ಲಜ್ಜಾ ತ್ಯಾಗವನ್ನು ಪ್ರಕಟ

காமம் உழந்து வருந்தினார்க்கு ஏமம்
மடலல்லது இல்லை வலி.   (1131)

ಇನಿಯಳಲ್ಲಿ ಕಾಮ ಸುಖವನ್ನು ಅನುಭವಿಸಲಾರದೆ ಸಂಕಟಪಟ್ಟವರಿಗೆ ರಕ್ಷಣೆಯಾದ ತಾಳೆಗುದುರೆಯೇರುವದಲ್ಲದೆ ನನಗೆ ಬೇರೆ ಆಶ್ರಯವಿಲ್ಲ.

நோனா உடம்பும் உயிரும் மடலேறும்
நாணினை நீக்கி நிறுத்து.   (1132)

(ನಲ್ಲೆಯ ವಿರಹ ತಾಪದ ) ನೋವನ್ನು ತಾಳಲಾರದೆ ನನ್ನ ಒಡಲೂ ಪ್ರಾಣವೂ ನಾಚಿಕೆಯನ್ನು ತೋರೆದು ತಾಳೆಗುದುರೆಯನ್ನು ಏರುವುದು.

நாணொடு நல்லாண்மை பண்டுடையேன் இன்றுடையேன்
காமுற்றார் ஏறும் மடல்.   (1133)

ಹಿಂದೆ ನಾನು ಲಜ್ಜೆಯಿಂದ ಕೂಡಿದ ಪುರುಷತ್ವವನ್ನು ಆಶ್ರಯಿಸಿದ್ದು (ಪ್ರಣಯಿನಿಯ ವಿರಹದಿಂದ ಸಂಕಟಪಡುತ್ತಿರುವ) ಇಂದು ಕಾಮಾತಿಶಯ ಹೊಂದವವರು ಏರುವ ತಾಳೆಗುದುರೆಯನ್ನು ಆಶ್ರಯಿಸಿದ್ದೇನೆ.

காமக் கடும்புனல் உய்க்கும் நாணொடு
நல்லாண்மை என்னும் புணை.   (1134)

ಲಜ್ಜೆಯಿಂದ ಕೂಡಿದ ನನ್ನ ಪುರುಷತ್ವವೆಂಬ ನಾವೆಯನ್ನು ಕಾಮವೆನ್ನುವ ಕಡು ಪ್ರವಾಹವು ಸೆಳೆದುಕೊಂಡು ಹೋಗುತ್ತಿದೆ.

தொடலைக் குறுந்தொடி தந்தாள் மடலொடு
மாலை உழக்கும் துயர்.   (1135)

ಮಾಲೆಯಂತೆ ವರಸೆಯಾಗಿ ಕಿರು ಬಳೆಗಳನ್ನು ತೊಟ್ಟ ಈ ಚೆಲುವೆ ನನಗೆ ತಾಳೆಗುದುರೆಯೊಂದಿಗೆ ಸಂಧ್ಯಾ ಸಮಯದಲ್ಲಿ ದುಃಖಿಸುವ ಪರಿಸ್ಥಿತಿಯನ್ನು ತಂದೊಡ್ಡಿದಳು.

மடலூர்தல் யாமத்தும் உள்ளுவேன் மன்ற
படல்ஒல்லா பேதைக்கென் கண்.   (1136)

ಈ ಎಳೆವೆಣ್ಣಿಗಾಗಿ ಬಳಲಿ ನನ್ನ ಕಣ್ಣುಗಳು ಮುಚ್ಚುವುದಿಲ್ಲ. ಅದರಿಂದ ನಡು ರಾತ್ರಿಯಲ್ಲೂ ತಾಳೆಗುದುರೆಯನ್ನು ಏರುವುದನ್ನು ನೆನೆಯುತ್ತಿರುತ್ತೇನೆ.

கடலன்ன காமம் உழந்தும் மடலேறாப்
பெண்ணின் பெருந்தக்க தில்.   (1137)

ಕಡಲಿನಂತೆ ಕಾಮ ವೇದನೆಯನ್ನು ಅನುಭವಿಸಿಯೂ ತಾಳೆಗುದುರೆಯನ್ನು ಏರದಿರುವ ಹೆಣ್ಣಿನ ಜನ್ಮಕ್ಕಿಂತಲೂ ಮಿಗಿಲಾದುದು (ಈ ಲೋಕದಲ್ಲಿ) ಬೇರೆ ಇಲ್ಲ.

நிறையரியர் மன்அளியர் என்னாது காமம்
மறையிறந்து மன்று படும்.   (1138)

ಹೆಂಗಸರು ಸ್ತ್ರೀ ಸಹಜವಾದ ಲಜ್ಜೆತಾಂಬಿ ಹೆಣ್ತನವನ್ನು ಕಾಪಾಡಿಕೊಳ್ಳುವವರು, ತುಂಬ ಕರುಣೆಗೆ ಪಾತ್ರರು ಎಂದು ನೆನೆಯದೆ ಕಾಮವು ತನ್ನನ್ನು ಮರೆ ಮಾಚದೆ, ಬಹಿರಂಗವಾಗಿ ತೋರ್ಪಡಿಸಿಕೊಳ್ಳುವುದು.

அறிகிலார் எல்லாரும் என்றேஎன் காமம்
மறுகின் மறுகும் மருண்டு.   (1139)

ತಾನು ಅಡಗಿದ್ದರೆ ಎಲ್ಲರೂ ತನ್ನನ್ನು ತಿಳಿಯಲಾರರು ಎಂದುಕೊಂಡೇ ನನ್ನ ಕಾಮವು ಊರಿನ ಬೀದಿಯಲ್ಲಿ ಭ್ರಮಿಸಿ ಅಲೆದಾಡುತ್ತಿದೆ.

யாம்கண்ணின் காண நகுப அறிவில்லார்
யாம்பட்ட தாம்படா ஆறு.   (1140)

ನಾನು ಅನುಭವಿಸುತ್ತಿರುವ ವಿರಹವೇದನೆಯನ್ನು ತಾವು ಕಂಡರಿಯದಿರುವುದರಿಂದಲೇ, ನನ್ನ ಕಣ್ಣೆದುರೇ ಕೆಲವರು ನನ್ನನ್ನು ಕಂಡು ನಗುತ್ತಿದ್ದಾರೆ! ಮೂರ್ಖರು!