ವ್ಯವಸಾಯ (ಉಳ್ಳುವುದು)

சுழன்றும்ஏர்ப் பின்னது உலகம் அதனால்
உழந்தும் உழவே தலை.   (1031)

ಲೋಕದ ಜನರು ಹಲವು ಉದ್ಯೋಗಗಳಲ್ಲಿ ಎಷ್ಟೇ ಸುತ್ತಾಡಿದರೂ ಅದು ನೇಗಿಲ ದುಡಿಮೆಗೆ ಹಿಂದ ನಿಲ್ಲುವಂಥರು; ಅದ್ದರಿಂದ ಎಷ್ಟೇ ಶ್ರಮವಿದ್ದರೂ ಉಳುವ ದುಡಿಮೆಯೇ ಮೇಲಾದುದು.

உழுவார் உலகத்தார்க்கு ஆணிஅஃ தாற்றாது
எழுவாரை எல்லாம் பொறுத்து.   (1032)

ಹೊಲದ ದಂಡಿಮೆಯುಳಿದು ಬೇರೆ ಕೆಲಸಗಳನ್ನು ಮಾಡುವ ಎಲ್ಲರ ಭಾರವನ್ನು ಉಳುವವನು ಹೊರುವುದರಿಂದ, ನೇಗಿಲ ಯೋಗಿಯು, ಲೋಕ ರಥದ ಅಚ್ಚಿನ ಮೊಳೆಯಂತೆ ಇದ್ದಾನೆ.

உழுதுண்டு வாழ்வாரே வாழ்வார்மற் றெல்லாம்
தொழுதுண்டு பின்செல் பவர்.   (1033)

ಭೂಮಿಯನ್ನು ಉತ್ತು, ಪರರಿಗೆ ಉಣವಿತ್ತು ತಾವೂ ಉಂಟು ಸುಖಿಸುವರೈತರೇ ಬಾಳಿನ ಸುಖಕ್ಕೆ ಪಾಲುದಾರರು; ಉಳಿದವರೆಲ್ಲ ಪರಾಶ್ರಯದಲ್ಲಿ ಬಾಳುನಡಸುವವರು.

பலகுடை நீழலும் தங்குடைக்கீழ்க் காண்பர்
அலகுடை நீழ லவர்.   (1034)

ಧಾನ್ಯದ ಬೆಳೆಯ ತಂಪಿನ ಛತ್ರದ ನೆರಳಲ್ಲಿ ಬಾಳುವವರು ಹಲವು ಅರಸರ ಛತ್ರದ ನೆರಳನ್ನು ತಮ್ಮ ಅರಸನ ಛತ್ರದಡಿಯಲ್ಲೇ ಕಾಣುವರು.

இரவார் இரப்பார்க்கொன்று ஈவர் கரவாது
கைசெய்தூண் மாலை யவர்.   (1035)

ಕೈಯಾರೆ ಶ್ರಮಪಟ್ಟು ಕೆಲಸಮಾಡಿ ಉಣ್ಣುವ ಗುಣವುಳ್ಳವರು ಪರರಲ್ಲಿ ಬೇಡುವುದಿಲ್ಲ; ತಮ್ಮ ಬಳಿ ಬೇಡಲು ಬಂದವರಿಗೆ ವಂಚನೆಯಿಲ್ಲದೆ ಕೊಡುವರು.

உழவினார் கைம்மடங்கின் இல்லை விழைவதூஉம்
விட்டேம்என் பார்க்கும் நிலை.   (1036)

ಉಳುವವರು ಕೆಲಸ ಮಾಡುವುದನ್ನು ನಿಲ್ಲಿಸಿದರೆ, ಆಶೆಗಳನ್ನೆಲ್ಲ ತೋರದಿದ್ದೇವೆ ಎನ್ನುವ ಸನ್ಯಾಸಿಗಳಿಗೂ ಬಾಳಿನಲ್ಲಿ ನೆಲೆ ಇಲ್ಲವಾಗುತ್ತದೆ.

தொடிப்புழுதி கஃசா உணக்கின் பிடித்தெருவும்
வேண்டாது சாலப் படும்.   (1037)

ಒಂದು ಬೊಗಸೆ ಮಣ್ಣು ಕಾಲು ಬೊಗಸೆಯಾಗುವಂತೆ ಚೆನ್ನಾಗಿ ಉತ್ತುಕಾಯಲು (ಒಣಗಲು) ಬಿಟ್ಟರೆ, ಒಂದು ಹಿಡಿ ಗೊಬ್ಬರವೂ ಇಲ್ಲದೆ ಪೈರು ಹುಲುಸಾಗಿ ಬೆಳೆಯುತ್ತದೆ.

ஏரினும் நன்றால் எருவிடுதல் கட்டபின்
நீரினும் நன்றதன் காப்பு.   (1038)

ನೇಗಿಲಿನಿಂದ ಉಳುವುದಕ್ಕಿಂತ, ಭೂಮಿಗೆ ಸಾರ ನೀಡುವುದು ಒಳ್ಲೆಯುದು; ಕಳೆಯನ್ನು ತೆಗೆದ ಮೇಲೆ, ನೀರು ಹಾಯಿಸುವುದಕ್ಕಿಂತ (ಬೆಳೆಯ) ಕಾವಲು ಕಾಯುವುದು ಮೇಲು.

செல்லான் கிழவன் இருப்பின் நிலம்புலந்து
இல்லாளின் ஊடி விடும்.   (1039)

ನೆಲದೊಡೆಯನಾದವನು ತನ್ನ ನೆಲವನ್ನು ಸರಿಯಾಗಿ ನೋಡಿಕೊಳ್ಳದಿದ್ದಲ್ಲಿ, ಕುಪಿತಳಾದ ಕೆಂಡತಿಯಂತೆ, ಅವನಲ್ಲಿ ಆ ನೆಲವು ಅಸಹಕಾರವನ್ನು ತೋರುತ್ತದೆ.

இலமென்று அசைஇ இருப்பாரைக் காணின்
நிலமென்னும் நல்லாள் நகும்.   (1040)

ತಮ್ಮಲ್ಲಿ ಏನೂ ಇಲ್ಲವೆಂದು ದಾರಿದ್ರ್ಯವನ್ನು ತೋರಿಸುತ್ತ ಆಲಸ್ಯದಿಂದ ಕಾಲಹರಣ ಮಾಡುವವನನ್ನು ಕಂಡು ಬೆಡಗಿನ ನೆಲವಣ್ಣು (ತಿರಸ್ಕಾರದಿಂದ) ನಗುತ್ತಾಳೆ.