ಒಬ್ಬರನ್ನೊಬ್ಬರು ಬಯಸುವುದ

வாளற்றுப் புற்கென்ற கண்ணும் அவர்சென்ற
நாளொற்றித் தேய்ந்த விரல்.   (1261)

ನನ್ನ ಕಣ್ಣುಗಳು ಅವರು ಬರುವ ಹಾದಿಯನ್ನು ನಿರೀಕ್ಷಿಸಿ ಕಾಂತಿಗುಂದಿ ಅಂದಗೆಟ್ಟಿವೆ; ಬೆರಳುಗಳು ಅವರು ಹೋದ ದಿನಗಳನ್ನು ಎಣಿಸಿ ಎಣಿಸಿ ಸವೆದುಹೋಗಿವೆ.

இலங்கிழாய் இன்று மறப்பின்என் தோள்மேல்
கலங்கழியும் காரிகை நீத்து.   (1262)

ಸಖೀ, ಕಾದಲರನ್ನು ನಾನಿಂದು ಮರೆತರೆ, ನನ್ನ ತೋಳುಗಳು ಅಂದಗೆಟ್ಟು ಅಲಂಕರಿಸಿರುವ ಆಭರಣಗಳು ಕಳಚಿ ಸಡಿಲಗೊಂಡು ಜಾರುತ್ತವೆ.

உரன்நசைஇ உள்ளம் துணையாகச் சென்றார்
வரல்நசைஇ இன்னும் உளேன்.   (1263)

ನನ್ನ ಪ್ರೀತಿಯನ್ನು ನೆಚ್ಚದೆ, ಯುದ್ಧದಲ್ಲಿ ಗೆಲವನ್ನು ನೆಚ್ಚಿ ಮನೋಬಲವನ್ನೇ ಬೆಂಬಲವಾಗಿಟ್ಟುಕೊಂಡು, ಹೊರ ನಾಡೀಗೆ ಹೋದ ಇನಿಯನ ಪುನರಾಗ ಮನವನ್ನೇ ನಿರೀಕ್ಷಿಸುತ್ತ ಇನ್ನೂ ಉಸಿರು ಹಿಡಿದು ಬದುಕ್ಕಿದ್ದೇನೆ.

கூடிய காமம் பிரிந்தார் வரவுள்ளிக்
கோடுகொ டேறுமென் நெஞ்சு.   (1264)

ನನ್ನನ್ನಗಲಿ ದೂರವಾದವರು, ತುಂಬಿದ ಒಲವಿನೊಡನೆ ಮತ್ತೆ ಬರುವುದನ್ನು ನೆನೆ ನೆನೆದು, ನನ್ನ ಮನಸ್ಸು ಮೇಲೆ ಮೇಲೆ ಉಬ್ಬಿ ನಲಿದಾಡುತ್ತಿದೆ.

காண்கமன் கொண்கனைக் கண்ணாரக் கண்டபின்
நீங்கும்என் மென்தோள் பசப்பு.   (1265)

ಇನಿಯನನ್ನು ನಾನು ಕಣ್ಣು ತಣಿಯುವರೆಗೂ ಕಾಣುವವಳಾಗೆಬೇಕು; ಆಗಲಿ ನನ್ನ ನಳಿದೊಳುಗಳ ಪೇಲವತೆಯು ಮಾಯವಾಗುವುದು.

வருகமன் கொண்கன் ஒருநாள் பருகுவன்
பைதல்நோய் எல்லாம் கெட.   (1266)

ನನ್ನ ಪ್ರಿಯನು ಒಂದು ದಿನ ನನ್ನೆಡೆಗೆ ಬರಲಿ; ನನ್ನ ವಿರಹದ ನೋವೆಲ್ಲ ತೀರುವಂತೆ ನಾನವನ ಪ್ರೇಮಾಮೃತವನ್ನು ಹೀರಿ ಸವಿದು ನಲಿದಾಡುತ್ತೇನೆ!

புலப்பேன்கொல் புல்லுவேன் கொல்லோ கலப்பேன்கொல்
கண்அன்ன கேளிர் விரன்.   (1267)

ನನ್ನ ಕಣ್ಣುಗಳಂತಿರುವ ಪ್ರಿಯತಮನು ಹಿಂತಿರುಗಿ ಬರುವವನಾದರೆ, ಅವನೊಡನೆ ಮುನಿಸಿಕೊಳ್ಳಲೇ, ಅಪ್ಪಿಕೊಳ್ಳಲೇ ಇಲ್ಲವೇ ಎರಡನ್ನೂ ಮಾಡಲೇ?

வினைகலந்து வென்றீக வேந்தன் மனைகலந்து
மாலை அயர்கம் விருந்து.   (1268)

ಅರಸನು ಕಾರ್ಯಮುಖನಾಗಿ ಯುದ್ಧದಲ್ಲಿ ಬೇಗ ಜಯಗಳಿಸಲಿ; ಆ ದಿನದ ಸಂಜೆ, ನಾನು ಮನವಿಯೊಡಗೂಡಿ ಸುಖಸಿ ಸಂಭ್ಯಮದಿಂದ ಔತಣ ನಡೆಸುತ್ತೇನೆ.

ஒருநாள் எழுநாள்போல் செல்லும்சேண் சென்றார்
வருநாள்வைத்து ஏங்கு பவர்க்கு.   (1269)

ದೂರದ ನಾಡಿಗೆ ಹೋಗಿರುವ ಪ್ರಿಯನು ಬರುವ ಕಾಲವನ್ನು ನೆನೆಯುತ್ತೆ ವೇದನೆಗೊಳಗಾದ ನಲ್ಲೆಯರಿಗೆ, ಒಂದು ದಿನವು ಏಳು ದಿನಗಳಂತೆ ಕಳೆಯುವುದು.

பெறின்என்னாம் பெற்றக்கால் என்னாம் உறினென்னாம்
உள்ளம் உடைந்துக்கக் கால்.   (1270)

ವಿರಹ ತಾಪವನ್ನು ತಾಳಲಾರದೆ, ನನ್ನ ಪ್ರಿಯತಮೆಯು ಹೃದಯವು ಒಡೆದು ಅಸುವಳಿದರೆ ಅವಳನ್ನು ಪಡೆದು, ಕೂಡಿ ಸುಖಿಸಿ ಅನುಭವಿಸುವುದೇನು?