ಕಾಲ ಪರಿಜ್ಞಾನ

பகல்வெல்லும் கூகையைக் காக்கை இகல்வெல்லும்
வேந்தர்க்கு வேண்டும் பொழுது.   (481)

ಕಾಗೆಯು (ತನಗಿಂತ ಬಲಶಾಲಿಯಾದ) ಗೂಬೆಯನ್ನು ಹಗಲು ವೇಳೆ ಗೆದ್ದುಬಿಡುತ್ತದೆ. ಅದೇ ರೀತಿ ತಮ್ಮ ಶತ್ರುಗಳನ್ನು ಗೆಲ್ಲಬಯಸುವ ಅರಸರು ಸೂಕ್ತ ವೇಳೆಗಾಗಿ ಕಾಯಬೇಕು.

பருவத்தோடு ஒட்ட ஒழுகல் திருவினைத்
தீராமை ஆர்க்குங் கயிறு.   (482)

ಸೂಕ್ತ ಸಮಯವರಿತು ಕಾರ್ಯಸಾಧಿಸಲು ಯತ್ನಿಸಬೇಕು; ಅದೇ ಯಶಸ್ಸು ಜಾರಿಕೊಳ್ಳದಂತೆ ಬಂಧಿಸುವ ಪಾಶವಾಗುವುದು.

அருவினை யென்ப உளவோ கருவியான்
காலம் அறிந்து செயின்.   (483)

ಸೂಕ್ತ ಕಾಲವನ್ನು ಅರಿತು, ತಕ್ಕ ಸಾಧನಗಳೊಂದಿಗೆ, ಕೈಗೊಂಡ ಕಾರ್ಯವನ್ನು ನಿರ್ವಹಿಸಿದಲ್ಲಿ, ಅರಸನಾದವನಿಗೆ ಕಠಿಣವಾದ ಕಾರ್ಯವೆಂಬುದು ಉಂಟೆ?

ஞாலம் கருதினுங் கைகூடுங் காலம்
கருதி இடத்தாற் செயின்.   (484)

ತಕ್ಕ ಕಾಲವನ್ನು ತಿಳಿದು, ತಕ್ಕ ಸ್ಥಳದಲ್ಲಿ ಕಾರ್ಯವನ್ನು ನಡೆಸಿದರೆ, ಲೋಕವೇ ತನ್ನದಾಗಬೇಕೆಂದು ಬಯಸಿದರೂ ಅದು ಕೈಗೊಡುತ್ತದೆ.

காலம் கருதி இருப்பர் கலங்காது
ஞாலம் கருது பவர்.   (485)

ಲೋಕವನ್ನೇ ಜಯಿಸಲು ಇಚ್ಚಿಸುವವರು, ತಮ್ಮ ಮನಸ್ಸನ್ನು ಚಂಚಲ ಗೊಳಿಸದೆ, ತಕ್ಕ ವೇಳೆಯನ್ನು ನಿರೀಕ್ಷಿಸುತ್ತ ಕಾಯುವರು.

ஊக்க முடையான் ஒடுக்கம் பொருதகர்
தாக்கற்குப் பேருந் தகைத்து.   (486)

ಹೋರಾಡಲು ಸಿದ್ದವಾಗ ತಗರು, ತಾಗುವುದಕ್ಕೆ ಮುಂಚೆ, ಹಿಂದ ಸರಿಯುವಂತೆ, ಶಕ್ತಿಯುಳ್ಳವನು ಕಾಲವನ್ನು ನಿರೀಕ್ಷಿಸಿ ಅಡಗಿ ಕಾಯುತ್ತಾನೆ.

பொள்ளென ஆங்கே புறம்வேரார் காலம்பார்த்து
உள்வேர்ப்பர் ஒள்ளி யவர்.   (487)

ಸೂಕ್ಷ್ಮವಾದ ಅರಿವುಳ್ಳವರು, (ಹಗೆಗಳು ಮಾಡಿದ ಕೆಡುಕಿಗೆ) ಒಡನೆಯೇ ಬಹಿರಂಗವಾಗಿ ಕೋಪಿಸಿಕೊಳ್ಳದೆ, ತಕ್ಕ ಕಾಲವನ್ನು ಎದುರು ನೋಡುತ್ತ ಮನಸ್ಸಿನಲ್ಲೇ ಅದನ್ನು ಅಡಗಿಸಿಕೊಳ್ಳುವರು.

செறுநரைக் காணின் சுமக்க இறுவரை
காணின் கிழக்காம் தலை.   (488)

ಹಗೆಗಳನ್ನು ಕಂಡಾಗ, ತಾಳಿಕೊಂಡು ನಡೆಯಬೇಕು. ಆ ಹಗೆಗಳ ಅಂತ್ಯಕಾಲ ಬಂದಾಗ ಅವರ ತಲೆ (ತಾನಾಗಿಯೇ) ಕೆಳಬಾಗುತ್ತದೆ.

எய்தற் கரியது இயைந்தக்கால் அந்நிலையே
செய்தற் கரிய செயல்.   (489)

ದುರ್ಲಭವಾದ ಕಾಲವು ಒದಗಿಬಂದಾಗ, ಅದರ ಲಾಭವನ್ನು ಪಡೆದುಕೊಂಡು ಮಾಡಲು ಅಸಾಧ್ಯವಾದ ಕಾರ್ಯಗಳನ್ನೆಲ್ಲ ಮಾಡಿ ಮುಗಿಸಬೇಕು.

கொக்கொக்க கூம்பும் பருவத்து மற்றதன்
குத்தொக்க சீர்த்த இடத்து.   (490)

ತಾಳಿಕೊಂಡಿರಬೇಕಾದ ಸಮಯದಲ್ಲಿ ಕೊಕ್ಕರೆಯಂತೆ ಸಮಾಧಾನಿಯಾಗಿರ ಬೇಕು; ತನಗೆ ಅನುಕೂಲವಾದ ಸಮಯ ಬಂದಾಗ, ಅದೇ ಕೊಕ್ಕರೆಯಂತೆ ಕುಕ್ಕಬೇಕು. (ಎದುರಿಸಬೇಕು)