ಜೂಜು

வேண்டற்க வென்றிடினும் சூதினை வென்றதூஉம்
தூண்டிற்பொன் மீன்விழுங்கி அற்று.   (931)

ಜೂಜಿನಲ್ಲಿ ಗೆಲುವುದಾದರೂ ಜೂಜನ್ನು ಬಯಸಬಾರದು; ಆ ಗೆಲ್ಲುವಿಕೆ ಕೂಡ, ಗಾಳದ ತುದಿಯ ಲೋಹವನ್ನು ಮೀನು (ಆಹಾರವೆಣ್ದು ಎಣಿಸಿ) ನುಂಗಿದಂತೆ.

ஒன்றெய்தி நூறிழக்கும் சூதர்க்கும் உண்டாங்கொல்
நன்றெய்தி வாழ்வதோர் ஆறு.   (932)

ಒಂದನ್ನು ಗೆದ್ದು ನೂರ್ಮಡಿಯಾಗಿ ಕಳೆದುಕೊಳ್ಳುವ ಜೂಜು ಕೋರರಿಗೆ ಸುಖ ಪಡೆದು ಬಾಳುವ ಮಾರ್ಗವುಂಟೆ?

உருளாயம் ஓவாது கூறின் பொருளாயம்
போஒய்ப் புறமே படும்.   (933)

(ಅರಸನಾದವನು) ಉರುಳುವ ದಾಳವನ್ನು ಊಹಿಸಿ ಹೇಳಿ ಬರುವ ಹಣವನ್ನು ಎಡೆಬಿಡದೆ ತೊಡಗಿಸಿ ಜೂಜಾಡಿದರೆ, ಅವನ ಗಳಿಕೆಯು ಕೈತಪ್ಪಿ ಹೋಗಿ ಇತರರ (ಹಗೆಗಳ) ಕೈ ಸೇರುವುದು.

சிறுமை பலசெய்து சீரழக்கும் சூதின்
வறுமை தருவதொன்று இல்.   (934)

ಹಲವು ತೆರದ ದುಃಖಗಳನ್ನು ತಂದೊಡ್ಡಿ ಕೀರ್ತಿಯನ್ನು ಅಳಿಸುವ ಜೂಜಿಗಿಂತ ದಾರಿದ್ರ್ಯ ತರುವುದು ಬೇರೊಂದಿಲ್ಲ.

கவறும் கழகமும் கையும் தருக்கி
இவறியார் இல்லாகி யார்.   (935)

ದ್ಯೂತದ ದಾಳಗಳನ್ನು ಆಡುವ ಕೂಟವನ್ನು ತಮ್ಮ ಕೈಬಳಕವನ್ನೂ ಮೆಚ್ಚಿ ಬಯಸಿ ಕೈಬಿಡಲಾರದ ಅರಸರು ಸಿರಿಯಲ್ಲಿ ಕಳೆದುಕೊಂಡು ದರಿದ್ರರಾರುತಾರೆ.

அகடாரார் அல்லல் உழப்பர்சூ தென்னும்
முகடியான் மூடப்பட் டார்.   (936)

ಜೂಜು ಎನ್ನುವ ಮೂದೇವಿಯ ವಶವಾದದರು ಬದುಕ್ಕಿದ್ದಾಗ ತಾವು ತಮ್ಮ ಹೊಟ್ಟೆ ತುಂಬ ಉಣ್ಣದೆ ಹಲವು ದುಃಖಗಳಿಂದ ಬಾಧಿಸಲ್ಪಟ್ಟು ನರಕಕೆ ಹೋಗುವರು.

பழகிய செல்வமும் பண்பும் கெடுக்கும்
கழகத்துக் காலை புகின்.   (937)

ಜೂಜಡುವ ಕೂಟದಲ್ಲಿ ಅರಸನು ಧರ್ಮ, ಅರ್ಥ, ಕಾಮಗಳನ್ನು ಮೀರಿ ಕಾಲಹರಣ ಮಾಡಿದರೆ, ಪರಂಪರಯಾಗಿ ಅವನಿಗೆ ಬಂದ ಸಿರಿಸಂಪತ್ತುಗಳೂ ಮತ್ತು ಸ್ವಾಭಾವಿಕವಾದ ಸದ್ಗುಣಗಳೂ ನಾಶವಾಗಿ ಹೋಗುತ್ತವೆ.

பொருள்கெடுத்துப் பொய்மேற் கொளீஇ அருள்கெடுத்து
அல்லல் உழப்பிக்கும் சூது.   (938)

ಜೂಜು ಹಣವನ್ನು ಕಳೆದುಕೊಂಡು ಸುಳ್ಳು ಹೇಳುವಂತೆ ಮಾಡುವುದು; ದೈವ ಕೃಪಯನ್ನು ಕೆಡಿಸಿ ಹಲ ತೆರನಾದ ದುಃಖಗಳನ್ನು (ಇಹಪರಗಳೆರಡರಲ್ಲೂ) ತಂದೊಡ್ಡುವುದು.

உடைசெல்வம் ஊண்ஒளி கல்விஎன்று ஐந்தும்
அடையாவாம் ஆயங் கொளின்.   (939)

ಒಬ್ಬನು ಜೂಜಾಡುವುದನ್ನು ಕೈಗೊಂಡರೆ, ಉಡುಪು, ಸಿರಿ, ಆಹಾರ, ಕೀರ್ತಿ ಮತ್ತು ಜ್ಞಾನವೆಂಬ ಐದು ಅವನಿಂದ ಮರೆಯಾಗುತ್ತವೆ.

இழத்தொறூஉம் காதலிக்கும் சூதேபோல் துன்பம்
உழத்தொறூஉம் காதற்று உயிர்.   (940)

ಇಹಪರಗಳೆರಡರಲ್ಲಿಯೂ ಒಬ್ಬನನ್ನು ಕೀಳಾಗಿ ಮಾಡಿ, ದುಃಖದಿಂದ ಕಷ್ಟಕ್ಕೇಡು ಮಾಡೂವುದು ಅವನು ಬಯಸುವ ಜೂಜು; ಅದೇ ರೀತಿ, ಜೀವದ ಮೇಲಿನ ವ್ಯಾಮೋಹವೂ- (ಮನುಷ್ಯನ) ದುಃಖವನ್ನು ಹೆಚ್ಚಿಸಿ ಅವನನ್ನು ತೋದರೆಯಲ್ಲಿ ಸಿಲುಕಿಸುವುದು.