ಸಭಾ ಕಂಪನವಿಲ್ಲದಿರುದು

வகையறிந்து வல்லவை வாய்சோரார் சொல்லின்
தொகையறிந்த தூய்மை யவர்.   (721)

ಮಾತಿನ ಜೋಡಣೆಯನ್ನು ಅರಿತ ಪರಿಶುದ್ಧವಾದ ನಡೆಯುಳ್ಳವರು, ಸಭೆಯ ರೀತಿಯನ್ನು ಅರಿತವರಾಗಿ, ಬಲ್ಲವರ ಸಭೆಯಲ್ಲಿ (ಭೀತಿಯಿಂದ) ಬಾಯಿತಪ್ಪಿ ತಪ್ಪಾಗಿ ಮಾತನಾಡಲಾರರು.

கற்றாருள் கற்றார் எனப்படுவர் கற்றார்முன்
கற்ற செலச்சொல்லு வார்.   (722)

ಕಲಿತವರ (ವಿದ್ವಾಂಸರ) ಮುಂದೆ ತಾವು ಕಲಿತುದನ್ನು ಮನಮುಟ್ಟುವಂತೆ ಹೇಳಬಲ್ಲದವರು, ಜ್ಞಾನಿಗಳಲ್ಲಿ ಜ್ಞಾನಿಗಳೆಂದು ಕರಯಲ್ಪಡುವರು.

பகையகத்துச் சாவார் எளியர் அரியர்
அவையகத்து அஞ்சா தவர்.   (723)

ಯುದ್ಧ ರಂಗದಲ್ಲಿ ಧೈರ್ಯದಿಂದ ಹೋರಾಡಿ ಸಾಯುವವರು (ಲೋಕದಲ್ಲಿ) ಹಲವು ಮುಂದಿ ಇದ್ದಾರೆ; (ಆದರೆ) ಅರಿತವರ ಸಭಯಲ್ಲಿ ಅಂಜದೆ ಮಾತನಾಡಬಲ್ಲವರು ಕೆಲವೇ ಮುಂದಿ.

கற்றார்முன் கற்ற செலச்சொல்லித் தாம்கற்ற
மிக்காருள் மிக்க கொளல்.   (724)

ಕಲಿತವರ ಮುಂದೆ ತಾವು ಕಲಿತುದನ್ನು ಮನಮುಟ್ಟುವಂತೆ ಹೇಳಿ, ಅಪಾರವಾಗಿ ಕಲಿತವರಿಂದ ಮಿಗಿಲಾಗಿ ಜ್ಞಾನವನ್ನು ಕೇಳಿ ತಿಳಿದುಕೊಳ್ಳಬೇಕು.

ஆற்றின் அளவறிந்து கற்க அவையஞ்சா
மாற்றங் கொடுத்தற் பொருட்டு.   (725)

ಬೇರೆ ಅರಸರ ಸಭಯಲ್ಲಿ ಸಭಾಭೀತಿಯಿಲ್ಲದ ಸಮರ್ಪಕವಾದ ಉತ್ತರ ನೀಡಲು, ಯೋಗ್ಯವೆನಿಸಿದ ತರ್ಕ ಗ್ರಂಥಗಳನ್ನು ಅರಿತು ಅಭ್ಯಾಸ ಮಾಡಬೇಕು.

வாளொடென் வன்கண்ணர் அல்லார்க்கு நூலொடென்
நுண்ணவை அஞ்சு பவர்க்கு.   (726)

ವೀರೋಚಿತವಾಗ ದೃಷ್ಟಿಯುಳ್ಲವರಲ್ಲದವರಿಗೆ ಕತ್ತಿಯೊಡನೆ ಏನು ಸಂಬಂಧ? ಸೂಕ್ಷ್ಮಮತಿಗಳ ಸಭೆಗೆ ಅಂಜುವವರಿಗೆ, ಶಾಸ್ತ್ರ ಗ್ರಂಥಗಳೊಡನೆ ಏನು ನಂಟು?

பகையகத்துப் பேடிகை ஒள்வாள் அவையகத்து
அஞ்சு மவன்கற்ற நூல்.   (727)

(ಅರಿತವರ) ಸಭಯಲ್ಲಿ ಅಂಜುವವನ ಶಾಸ್ತ್ರಜ್ಞಾನವು, ಹಗೆಯೊಡನೆ ಹೋರಾಟ ನಡೆಸಲು ಹೋದ ಹೇಡಿಯ ಕೈಯಾಳಗಿನ ಕೂರಲಗಿನಂತೆ.

பல்லவை கற்றும் பயமிலரே நல்லவையுள்
நன்கு செலச்சொல்லா தார்.   (728)

ಚೆನ್ನಾಗಿ ಅರಿತವರ ಸಭಯಲ್ಲಿ ಒಳ್ಳೆಯ ವಿಷಯಗಳನ್ನು (ಕೇಳುವವರ) ಮನಮುಟ್ಟುವಂತೆ ಹೇಳಲಾರದವರು, ಹಲವು ವಿಷಯಗಳನ್ನು ಕಲಿತೂ ಪ್ರಯೋಜನವಿಲ್ಲದವರೇ (ಆಗುತ್ತಾರೆ).

கல்லா தவரின் கடையென்ப கற்றறிந்தும்
நல்லா ரவையஞ்சு வார்.   (729)

ಶಾಸ್ತ್ರಗ್ರಂಥಗಳನ್ನು ಓದಿಬಲ್ಲವರಾದರೂ, ಚೆನ್ನಾಗಿ ಬಲ್ಲವರ ಸಭೆಯಲ್ಲಿ (ಮಾತನಾಡಲು) ಹೆದುರುವವರು, ಕಲಿಯದವರಿಗಿಂತ, ಕಡೆ ಎಂದೆಣಿಸಲ್ಪಡುವರು.

உளரெனினும் இல்லாரொடு ஒப்பர் களன்அஞ்சிக்
கற்ற செலச்சொல்லா தார்.   (730)

ಸಭೆಗೆ ಅಂಜಿ ಮನಮುಟ್ಟುವಂತೆ ಹೇಳಲು ಅಶಕ್ತರಾದವರು, ಬದುಕ್ಕಿದ್ದೂ ಸತ್ತವರ ಸಮಾನರು.