ವಿವರ್ಣ ವೇದನೆ

நயந்தவர்க்கு நல்காமை நேர்ந்தேன் பசந்தவென்
பண்பியார்க்கு உரைக்கோ பிற.   (1181)

ನನ್ನನ್ನು ಪ್ರೀತಿಸಿದ ನಲ್ಲನಿಗೆ ನನ್ನಿಂದ ಅಗಲಿರಲು ಅನುಮತಿ ನೀಡಿದೆ ಆದರೆ ವಿವರ್ಣವಾದ ನನ್ನ ಸ್ಥಿತಿಯನ್ನು ಮತ್ತೆ ಯಾರಿಗೆ ಹೇಳಿಕೊಳ್ಳಲಿ?

அவர்தந்தார் என்னும் தகையால் இவர்தந்தென்
மேனிமேல் ஊரும் பசப்பு.   (1182)

ಅವರು (ಇನಿಯರು) ಕೊಟ್ಟರು ಎನ್ನುವ ಗರ್ವದಿಂದ ವೈವರ್ಣ್ಯವು ನನ್ನ ಒಡಲಿನ ಮೇಲೇರಿ, ಸವಾರಿ ಮಾಡುತ್ತಿದೆ.

சாயலும் நாணும் அவர்கொண்டார் கைம்மாறா
நோயும் பசலையும் தந்து.   (1183)

ಅವರು ಕಾಮವೇದನೆಯನ್ನೂ, ವೈವರ್ಣ್ಯವನ್ನೂ ನನಗೆ ಕೊಟ್ಟು ಅದಕ್ಕೆ ಪ್ರತಿಯಾಗಿ (ನನ್ನ) ಸೌಂದರ್ಯ, ನಾಚಿಕೆಗಳನ್ನು ಕಸಿದುಕೊಂಡರು.

உள்ளுவன் மன்யான் உரைப்பது அவர்திறமால்
கள்ளம் பிறவோ பசப்பு.   (1184)

ನಾನು ಅವರ ಇನಿಮಾತುಗಳನ್ನೇ ನೆನೆಯುತ್ತೆನೆ; ಅವರ ಸ್ವಭಾವ ಗುಣಗಳನ್ನು ಕುರಿತು (ಸಖಿಯರೆದುರು) ಹೇಳುತ್ತಿರುತ್ತೇನೆ; ಆದರೂ ವಿವರ್ಣತೆ ನನ್ನನ್ನಾವಂಸುತ್ತಿದೆ. ಇದೇನು ವಂಚನೆಯೋ ತಿಳಿಯದಾಗಿದೆ.

உவக்காண்எம் காதலர் செல்வார் இவக்காண்என்
மேனி பசப்பூர் வது.   (1185)

ಅದೋ ನೋಡು! ನನ್ನ ಇನಿಯನು ಅಗಲಿ ಹೋಗುತ್ತಿದ್ದಾನೆ! ಇದೋ ನೋಡು! ನನ್ನ ಶರೀರವು ವೈವರ್ಣ್ಯವನ್ನು ತಾಳುತ್ತಿದೆ!

விளக்கற்றம் பார்க்கும் இருளேபோல் கொண்கன்
முயக்கற்றம் பார்க்கும் பசப்பு.   (1186)

ಬೆಳಕಿನ ನಾಶವನ್ನೇ ಎದುರು ನೋಡುವ ಇರುಳಿನಂತೆ, ಇನಿಯನ ಅಪ್ಪುಗೆಯ ನಡಲಿಕೆಯನ್ನೇ ಎದುರು ನೋಡುತ್ತಿದೆ ವೈವರ್ಣ್ಯವು.

புல்லிக் கிடந்தேன் புடைபெயர்ந்தேன் அவ்வளவில்
அள்ளிக்கொள் வற்றே பசப்பு.   (1187)

ನಾನು (ನಲ್ಲನನ್ನು) ಅಪ್ಪಿಕೊಂಡೆ, ಹಾಗೆಯೇ ತುಸು ಪಕ್ಕಕ್ಕೆ ಸರಿದೆ. ಅಷ್ಟರಲ್ಲಿಯೇ ವಶಪಡಿಸಿಕೊಳ್ಳುವ ಆತುರದಿಂದ ವಿವರ್ಣ್ಯವು ನನ್ನನ್ನು ಆವರಿಸಿಕೊಂಡಿತು.

பசந்தாள் இவள்என்பது அல்லால் இவளைத்
துறந்தார் அவர்என்பார் இல்.   (1188)

(ನೋಡುವವರು) ಇವಳು (ಚಿಂತೆಯಿಂದ) ವಿವರ್ಣಳಾಗಿದ್ದಾಳೆ ಎನ್ನುವರಲ್ಲದೆ, ಅವರು (ನನ್ನನ್ನು) (ನಿರ್ದಯ ಮನಸ್ಕರಾಗಿ) ತೊರೆದು ಹೋದರು ಎಂದು ಹೇಳುವವರು ಯಾರೂ ಇಲ್ಲ.

பசக்கமன் பட்டாங்கென் மேனி நயப்பித்தார்
நன்னிலையர் ஆவர் எனின்.   (1189)

ನನ್ನನ್ನು ವಿರಹಕ್ಕೆ ಒಪ್ಪಿಸಿದ ನಲ್ಲನು ಇಂದು ಕುಶಲವಾಗಿರುವರು ಎಂದಾದಲ್ಲಿ ನನ್ನ ಶರೀರವು ನಿಜವಾಗಿ ವೈವರ್ಣ್ಯವನ್ನು ತಾಳಲಿ.

பசப்பெனப் பேர்பெறுதல் நன்றே நயப்பித்தார்
நல்காமை தூற்றார் எனின்.   (1190)

ನನ್ನನ್ನು ನಯವಾದ ಮಾತುಗಳಿಂದ ಒಪ್ಪಿಸಿ (ವಿರಹಕ್ಕೆ ಕಾರಣನಾದ) ನಲ್ಲನ ನಿರ್ದಯತೆಯನ್ನು ಇತರರು ದೂರುವುದಿಲ್ಲ ಎನ್ನುವುದಾದರೆ, ನಾನು ವಿವರ್ಣಳಾಗಿದ್ದೇನೆಂಬ ಆಕ್ಷೇಪವನ್ನು ಹೊರುವುದೇ ಲೇಸು!