ವಿರಹದಿಂದ ಕೃಶವಾಗಿ ದುಃಖಿ

மறைப்பேன்மன் யானிஃதோ நோயை இறைப்பவர்க்கு
ஊற்றுநீர் போல மிகும்.   (1161)

ಈ ಕಾಮವೇದನೆಯನ್ನು, ಇತರರು ತಿಳಿಯಬಾರದೆಂದು ಮರೆಸುತ್ತಿದ್ದೇನೆ. ಆದರೆ ಇದು ಊಟೆಯ ನೀರಿನಂತೆ ತೋಡುತ್ತ ತೋಡುತ್ತ ಒಸರುತ್ತಲೇ ಹೋಗುವುದು.

கரத்தலும் ஆற்றேன்இந் நோயைநோய் செய்தார்க்கு
உரைத்தலும் நாணுத் தரும்.   (1162)

ಈ ಪ್ರಣಯ ಯಾತನೆಯನ್ನು ನನ್ನಿಂದ ಬಚ್ಚಿಡಲೂ ಸಾಧ್ಯವಾಗುತ್ತಿಲ್ಲ; ನನಗೆ ಯಾತನೆಯುಂಟು ಮಾಡಿದ ಇನಿಯನಿಗೆ ಹೇಳಿಕೊಳ್ಳುವೆ ಎಂದರೆ ನಾಚಿಕೆ ಅಡ್ಡಲಾಗಿ ಬರುತ್ತಿದೆ.

காமமும் நாணும் உயிர்காவாத் தூங்கும்என்
நோனா உடம்பின் அகத்து.   (1163)

ವೇದನೆಯನ್ನು ತಾಳಲಾರದೆ (ತತ್ತರಿಸುತ್ತಿರುವ) ನನ್ನ ಶರೀರದಲ್ಲಿ, ಪ್ರಾಣವೇ ಕಾವಡಿ ಕೋಲಾಗಿ, ಕಾಮ ವೇದನೆಯೂ ನಾಚಿಕೆಯೂ ತುಯ್ಯಲಾಡುತ್ತಿದೆ.

காமக் கடல்மன்னும் உண்டே அதுநீந்தும்
ஏமப் புணைமன்னும் இல்.   (1164)

ಕಾಮ ವೇದನೆಯೆಂಬ ಕಡಲು ಮಾತ್ರ ಮೊರೆಯುತ್ತಿದೆ. ಆದರೆ ಅದನ್ನು ದಾಟಿ ಸುರಕ್ಷಿತವಾಗಿ ಕೊಂಡೊಯ್ಯುವ ನಾವೆಯೇ ಇಲ್ಲವಾಗಿದೆ.

துப்பின் எவனாவர் மன்கொல் துயர்வரவு
நட்பினுள் ஆற்று பவர்.   (1165)

ಪ್ರೇಮದಿಂದಲೇ ದುಃಖವನ್ನು ತಂದೊಡ್ಡಬಲ್ಲವರು ಹಗೆತನದಲ್ಲಿ ಏನು ತಾನೆ ಮಾಡಲಾರರು?

இன்பம் கடல்மற்றுக் காமம் அஃதடுங்கால்
துன்பம் அதனிற் பெரிது.   (1166)

ಕಾಮವು ಸುಖವುಂಟು ಮಾಡುವಾಗ ಅದರ ಸುಖ ಕಡಲಿನಂತೆ; ಅದು ಸಂಕಟದಲ್ಲಿ ಸಿಲುಕಿಸುವಾಗ ಅದರ ದುಃಖವು ಕಡಲಿಗಿಂತ ಮಿಗಿಲು.

காமக் கடும்புனல் நீந்திக் கரைகாணேன்
யாமத்தும் யானே உளேன்.   (1167)

ಕಾಮವೆನ್ನುವ ಕಡು ಪ್ರವಾಹವನ್ನು ಈಜಿಯೂ ಅದರ ತೀರವನ್ನು ನಾನು ಕಾಣಲಾರಳಾಗಿದ್ದೇನೆ; ನಟ್ಟೆರುಳಿನಲ್ಲೂ ನಾನು ಉಸಿರೊಡನೆ ಏಕಾಂಗಿಯಾಗಿದ್ದೇನೆ.

மன்னுயிர் எல்லாம் துயிற்றி அளித்திரா
என்னல்லது இல்லை துணை.   (1168)

ಪಾಪ! ಈ ರಾತ್ರಿಯು ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ಸುಖ ನಿದ್ರಯಿತ್ತು ತಾನು ಮಾತ್ರ ಎಚ್ಚರವಾಗಿದೆ! ಅದಕ್ಕೆ ನಾನಲ್ಲದೆ ಬೇರೆ ಸಂಗಾತಿ ಇಲ್ಲ!

கொடியார் கொடுமையின் தாம்கொடிய விந்நாள்
நெடிய கழியும் இரா.   (1169)

ಈ ವಿರಹದ ದಿನಗಳಲ್ಲಿ ದೀರ್ಘವಾಗಿ ಕಾಣುವ ಈ ಇರುಳು ನಿರ್ದಯನಾದ ನನ್ನಿನಿಯನ ಕಾಠಿಣ್ಯಕ್ಕಿಂತ ಹೆಚ್ಚು ಕಠಿಣವಾಗಿ ವರ್ತಿಸುತ್ತಿದೆ!

உள்ளம்போன்று உள்வழிச் செல்கிற்பின் வெள்ளநீர்
நீந்தல மன்னோஎன் கண்.   (1170)

ಮನಸ್ಸು ಹೇಗೋ ಹಾಗೆ ಕಣ್ಣುಗಳೂ ಪ್ರಿಯತಮನಿರುವೆಡೆಗೆ ವೇಗವಾಗಿ ತಲುಪುವುದಾದರೆ, (ಅಗಲಿಕೆಯ) ಕಣ್ಣೀರ ಹೊನಲಿನಲ್ಲಿ ಅವು ಈಜಬೇಕಿಲ್ಲ.