ಹಿರಿಮೆ

ஒளிஒருவற்கு உள்ள வெறுக்கை இளிஒருவற்கு
அஃதிறந்து வாழ்தும் எனல்.   (971)

ಒಬ್ಬನ ಬಾಳಿನಲ್ಲಿ ಬೆಳಕೆಂದರೆ ಅವನಲ್ಲಿರುವ ಶಕ್ತಿಯೇ; ಒಬನ ಬಾಳಿನಲ್ಲಿ ಕತ್ತಲೆಂದರೆ, ಅದು ಇಲ್ಲದೆಯೇ ಬಾಳಬಹುದು ಎಂಬ ಅವನ ಎಣಿಕೆ.

பிறப்பொக்கும் எல்லா உயிர்க்கும் சிறப்பொவ்வா
செய்தொழில் வேற்றுமை யான்.   (972)

ಎಲ್ಲಾ ಜೀವಿಗಳಿಗೂ ಹುಟ್ಟು ಒಂದೇ ರೀತಿಯದು; ಆದರೆ, ಅವರವರು ಮಾಡುವ ಕೆಲಸಗಳು ಬೇರೆಬೇರೆಯಾಗಿರುವುದರಿಂದ, ಕೀರ್ತಿ ಪ್ರತಿಷ್ಠೆಗಳು ಭಿನ್ನವಾಗಿರುತ್ತದೆ.

மேலிருந்தும் மேலல்லார் மேலல்லர் கீழிருந்தும்
கீழல்லார் கீழல் லவர்.   (973)

ಮೇಲಾದ ಸ್ಥಿತಿಯಲ್ಲಿದ್ದರೂ ಕೂಡ, ಮೇಲಾದ ಗುಣವಿಲ್ಲದವರು ಮೇಲು ವರ್ಗದವರೆನಿಸಿಕೊಳ್ಳಲಾರರು; ಅದೇ ರೀತಿ, ಕೀಳು ಸ್ಥಿತಿಯಲ್ಲಿದ್ದರೂ ಕೂಡ ಕೀಳಾದ ಗುಣ ಹೊಂದದವರು ಕೀಳು ವರ್ಗದವರೆಂದು ಎನಿಸಿಕೊಳ್ಳಲಾರರು.

ஒருமை மகளிரே போலப் பெருமையும்
தன்னைத்தான் கொண்டொழுகின் உண்டு.   (974)

ಏಕ ನಿಷ್ಠೆಯುಳ್ಳ ಹೆಂಗಸರಂತೆಯೇ ಹಿರಿಮೆಯೂ ಕೂಡ, ತನ್ನನ್ನು ತಾನು ಕಾಪಾಡಿಕೊಂಡು ನಡೆದುಕೊಂಡರೆ ಮಾತ್ರ ಉಂಟು.

பெருமை யுடையவர் ஆற்றுவார் ஆற்றின்
அருமை உடைய செயல்.   (975)

ಹಿರಿಮೆಯು ಗುಣವುಳ್ಳವರು, ಕಷ್ಟ ಕಾಲದಲ್ಲಿಯೂ ಮಾಡೂವುದಕ್ಕೆ ಅಸಾಧ್ಯವಾದ ಕೆಲಸಗಳನ್ನು, ತಕ್ಕ ರೀತಿಯಲ್ಲಿ ಮಾಡಿ ಮುಗಿಸಬಲ್ಲವರಾಗುತ್ತಾರೆ.

சிறியார் உணர்ச்சியுள் இல்லை பெரியாரைப்
பேணிக் கொள் வேம் என்னும் நோக்கு.   (976)

ಹಿರಿಯರ ಹಾದಿಯಲ್ಲಿ ನಡೆದು, ಅವರ ಗುಣಗಳನ್ನು ನಾವೂ ಪಡೆದುಕೊಳ್ಳಬೇಕು ಎನ್ನುವ ದೃಷ್ಟಿ ಅಲ್ಪರ ಮನಸ್ಸಿನಲ್ಲಿ ಬರುವುದಿಲ್ಲ.

இறப்பே புரிந்த தொழிற்றாம் சிறப்புந்தான்
சீரல் லவர்கண் படின்.   (977)

ಕುಲ, ಸಂಪದ, ಶಿಕ್ಷಣ ಮೊದಲಾದ ಹಿರಿಮೆಯು ಕೀಳಾದವರ ಕೈಯಲ್ಲಿ ಸಿಕ್ಕಿಕೊಂಡರೆ, ದುರಹಂಕಾರವನ್ನು ವೃದ್ಧಿಪಡಿಸುತ್ತದೆ.

பணியுமாம் என்றும் பெருமை சிறுமை
அணியுமாம் தன்னை வியந்து.   (978)

ಯಾವಾಗಲೂ ತಗ್ಗಿ ನಡೆಯುವುದೇ ಹಿರಿಯ ಗುಣ; ತಮ್ಮ ಪ್ರತಿಷ್ಠೆಯನ್ನು ಮರೆಸಿ ಕೊಂಡಾಡುವುದು ಕೀಳುಗುಣ.

பெருமை பெருமிதம் இன்மை சிறுமை
பெருமிதம் ஊர்ந்து விடல்.   (979)

ಹಿರಿಮೆಯ ಗುಣವೆಂದರೆ ಅಹಂಕಾರವಿಲ್ಲದೆ ಬಾಳುವುದು; ಕೀಳ್ತನವೆಂದರೆ ಅಹಂಕಾರವು ಬೇರೂರಿ ನಿಲ್ಲುವುದು.

அற்றம் மறைக்கும் பெருமை சிறுமைதான்
குற்றமே கூறி விடும்.   (980)

ಹಿರಿಮೆಯ ಗುಣವು ಇತರರ ಗುಣದೋಷಗಳನ್ನು ಮರೆಯುವುದು; ಕೀಳುತನವಾದರೋ ಇತರರ ಗುಣದೋಷಗಳನ್ನೇ ಎತ್ತಿ ಆಡುವುದು.