ಕೀರ್ತಿ

ஈதல் இசைபட வாழ்தல் அதுவல்லது
ஊதியம் இல்லை உயிர்க்கு.   (231)

(ಕಷ್ಟದಲ್ಲಿರುವವರಿಗೆ) ಈವುದು, ಕೀರ್ತಿವಂತನಾಗಿ ಬಾಳುವುದು, ಇವಲ್ಲದೆ ಮಾನವನ ಬಾಳಿನಲ್ಲಿ ಬೇರೆ ಲಾಭವಿಲ್ಲ.

உரைப்பார் உரைப்பவை எல்லாம் இரப்பார்க்கொன்று
ஈவார்மேல் நிற்கும் புகழ்.   (232)

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರ ಕೀರ್ತಿಯನ್ನು ಲೋಕದಲ್ಲಿ ಎಲ್ಲರೂ ಹೋಗುತ್ತಾರೆ.

ஒன்றா உலகத்து உயர்ந்த புகழல்லால்
பொன்றாது நிற்பதொன் றில்.   (233)

ಉನ್ನತವಾದ ಕೀರ್ತಿಯಲ್ಲದೆ, ಲೋಕದಲ್ಲಿ ಪ್ರತ್ಯೇಕವಾಗಿ ನಾಶವಿಲ್ಲದೆ ನೆಲೆ ನಿಲ್ಲುವಂಥ ವಸ್ತು ಬೇರೊಂದಿಲ್ಲ.

நிலவரை நீள்புகழ் ஆற்றின் புலவரைப்
போற்றாது புத்தேள் உலகு.   (234)

ಭೂಮಿಯುದ್ದಕ್ಕೂ, ನಿಡುಗಾಲ ನಿಲ್ಲುವ ಕೀರ್ತಿಯನ್ನು ಪಡೆದವರನ್ನಲ್ಲದೆ ಜ್ಞಾನಿಗಳನ್ನು (ದೇವತೆಗಳನ್ನು) ಕೀರ್ತಿಸದು ದೇವಲೋಕ.

நத்தம்போல் கேடும் உளதாகும் சாக்காடும்
வித்தகர்க் கல்லால் அரிது.   (235)

ಕೀರ್ತಿಯಿಂದ ಗಳಿಸಿದ ಬಡತನ, ಶಾಶ್ವತವಾದ ಕೀರ್ತಿಯೊಡನೆ ಬರುವ ಸಾವು ಬಲ್ಲವರಿಗಲ್ಲದೆ ಬೇರೆಯವರಿಗೆ ಸಾಧ್ಯವಿಲ್ಲ.

தோன்றின் புகழொடு தோன்றுக அஃதிலார்
தோன்றலின் தோன்றாமை நன்று.   (236)

ಹುಟ್ಟಿದರೆ ಹೊಗಳಿಕೆ (ಕೀರ್ತಿ) ಯೊಂದಿಗೆ ಹುಟ್ಟಬೇಕು. ಅದಿಲ್ಲವಾದರೆ ಹುಟ್ಟುವುದಕ್ಕಿಂತ ಹುಟ್ಟದಿರುವುದೇ ಲೇಸು.

புகழ்பட வாழாதார் தந்நோவார் தம்மை
இகழ்வாரை நோவது எவன்   (237)

ಕೀರ್ತಿ ಪಡೆಯುವಂತೆ, ಬಾಳದವರು, ತಮ್ಮ ಕುಂದಿಗೆ ತಾವೇ ನೊಂದು ಕೊಳ್ಳದೆ ತಮ್ಮನ್ನು ತೆಳೆಗುವ ಇತರರ ಮಾತಿಗೆ ನೊಂದುಕೊಳ್ಳುವುದು ಏಕೆ?

வசையென்ப வையத்தார்க் கெல்லாம் இசையென்னும்
எச்சம் பெறாஅ விடின்.   (238)

ತಮ್ಮ ನಂತರ ನಿಡುಗಾಲ ಉಳಿಯುವ ಕೀರ್ತಿ ಸಂತತಿಯನ್ನು ಗಳಿಸದೆ ಬಿಟ್ಟರೆ ಈ ಲೋಕದಲ್ಲಿ ಬಾಳುವವರಿಗೆ ಅದೇ ಕಳಂಕ ಎಂದು ಬಲ್ಲವರು ಹೇಳುತ್ತಾರೆ.

வசையிலா வண்பயன் குன்றும் இசையிலா
யாக்கை பொறுத்த நிலம்.   (239)

ಅಪಕೀರ್ತಿಯ ಶರೀರವನ್ನು ಹೊತ್ತುಕೊಮ್ಡಿರುವ ನೆಲದಲ್ಲಿ ಸಮೃದ್ಧ ಬೆಳೆಯೂ ಕುಂದಿ ನಾಶವಾಗಿ ಹೋಗುವುದು.

வசையொழிய வாழ்வாரே வாழ்வார் இசையொழிய
வாழ்வாரே வாழா தவர்.   (240)

ಅಪಕೀರ್ತಿ ಅಳಿಯುವಂತೆ ಬದುಕುವವರೇ (ನಿಜವಾಗಿ) ಬಾಳುವವರು. ಅದಲ್ಲದೆ, ಕೀರ್ತಿ ಅಳಿಯುವಂತೆ ಬಾಳುವ ಜನರು (ಬದುಕಿದ್ದೂ) ಬಾಳದವರು.