ಅರಿತು ಕಾರ್ಯಕ್ಕೆ ನೇಮಿಸು

நன்மையும் தீமையும் நாடி நலம்புரிந்த
தன்மையான் ஆளப் படும்.   (511)

ಒಳ್ಳೆಯದನ್ನೂ ಕೆಟ್ಟದನ್ನೂ ವಿಚಾರಮಾಡಿ ಒಳ್ಳೆಯ ವಿಚಾರಗಳಲ್ಲಿ ಮಾತ್ರ ಅಭಿಲಾಷೆ ತೋರುವವನನ್ನು (ಅರಸನ ಕಾರ್ಯಕ್ಕೆ ಸಹಾಯಕನಾಗಿ) ನೇಮಿಸಬೇಕು.

வாரி பெருக்கி வளம்படுத்து உற்றவை
ஆராய்வான் செய்க வினை.   (512)

ಐಶ್ವರ್ಯ (ಹಣ) ಬರುವ ಮಾರ್ಗವನ್ನು ಹೆಚ್ಚಿಸಿ, ಅದನ್ನು ಅಭಿವೃದ್ದಿಪಡಿಸಿ, ಬರುವ ಕಂಟಕಗಳನ್ನು ಪರಿಶೀಲಿಸಿ, ನೀಗಿಸಬಲ್ಲವನೆ ಕಾರ್ಯಮುಖನಾಗಬೇಕು.

அன்பறிவு தேற்றம் அவாவின்மை இந்நான்கும்
நன்குடையான் கட்டே தெளிவு.   (513)

ಪ್ರೀತಿ, ಅರಿವು, ದೃಢ ನಿರ್ಧಾರ, ಆಶೆ ಇಲ್ಲದಿರುವಿಕೆ- ಈ ನಾಲ್ಕು ಒಳ್ಳೆಯ ಗುಣಗಳು ಇರುವವನಲ್ಲೇ (ಅರಸನಾದವನು) ನಂಬಿಕೆ ಇರಿಸಬೇಕು.

எனைவகையான் தேறியக் கண்ணும் வினைவகையான்
வேறாகும் மாந்தர் பலர்.   (514)

ಹಲವು ಬಗೆಯಿಂದ ಪರೀಕ್ಷಿಸಿ ನಂಬಿ, ಉದ್ಯೋಗಕ್ಕೆ ತೊಡಗಿಸಿದ ಮೇಲೂ ಕಾರ್ಯದ ಹಾದಿ ತಪ್ಪಿಸುವ ಜನರು ಈ ಲೋಕದಲ್ಲಿ ಹಲವರಿದ್ದಾರೆ.

அறிந்தாற்றிச் செய்கிற்பாற்கு அல்லால் வினைதான்
சிறந்தானென்று ஏவற்பாற் றன்று.   (515)

ಕೆಲಸವನ್ನು ಚೆನ್ನಾಗಿ ತಿಳಿದು ಸಮರ್ಥವಾಗಿ ಎದುರಿಸಬಲ್ಲವನಿಗಲ್ಲದೆ, ತನಗೆ ಬೇಕಾದವನೆಂದು ಒಬ್ಬನನ್ನು ಆ ಕೆಲಸಕ್ಕೆ ನೇಮಿಸಬಾರದು.

செய்வானை நாடி வினைநாடிக் காலத்தோடு
எய்த உணர்ந்து செயல்.   (516)

ಕಾರ್ಯ ಮಾಡುವವನ (ಸ್ವಭಾವ) ವನ್ನು ಪರೀಕ್ಷಿಸಿ, ಕಾರ್ಯದ ಸ್ವಭಾವವನ್ನು ಪರೀಕ್ಷಿಸಿ, ತಕ್ಕ ಕಾಲವನ್ನು ತಿಳಿದುಕೊಂಡು ಕಾರ್ಯೋನ್ಮುಖವಾಗಬೇಕು.

இதனை இதனால் இவன்முடிக்கும் என்றாய்ந்து
அதனை அவன்கண் விடல்.   (517)

ಈ ಕಾರ್ಯವನ್ನು ಈ ಸಾಧನದಿಂದ ಇಂಥವನು ಮುಗಿಸಬಲ್ಲನು ಎಂಬುದನ್ನು ಪರಿಶೀಲಿಸಿದ ಮೇಲೆ ಆ ಕೆಲಸವನ್ನು ಅವನಿಗೆ ಒಪ್ಪಿಸಬೇಕು.

வினைக்குரிமை நாடிய பின்றை அவனை
அதற்குரிய னாகச் செயல்.   (518)

(ಒಬ್ಬನನ್ನು) ಒಂದು ಕೆಲಸವನ್ನು ಮಾಡಲು ಯೋಗ್ಯನೆಂದು ಪರಿಶೀಲಿಸಿದ ಮೇಲೆ ಅವನನ್ನು ಅದಕ್ಕೆ ಅರ್ಹನಾಗುವಂತೆ ಬೆಳೆಯಲು ಬಿಡಬೇಕು.

வினைக்கண் வினையுடையான் கேண்மைவே றாக
நினைப்பானை நீங்கும் திரு.   (519)

ಕೈಕೊಂಡ ಕೆಲಸದಲ್ಲಿ ಯಾವಾಗಲೂ ಪ್ರಯತ್ನ ಪಡುವವನ ಸ್ನೇಹವನ್ನು ತಪ್ಪಾಗಿ ತಿಳಿಯುವ ಅರಸನನ್ನು ಸಿರಿಬಿಟ್ಟು ತೊಲಗುತ್ತದೆ.

நாடோறும் நாடுக மன்னன் வினைசெய்வான்
கோடாமை கோடா துலகு.   (520)

ಕೆಲಸ ಮಾಡುವವನು ನೇರವಾಗಿರುವವರೆಗೆ ಲೋಕವೂ ನೇರವಾಗಿರುತ್ತದೆ; ಅರಸನಾದವನು ಯಾವಾಗಲೂ ತನ್ನ ಸೇವಕರ ನಡವಳಿಕೆಯನ್ನು ಪರೀಕ್ಷಿಸಬೇಕು.