ಕೋಪದ ಹರಿತ

பெண்ணியலார் எல்லாரும் கண்ணின் பொதுஉண்பர்
நண்ணேன் பரத்தநின் மார்பு.   (1311)

ಪರಸ್ತ್ರೀ ಸಂಗಾಭಿಲಾಷಿಯೇ! ಹೆಣ್ತನವುಳ್ಳವರೆಲ್ಲ ನಿನ್ನನ್ನು ಬಹಿರಂಗವಾಗಿ ತಮ್ಮ ಕಣ್ಣುಗಳಿಂದ ಭೋಗಿಸುವರು. ಅದ್ದರಿಂದ ನಾನು ನಿನ್ನದೆಯನ್ನು ಸೇರಲಾರೆ!

ஊடி இருந்தேமாத் தும்மினார் யாம்தம்மை
நீடுவாழ் கென்பாக் கறிந்து.   (1312)

ನಾನು ಪ್ರಿಯನೊಂದಿಗೆ ಕೋಪದಿಂದ ಮುನಿಸಿಕೊಂಡಿರುವಾಗ, ನಾನು ಅವರನ್ನು ನಿಡುಗಾಲ ಬಾಳಲಿ ಎಂದು ಬಾಯಿ ತೆರೆದು ಹೇಳುವನೆಂದು ಬಗೆದು ಅವರು (ಗಟ್ಟಿಯಾಗಿ) ನೀನಿದರು.

கோட்டுப்பூச் சூடினும் காயும் ஒருத்தியைக்
காட்டிய சூடினீர் என்று.   (1313)

ಕೊಂಬೆಗಳಲ್ಲಿ ಅರಳಿದ ಹೂಗಳನ್ನು ಬಯಸಿ ಮುಡಿದುಕೊಂಡರೂ, 'ನೀವುನಿಮ್ಮ ಅಲಂಕಾರವನ್ನು ಯಾರೊಬ್ಬಳಿಗೋ ತೋರಿಸಲು ಮುಡಿದುಕೊಂಡಿರಿ' ಎಂದು ಕೋಪಿಸಿಕೊಳ್ಳುವಳು.

யாரினும் காதலம் என்றேனா ஊடினாள்
யாரினும் யாரினும் என்று.   (1314)

ಬೇರೆ ಯಾರಿಗಿಂತಲೂ ನಿನ್ನನ್ನೇ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ನಾನು ಹೇಳುವಾಗ 'ಯಾರಿಗಿಂತ? ಯಾರಿಗಿಂತ?' ಎಂದು ಮುನಿಸಿಕೊಂಡಳು.

இம்மைப் பிறப்பில் பிரியலம் என்றேனாக்
கண்நிறை நீர்கொண் டனள்.   (1315)

ಈ ಜನ್ಮದಲ್ಲಿ ನಾನು ನಿನ್ನನ್ನು ಅಗಲುವುದಿಲ್ಲ ಎಂದು ನಾನು ಹೇಳಿದಾಗ ಅವಳು ಕಣ್ಣು ತುಂಬ ನೀರು ತಂದುಕೊಂಡಳು. (ಮರು ಜನ್ಮದಲ್ಲಿ ಅಗಲಿಕೆ ಬರುವುದೆಂದು ನೆನೆದು ಕಣ್ಣಲ್ಲಿ ನೀರು ತಂದುಕೊಂಡಳು)

உள்ளினேன் என்றேன்மற் றென்மறந்தீர் என்றென்னைப்
புல்லாள் புலத்தக் கனள்.   (1316)

ನಿನ್ನನ್ನು ನೆನೆಸಿಕೊಂಡೆನೆಂದು ನಾನು ಹೇಳಿದಾಗ 'ನೆನೆಸಿಕೊಳ್ಳುವುದರಲ್ಲಿಯೂ ಮರೆವು ಇರಬೇಕಲ್ಲವೆ? ಏಕೆ ಮರೆತಿರಿ' ಎಂದು ನನ್ನನ್ನು ತಬ್ಬಿಕೊಳ್ಳದೆ ಮುನಿಸು ತೋರಿವಳು.

வழுத்தினாள் தும்மினேன் ஆக அழித்தழுதாள்
யாருள்ளித் தும்மினீர் என்று.   (1317)

ನಾನು ಸೀನಿದಾಗ ಅವಳು ನೂರ್ಗಲ ಬಾಳೆಂದು ಹರಸಿದಳು; ಒಡನೆಯೇ 'ಯಾರು ನಿಮ್ಮನ್ನು ನೆನೆದುದರಿಂದ ಸೀನಿದಿರಿ?' ಎಂದು ಕೇಳುತ್ತ ದುಃಖಿಸಿ ಅತ್ತಳು.

தும்முச் செறுப்ப அழுதாள் நுமர்உள்ளல்
எம்மை மறைத்திரோ என்று.   (1318)

(ಅವಳ ಮುನಿಸಿಗೆ ಅಂಜೆ) ನಾನು ಬಂದ ನೀನನ್ನು ಅಡಗಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಅವಳು ನಿಮ್ಮವರು ಯಾರೋ ನಿಮ್ಮನ್ನು ನೆನೆಯುತ್ತಿರುವುದನ್ನು ನನ್ನಿಂದ ಮರೆಸಲು ಯತ್ನಿಸುತ್ತಿದ್ದೀರಾ- ಎಂದು ಹೇಳಿ ಅತ್ತಳು.

தன்னை உணர்த்தினும் காயும் பிறர்க்கும்நீர்
இந்நீரர் ஆகுதிர் என்று.   (1319)

ಅವಳು ಮುನಿಸಿಕೊಂಡಿರುವಾಗ ಅವಳನ್ನು ಸಂತಯಿಸ ಹೋದರೂ 'ನೀವು ಇತರ ಸ್ತ್ರೀಯರಿಗೂ ಇದೇ ರೀತಿ ಮಾಡೂವಿರಿ' ಎಂದು ಹೇಲಿ ಕೋಪವನ್ನು ತಾಳುವಳು.

நினைத்திருந்து நோக்கினும் காயும் அனைத்துநீர்
யாருள்ளி நோக்கினீர் என்று.   (1320)

ಅವಳ ಚೆಲುವನ್ನು ನೆನೆದು ಮೌನವಾಗಿ ನೋಡುತ್ತಿರುವಾಗಲೂ 'ನೀವು ಯಾರನ್ನು ನೆನೆದು ಈ ರೀತಿ ನೋಡುತ್ತಿರುವಿರಿ' ಎಂದು ಕೇಳಿ ಕೋಪಗೊಳ್ಳುವಳು