ಆಲಿಂಗನ ಸುಖ

கண்டுகேட்டு உண்டுயிர்த்து உற்றறியும் ஐம்புலனும்
ஒண்தொடி கண்ணே உள.   (1101)

ನೋಡುವುದು ಕೇಳುವುದು ರುಚಿ ನೋಡುವುದು, ವಾಸನೆಯನುಭವಿಸುವುದು, ಮುಟ್ಟಿ ನೋಡುವುದು ಸ್ಪರ್ಷ ಈ ಐಂದಿಂದ್ರಿಯಗಳ ಸುಖವೂ ಈ ಮಿನುಗುವ ಬಳೆಗಳ ಚೆಲುವೆಯಲ್ಲಿ ಇವೆ.

பிணிக்கு மருந்து பிறமன் அணியிழை
தன்நோய்க்குத் தானே மருந்து.   (1102)

ಸಾಮಾನ್ಯವಾಗಿ ನೋವುಗಳಿಗೆ ಮದ್ದು ಬೇರೆ ಬಗೆಯಾದವು. ಆದರೆ ಒಡವೆಗಳಿಂದ ಅಲಂಕೃತಳಾದ ಈ ಚೆಲುವೆಯಾದರೋ ತನ್ನಿಂದ ಉಂಟಾದ ನೋವಿಗೆ ತಾನೇ ಮದ್ದಾಗಿ ಉಪಶಮನ ಮಾಡುವಳು.

தாம்வீழ்வார் மென்றோள் துயிலின் இனிதுகொல்
தாமரைக் கண்ணான் உலகு.   (1103)

ತಾವರೆಗಣ್ಣಿನ ವಿಷ್ಣುವಿನ ಲೋಕವು ತಾವು ಒಲಿದ ಎಳೆವೆಣ್ಣಿನ ಮೃದು ತೋಳ್ಗಳ ತೆಕ್ಕೆಯಲ್ಲಿನ ನಿದ್ದೆಯ ಸುಖಕ್ಕಿಂತ ಇನಿದಾದುದೆ?

நீங்கின் தெறூஉம் குறுகுங்கால் தண்ணென்னும்
தீயாண்டுப் பெற்றாள் இவள்.   (1104)

ಅಗಲಿದರೆ ಸುಡುವುದು, ಸಮೀಪಿಸಿದರೆ ತಂಪೆರೆವುದು ಎನ್ನುವ ಈ ಕಿಚ್ಚನ್ನು ಎಲ್ಲಿಂದ ಪಡೆದಳೋ ಈ ಎಳೆವೆಣ್ಣು?

வேட் ட பொழுதின் அவையவை
போலுமே தோட் டார் கதுப்பினாள் தோள்.   (1105)

ಬಯಸಿದ ವಸ್ತುಗಳು ತಾವಾಗಿಯೇ ಬಂದು ಸೇರಿ ಸುಖ ಕೋಡುವಂತೆ ಈ ಕುಸುಮ ಶೋಭಿತ ಕೇಶರಾಶಿಯುಳ್ಳ ಕಾಮಿನಿಯ ತೋಳುಗಳು ನನಗೆ ಸುಖ ನೀಡುತ್ತಿವೆ.

உறுதோறு உயிர்தளிர்ப்பத் தீண்டலால் பேதைக்கு
அமிழ்தின் இயன்றன தோள்.   (1106)

ಪ್ರತಿ ಸಾರಿಯ ಅಪ್ಪುಗೆಯಲ್ಲೂ ನನ್ನ ಪ್ರಾಣವನ್ನು ಚಿಗುರಿಸುವ ಸ್ಪರ್ಶದಿಂದ ಹೊಸ ಚೇತನವನ್ನು ನೀಡುವುದರಿಂದ, ಈ ಮುಗ್ದೆಯ ತೋಳುಗಳು ಅಮೃತದಿಂದ ಕಡೆದಂತೆ ತೋರುತ್ತಿವೆ.

தம்மில் இருந்து தமதுபாத்து உண்டற்றால்
அம்மா அரிவை முயக்கு.   (1107)

ಅಂದವಾದ ಹೇಮ ವರ್ಣದ ಈ ಬೆಡಗಿಯ ಅಪ್ಪುಗೆಯ ಸುಖವು ತಮ್ಮದೇ ಆದ ಮನೆಯಲ್ಲಿ ಇದ್ದು ಇತರರೊಡನೆ ತಾವು ಸಂಪಾದಿಸಿದ ವಸ್ತುಗಳನ್ನು ಹಂಚಿ ಕೊಂಡು ಅನುಭವಿಸಿದ ಆನಂದವನ್ನು ಹೋಲುವುದು.

வீழும் இருவர்க்கு இனிதே வளியிடை
போழப் படாஅ முயக்கு.   (1108)

(ಉಸಿರಾಡುವ) ಗಾಳಿಯೂ ಹಾದು ಹೋಗಲು ಎಡೆ ಇಲ್ಲದಂಥ ಬಿಗಿಯಪ್ಪುಗೆಯು, ಮೆಚ್ಚಿದ ಪ್ರಣಯಿಗಳಿಬ್ಬರಿಗೂ ಮಧುರವೆನಿಸುವುದು.

ஊடல் உணர்தல் புணர்தல் இவைகாமம்
கூடியார் பெற்ற பயன்.   (1109)

ಪ್ರಣಯ ಕಲಹ, ಮತ್ತೆ ಸಮಾಧಾನ, ಆನಂತರ ಪರಸ್ಪರ ಅಪ್ಪುಗೆಯಲ್ಲಿ ಕೂಡುವುದು- ಇವು ಪ್ರಣಯ ಜೀವಿಗಳು ಪಡೆದ ಫಲವಾಗಿರುವುದು.

அறிதோறு அறியாமை கண்டற்றால் காமம்
செறிதோறும் சேயிழை மாட்டு.   (1110)

ಓದಿಕೊಂಡಾಗಲೆಲ್ಲ ಜ್ಞಾನವು ಹೆಚ್ಚು ಹೆಚ್ಚುತ್ತ ಮುನ್ನಿನ ಅಜ್ಞಾನ ತೋರುವಂತೆ, ಶ್ರೇಷ್ಠ ಆಭರಣಗಳನ್ನು ತೊಟ್ಟ ಈ ಎಳೆವೆಣ್ಣನ್ನು ಸೇರುವಾಗಲೆಲ್ಲ ಪ್ರಣಯ ಭಾವವು ವ್ಯಕ್ತವಾಗುತ್ತ ಹೋಗುವುದು.