ಪಡೆಯ ಕೆಚ್ಚು

என்னைமுன் நில்லன்மின் தெவ்விர் பலரென்னை
முன்நின்று கல்நின் றவர்.   (771)

ಹಗೆಗಳೇ, ತನ್ನ ನಾಯಕನ ಮುಂದೆ ಎದುರಿಸಿ ನಿಲ್ಲಬೇಡಿರಿ! ಹಾಗೆ ಮಾಡಿದವರನೇಕರು ಕಲ್ಲಾಗಿ ನಿಂತಿದ್ದಾರೆ.

கான முயலெய்த அம்பினில் யானை
பிழைத்தவேல் ஏந்தல் இனிது.   (772)

ಕಾಡಿನಲ್ಲಿ ಮೊಲಕ್ಕೆ ಗುರಿತಾಗುವಂತೆ ಹೊಡೆದ ಅಂಬಿಗಿಂತ, ಆನೆಯ ಮೇಲೆ ಹೊಡೆದು ಗುರಿ ತಪ್ಪಿದ ಶೂಲವನ್ನು ಹೊದಿರುವುದೇ ಮೇಲು.

பேராண்மை என்ப தறுகண்ஒன் றுற்றக்கால்
ஊராண்மை மற்றதன் எஃகு.   (773)

(ಹಗೆಯನ್ನು ಎದುರಿಸುವ) ವೀರತ್ವವನ್ನು ಅತಿದೊಡ್ಡ ಶೌರ್ಯ ಪ್ರದರ್ಶನವೆಂದು ಹೇಳುವರು. ಅದೇ ಹಗೆಗೆ ಆಪತ್ತು ಬಂದಾಗ ಉದಾರವಾಗಿ ನಡೆದುಕೊಳ್ಳುವುದು ಶೌರ್ಯದ ಪರಮಾವಧಿಯಾಗುವುದು.

கைவேல் களிற்றொடு போக்கி வருபவன்
மெய்வேல் பறியா நகும்.   (774)

ತನ್ನ ಕೈಯಲ್ಲಿದ್ದ ಶೂಲದಿಂದ ಎದುರಿಸಿ ಬಂದ ಆನೆಯನ್ನು ತಿವಿದು ಬೇರೊಂದು ಆನೆಯನ್ನು ತಿವಿಯಲು ಶೂಲಕ್ಕಾಗಿ ಅರಸುತ್ತ ಬಂದ ಯೋಧನು, ತನ್ನ ಮೈಮೇಲೆ ಶೂಲವೊಂದು ಬಂದು ನಾಟಲು, ಅದನ್ನು ಕಿತ್ತು ತೆಗೆಯುತ್ತ ಆನಂದಪಡುವನು.

விழித்தகண் வேல்கொண டெறிய அழித்திமைப்பின்
ஒட்டன்றோ வன்க ணவர்க்கு.   (775)

ಹಗೆಗಳನ್ನು ಕೋಪದಿಂದ ಅಗಲಿಸಿ ನೋಡುವ ಕಣ್ಣು, ಅವರು ಶೂಲದಿಂದ ಇರಿಯುವಾಗ, ಆ ನೋವನ್ನು ತಾಳಲಾರದೆ, ಒಮ್ಮೆ ಮುಚ್ಚಿ ತರೆದರೆ, ಅದು ಶೂರರಾದವರಿಗೆ ಸೋಲಿನ ಸಮಾನವಲ್ಲವೆ?

விழுப்புண் படாதநாள் எல்லாம் வழுக்கினுள்
வைக்கும்தன் நாளை எடுத்து.   (776)

ವೀರನಾದವನು, ತಾನು (ಯುದ್ಧದಲ್ಲಿ) ಕಳೆದ ದಿನಗಳ ಲೆಕ್ಕ ಇಟ್ಟು, ಅವುಗಳಲ್ಲಿ ತೀವ್ರವಾದ ಗಾಯಗಳನ್ನು ಹೊಂದದಿರುವ ದಿನಗಳೆಲ್ಲ ವ್ಯರ್ಥವಾಯಿತೆಂದು ಭಾವಿಸುತ್ತಾನೆ.

சுழலும் இசைவேண்டி வேண்டா உயிரார்
கழல்யாப்புக் காரிகை நீர்த்து.   (777)

ಬಿರುಗಾಳಿಯಂತೆ ಭೂಮಿಯಲ್ಲಿ ವ್ಯಾಪಿಸುವ ಕೀರ್ತಿಯನ್ನು ಬಯಸಿ ಪ್ರಾಣವನ್ನು ಲೆಕ್ಕಿಸದ ವೀರರು, ಕಾಲಿಗೆ ಕಟ್ಟುವ ವೀರ ಕಡಗವು ಅವರಿಗೆ ಅಲಂಕಾರವಾಗಿ ಶೋಭಿಸುವುದು.

உறின்உயிர் அஞ்சா மறவர் இறைவன்
செறினும் சீர்குன்றல் இலர்.   (778)

ಯುದ್ಧ ಸಂಭವಿಸಿದಾಗ ಪ್ರಾಣಕ್ಕೆ ಹೆದರದಿರುವ ಯೋಧರು, ತಮ್ಮ ಅರಸನು, ಕೋಪದಲ್ಲಿ ಯ್ಯುದ್ಧವನ್ನು ಹಿಂದೆಗೆದುಕೊಂಡರೂ, ತಮ್ಮ ಶೌರ್ಯದಲ್ಲಿ ಕುಂದುವುದಿಲ್ಲ.

இழைத்தது இகவாமைச் சாவாரை யாரே
பிழைத்தது ஒறுக்கிற் பவர்.   (779)

ತಾವು ಕೈಗೊಂಡ ಪ್ರತಿಜ್ಞೆಯನ್ನು ತಪ್ಪದೆ ನಡಿಸಿ ಸಾಯಲು ಸಿದ್ಧರಾಗಿರುವವರನ್ನು ಅವರು ತಪ್ಪಿದರೆಂದು ಹೇಳಿ ದಂಡಿಸುವ ಹಕ್ಕು ಯಾರಿಗಿದೆ?

புரந்தார்கண் நீர்மல்கச் சாகிற்பின் சாக்காடு
இரந்துகோள் தக்கது உடைத்து.   (780)

ಪೂರೆಯುವ ಅರಸರ ಕಣ್ಣುಗಳು ಕಂಬನಿಯಿಂದ ತುಂಬುವಂತೆ (ಯುದ್ಧದಲ್ಲಿ) ಸಾವನ್ನಪ್ಪುವುದಾದರೆ, ಅಂಥ ಸಾವನ್ನು ಭಿಕ್ಷೆಯೆತ್ತಿಯಾದರೂ ಪಡೆದುಕೊಳ್ಳಬೇಕು.