ಏಕಾಂತ ದುಃಖ

தாம்வீழ்வார் தம்வீழப் பெற்றவர் பெற்றாரே
காமத்துக் காழில் கனி.   (1191)

ತಾವು ಪ್ರೀತಿಸಿದ ಇನಿಯರ ಪ್ರೇಮವನ್ನು ಪಡೆದ ಕಾಮಿನಿಯರು, ಕಾಮ ವೇದನೆಯೆಂಬ ಬೀಜವಿಲ್ಲದ ಹಣ್ಣನ್ನು ಸವಿದ ಅದೃಷ್ಟಶಾಲಿಗಳು.

வாழ்வார்க்கு வானம் பயந்தற்றால் வீழ்வார்க்கு
வீழ்வார் அளிக்கும் அளி.   (1192)

ಒಲಿದ ನೆಲ್ಲೆಗೆ ಪ್ರಿಯತಮನು ಒಲಿದು ಅರ್ಪಿಸುವ ಪ್ರೀತಿಯು, ತನ್ನ ನಿರೀಕ್ಷೆಯಲ್ಲಿ ಬಾಳುವ ಮಾನವ ಕುಲಕ್ಕೆ ಮಳೆ ಸುಖ ನೀಡಿದಂತೆ.

வீழுநர் வீழப் படுவார்க்கு அமையுமே
வாழுநம் என்னும் செருக்கு.   (1193)

ತಾವೊಲಿದ ಇನಿಯರಿಂದ ಅನುರಾಗದ ಸುಖ ಪಡೆದ ಕಾಮಿನಿಯರಿಗೆ ಮಾತ್ರ ತಾವು ಕೂಡಿ ಬಾಳಿ ಸುಖಿಸುತ್ತೇವೆಂಬ ಗರ್ವವಿರುತ್ತದೆ.

வீழப் படுவார் கெழீஇயிலர் தாம்வீழ்வார்
வீழப் படாஅர் எனின்.   (1194)

ತಾವೊಲಿದ ಇನಿಯನ ಅನುರಾಗಕ್ಕೆ ಪಾತ್ರರಾಗದ ಪ್ರೇಯಸಿಯರು ಪತಿವ್ರತೆಯರಿಂದ ಪ್ರಶಂಸೆಗೆ ಪಾತ್ರರಾದರೂ ನತದೃಷ್ಟರೇ!

நாம்காதல் கொண்டார் நமக்கெவன் செய்பவோ
தாம்காதல் கொள்ளாக் கடை.   (1195)

ನನು ಮೆಚ್ಚಿ ಒಲಿದವನು ನನ್ನನ್ನು ಮೆಚ್ಚಿ ಒಲಿಯದಿದ್ದರೆ ಅವನು ನಮಗೇನು ಸಂತೋಷ ಕೊಡಬಲ್ಲನು?

ஒருதலையான் இன்னாது காமம்காப் போல
இருதலை யானும் இனிது.   (1196)

ಕಾಮವು ಒಂದು ಪಕ್ಕವಾಗಿದ್ದರೆ, ದುಃಖವುಂಟು ಮಾಡೂವುದು. ಕಾವಡಿಯ ಭಾರದಂತೆ ಎರಡು ಪಕ್ಕದಲ್ಲೂ ಸಮವಾಗಿ ಇದ್ದರೆ ಅದು ಸವಿಯುಂಟು ಮಾಡೂವುದು.

பருவரலும் பைதலும் காணான்கொல் காமன்
ஒருவர்கண் நின்றொழுகு வான்.   (1197)

ಕಾಮನು ಒಬ್ಬರ ಪಕ್ಷದಲ್ಲಿಯೇ ನೆಲೆಯಾಗಿ ನಿಂತು ನೋವು ವ್ಯರ್ಥಗಳನ್ನು ತಂದೊಡ್ಡುತ್ತಿರುವನು! ಅದು ಅವನಿಗೆ ಗೊತಾಗದಷ್ಟು ನಿರ್ದಯನೆ ಅವನು?

வீழ்வாரின் இன்சொல் பெறாஅது உலகத்து
வாழ்வாரின் வன்கணார் இல்.   (1198)

ಇನಿಯನ ಇನಿಮಾತುಗಳನ್ನು ಕಿವಿಯಾರ ಕೇಳದೆ ಲೋಕದಲ್ಲಿ ಬಾಳುವ ಕಾಮಿನಿಯರಿಗಿಂತ ಕಲ್ಲೆದೆಯವರು ಬೇರಿಲ್ಲ!

நசைஇயார் நல்கார் எனினும் அவர்மாட்டு
இசையும் இனிய செவிக்கு.   (1199)

ನನ್ನ ಪ್ರೀಯಿಗೆ ಪಾತ್ರರಾದವರು ನನ್ನನ್ನು ಪ್ರೀತಿಸದಿದ್ದರೂ ಅವರ ಪರವಾದ ಹೊಗಳಿಕೆಯು ನನ್ನ ಕಿವಿಗೆ ಇಂಪಾಗಿರುವುದು.

உறாஅர்க்கு உறுநோய் உரைப்பாய் கடலைச்
செறாஅஅய் வாழிய நெஞ்சு.   (1200)

ಪ್ರೀತಿರಹಿತರಾಗಿ ನಿನ್ನನ್ನಗಲಿ ದೂರ ಹೋದವನ ಬಳಿ ನಿನ್ನ ವೇದನೆಯನ್ನು ಹೇಳಿಕೊಳ್ಳಲು ಆತುರಪಡುತ್ತಿರುವೆಯಲ್ಲ ಓ ಮನಸ್ಸೆ! ಅದಕ್ಕಿಂತ ನಿನ್ನ ದುಃಖವನ್ನು ಹೆಚ್ಚಿಸುವ ಕಡಲನ್ನೆ ಅರಿಸುವುದು ಒಳಿತು!