்வன் பணிமொழி அன்றோநம்
பெண்மை உடைக்கும் படை.   (1258)

ನಮ್ಮ ಕೆಣ್ತಿನದ ಸಂಯಮ ಎಂಬ ಕೋಟೆಯನ್ನು ಭೀತಿಸಬಲ್ಲ ಪಡೆಯುದರೆ, ಕಪಟ ನಾಟಕ ಸೂತ್ರಧಾರಿಯಾದ ಪ್ರಿಯತಮನ ರಮಿಸುವ ಮೇಲ್ವಾತಗಳಲ್ಲವೆ?

புலப்பல் எனச்சென்றேன் புல்லினேன் நெஞ்சம்
கலத்தல் உறுவது கண்டு.   (1259)

ಅವರನ್ನು ದ್ವೇಷಿಸುತ್ತೇನೆಂದುಕೊಂಡು ಅವರಿಂದ ದೂರ ಸಾರಿದೆ; ಆದರೆ ನನ್ನ ಮನಸ್ಸು ಅವರೊಡನೆ ಕೂಡಲು ತವಕಗೊಳ್ಳುತ್ತಿರುವುದನ್ನು ಅರಿತು ಬಿಳಿಸಾರಿ ಅಪ್ಪಿಕೊಂಡೆ.

நிணந்தீயில் இட்டன்ன நெஞ்சினார்க்கு உண்டோ
புணர்ந்தூடி நிற்பேம் எனல்.   (1260)

ಬೆಂಕಿಯಲ್ಲಿ ಕೊಬ್ಬನ್ನು ಇಟ್ಟ ಹಾಗಿರುವ ನನ್ನಂಥ ಹೃದಯವುಳ್ಳವರಿಗೆ ಅವರನ್ನು ಕೂಡಿ, ಮತ್ತೆ ಮುನಿಸಿಕೊಂಡು ಇರ್ಯ್ತ್ತೇನೆಂದು ಹೇಳಿಕೊಳ್ಳುವ ಶಕ್ತಿಯುಂಟೆ.