ಸದ್ಗುಣವುಳ್ಳವರಾಗಿರುವುದು

எண்பதத்தால் எய்தல் எளிதென்ப யார்மாட்டும்
பண்புடைமை என்னும் வழக்கு.   (991)

ಒಬ್ಬನು ಎಲ್ಲರಲ್ಲಿಯೂ ಸುಲಭವಾಗಿ ಸೇರುವವನಾದರೆ, ಅವನಿಗೆ ಸದ್ಗುಣಗಳನ್ನು ಪಡೆಯುವುದೂ ಸುಲಭ ಎಂದು ಜ್ಞಾನಿಗಳು ಹೇಳುವರು.

அன்புடைமை ஆன்ற குடிப்பிறத்தல் இவ்விரண்டும்
பண்புடைமை என்னும் வழக்கு.   (992)

ಪ್ರೀತಿಯುಳ್ಳವರಾಗಿರುವುದು, ಹೆಸರಾದ ಕುಲದಲ್ಲಿ ಹುಟ್ಟಿದ ಕೀರ್ತಿ ಇರುವದು, ಇವೆರಡೂ ಗುಣವುಳ್ಳವರಾಗಿ ಬಾಳುವ ಸನ್ಮಾರ್ಗಗಳೆನಿಸುವುವು.

உறுப்பொத்தல் மக்களொப்பு அன்றால் வெறுத்தக்க
பண்பொத்தல் ஒப்பதாம் ஒப்பு.   (993)

ಮನುಷ್ಯರು ತಮ್ಮ ದೇಹದ ಅಂಗಾಂಗಗಳಲ್ಲಿ ಪರಸ್ಪರ ಹೋಲುವುದು ಹೋಲಿಕೆಯಲ್ಲ; ಹೊಂದಿಕೊಳ್ಳುವ ಗುಣಗಳಿಂದ ಹೋಲುವುದೇ ನಿಜವಾದ ಹೋಲಿಕಯೆನಿಸುವುದು.

நயனொடு நன்றி புரிந்த பயனுடையார்
பண்புபா ராட்டும் உலகு.   (994)

ಒಳ್ಳೆಯ ನಡತೆ, ಉಪ್ಕಾರ ಬುದ್ಧಿ, ಇವುಗಳಿಂದ ಇತರರಿಗೆ ಪ್ರಯೋಜನವಾಗುವಂತೆ ಬಾಳುವ, ಸಾರ್ಥಕ ಜೀವಿಗಳ ಗುಣಗಳನ್ನು ಇಡೀ ಲೋಕವೇ ಕೊಂಡಾಡುತ್ತದೆ.

நகையுள்ளும் இன்னா திகழ்ச்சி பகையுள்ளும்
பண்புள பாடறிவார் மாட்டு.   (995)

ವಿನೋದದಲ್ಲಿ ಕೂಡ ನಿಂದನೆಯು ದುಃಖವನ್ನು ತರುತ್ತದೆ; ಇತರರ ಸ್ವಭಾವವರಿತು ನಡೆಯುವ ಸದ್ಗುಣಿಗಳ ಹಗೆತನದಲ್ಲಿ ಕೂಡ ಕರುಣೆ ತುಂಬಿರುತ್ತದೆ.

பண்புடையார்ப் பட்டுண்டு உலகம் அதுஇன்றேல்
மண்புக்கு மாய்வது மன்.   (996)

ಸದ್ಗುಣವುಳ್ಳವರನ್ನೇ ಆಧರಿಸಿಕೊಂಡು ಲೋಕದ ನಡೆ ನಿಂತಿದೆ. ಅದಿಲ್ಲವಾದರೆ, ಮಣ್ಣಿನಲ್ಲಿ ಸೇರಿ ಅದು ನಾಶವಾಗಿ ಹೋಗುವುದು ನಿಶ್ಚಯ.

அரம்போலும் கூர்மைய ரேனும் மரம்போல்வர்
மக்கட்பண்பு இல்லா தவர்.   (997)

ಮಾನವೀಯ ಗುಣವನ್ನು ಹೊಂದಿರದೆ ಇರುವವರು, ಅರವನ್ನು ಹೋಲುವ ಹರಿತವಾದ ಬುದ್ಧಿಯುಳ್ಳವರಾದರೂ ಚಲನೆಯಿಲ್ಲದ ಮರವನ್ನೇ ಹೋಲುತ್ತಾರೆ.

நண்பாற்றார் ஆகி நயமில செய்வார்க்கும்
பண்பாற்றார் ஆதல் கடை.   (998)

ಸ್ನೇಹವಿಲ್ಲದವರಾಗಿ ಕೆಟ್ಟದ್ದನ್ನೇ ಮಾಡುವವರಿಗೆ ಕೂಡ ಒಳ್ಳೆಯ ಗುಣಗಳನ್ನು ಪ್ರದರ್ಶಿಸದಿರುವುದು ಕೀಳ್ತರವೆನಿಸುವುದು.

நகல்வல்லர் அல்லார்க்கு மாயிரு ஞாலம்
பகலும்பாற் பட்டன்று இருள்.   (999)

ನಗಬಲ್ಲ ಗುಣವಿಲ್ಲದವರಿಗೆ ವಿಶಾಲವಾದ ಈ ಲೋಕದಲ್ಲಿ ಹಗಲಿನಲ್ಲೂ ಕತ್ತಲೆಯೇ ಕಾಣುವುದು.

பண்பிலான் பெற்ற பெருஞ்செல்வம் நன்பால்
கலந்தீமை யால்திரிந் தற்று.   (1000)

ಗುಣವಿಲ್ಲದವನ ಕೈಲಿರುವ ಅತುಳವಾದ ಐಶ್ವರ್ಯವು ಕೊಳಕು ಪಾತ್ರಯಲ್ಲಿಟ್ಟು ಒಳ್ಲೆಯ ಹಾಲಿನಂತೆ ಶೀಘ್ರವೇ ಕೆಟ್ಟು ಹೋಗುತ್ತದೆ.