ಸಂಕೇತವನ್ನು ಗ್ರಹಿಸುವುದು

கரப்பினுங் கையிகந் தொல்லாநின் உண்கண்
உரைக்கல் உறுவதொன் றுண்டு.   (1271)

ನೀನು ಹೇಳದೆಯೇ ಮರೆಮಾಚಿದರೂ, ನಿನ್ನದೆಯುಳವು ಮೀರಿ ನಿನ್ನ ಕಾಡೀಗೆ ಕಣ್ಣುಗಳು ಹೇಳಬಯಸುವ ಸಂದೇಶವೊಂದು ಉಂಟು.

கண்ணிறைந்த காரிகைக் காம்பேர்தோட் பேதைக்குப்
பெண்நிறைந்த நீர்மை பெரிது.   (1272)

ಕಣ್ಣುಂಬುವ ಚೆಲುವು, ಬಿದಿರಿನಂಥ ತೋಳುಗಳನ್ನು ಪಡೆದಿರುವ ನನ್ನ ಮುಗುಂದೆಗೆ, ಹೆಣ್ತನವು ತುಂಬಿ ಸೂಸುವ ಗುಣವು ಮೆಗಿಲಾಗಿರುವುದು.

மணியில் திகழ்தரு நூல்போல் மடந்தை
அணியில் திகழ்வதொன்று உண்டு.   (1273)

(ಮಾಲೆಯಾಗಿ ಕೋದ) ರತ್ನಗಳಲ್ಲಿ ಕಾಂತಿ ಹೊಮ್ಮಿಸುವ ನೂಲಿನಂತೆ, ನನ್ನ ಪ್ರೇಯಸಿಯ ಚೆಲುವಿನಲ್ಲಿ ಕೂಡ ಕಾಂತಿ ಸೂಸುವುದೊಂದು ವ್ಯಕ್ತವಾಗುತ್ತಿದೆ.

முகைமொக்குள் உள்ளது நாற்றம்போல் பேதை
நகைமொக்குள் உள்ளதொன் றுண்டு.   (1274)

ಮಿಗಿದ ಮೊಗ್ಗಿನಲ್ಲಿ ಅಡಗಿರುವ ಸುವಾಸನೆಯಂತಿರುವುದೊಂದು ನನ್ನ ಪ್ರೇಯಸಿಯ ನಗೆ ಮೊಗ್ಗಿನಲ್ಲಿ ವ್ಯಕ್ತವಾಗುತ್ತಿದೆ!

செறிதொடி செய்திறந்த கள்ளம் உறுதுயர்
தீர்க்கும் மருந்தொன்று உடைத்து.   (1275)

ಒತ್ತಾಗಿ ಬಳೆಗಳನ್ನು ಧರಿಸಿದ ನನ್ನ ಚೆಲುವೆಯು ತನ್ನ ಭಾವನೆಗಳನ್ನು ಮರೆಸಿ ಮಾಡಿ ಹೋದ ಕಳ್ಳಸನ್ನೆಯಲ್ಲಿ, ನನ್ನ ಅತೀವವಾದ ದುಃಖವನ್ನು ತೀರಿಸುವ ದಿವ್ಯೌಷಧವಿದೆ.

பெரிதாற்றிப் பெட்பக் கலத்தல் அரிதாற்றி
அன்பின்மை சூழ்வ துடைத்து.   (1276)

ಬಹುಕಾಲದ ನಿರೀಕ್ಷೆಯ ನಂತರೆ, ಪ್ರಿಯತಮನೊಂದಿಗೆ ನಲಿದು ಕೂಡಿ ಪಡೆದ ಕಾಮಸುಖದಲ್ಲಿ ಕೂಡ, ಅವರು ವಿರಹದಲ್ಲಿ ತೋರಿದ ಪ್ರೇಮಶೂನ್ಯವಾದ ಕಾಥಿಣ್ಯವನ್ನು ನೆನೆಯುವಂತೆ ಮಾಡುತ್ತಿದೆ.

தண்ணந் துறைவன் தணந்தமை நம்மினும்
முன்னம் உணர்ந்த வளை.   (1277)

ತಣ್ಣನೆಯ ಕಡಲನ್ನಾಳುವ ಇನಿಯನ ಅಗಲಿಕೆಯನ್ನು ನಮಗಿಂತ ಮುಂದಾಗಿ ನನ್ನ ಬಳೆಗಳು ಗ್ರಹಿಸಿ, ಸಡಿಲವಾದುವು ಅಲವೆ?

நெருநற்றுச் சென்றார்எம் காதலர் யாமும்
எழுநாளேம் மேனி பசந்து.   (1278)

ನನ್ನ ಪ್ರಿಯತಮನು ನಿನ್ನೆ ತಾನೇ ನನ್ನನ್ನು ಅಗಲಿ ಹೊರಟು ಹೋದರು ಆದರೆ, ಏಳು ದಿನಗಳು ಕಳೆದಂತೆ ನನ್ನೊಡಲು ಪೇಲವಗೊಂಡಿದೆ.

தொடிநோக்கி மென்தோளும் நோக்கி அடிநோக்கி
அஃதாண் டவள்செய் தது.   (1279)

ಅಗಲಿ ದೂರ ಹೋಗುವ ನಿನ್ನ ನಿರ್ಧಾರವನ್ನು ತಿಳಿದೊಡನೆಯೇ (ಸಡಿಲವಾದ) ತನ್ನ ಬಳೆಗಳನ್ನು ನೋಡಿದಳು, ತನ್ನ ನಳಿದೊಳುಗಳನ್ನು ನೋಡಿದಳು, ತನ್ನ ಮೆಲ್ಲಡಿಗಳನ್ನು ನೋಡಿದಳು. ಇಷ್ಟೇ ನನ್ನ ಗೆಳತಿ ಅಲ್ಲಿ ಮಾಡೀದ ಕುರಿಪುಗಳು.

பெண்ணினால் பெண்மை உடைத்தென்ப கண்ணினால்
காமநோய் சொல்லி இரவு.   (1280)

ತನ್ನ ಕಣ್ಣುಗಳಿಂದಲೇ ಪ್ರೇಮದ ವೇದನೆಯನ್ನು ಸೂಚಿಸಿ, ಇನಿಯನನ್ನು ಅಗಲದಂತೆ ಬೇಡುವ ಪ್ರೇಮಯಾಚನೆಯು, ಹೆಣ್ತನದಲ್ಲೇ ಮಿಗಿಲಾದುದೆಂದು ಬಲ್ಲವರು ಹೇಳುವರು.