ಕನಸಿನ ನೆಲೆಯನ್ನು ಒರೆಯುವ

காதலர் தூதொடு வந்த கனவினுக்கு
யாதுசெய் வேன்கொல் விருந்து.   (1211)

(ನಾನು ವಿರಹದಲ್ಲಿ ಸೊರಗಿ ಮಲಗಿರುವಾಗ) ಪ್ರಿಯತಮನ ಸಂದೇಶದೊಡನೆ ಬಂದ ಕನಸಿಗೆ ತಕ್ಕ ರೀತಿಯಲ್ಲಿ ಸನ್ಮಾನವನ್ನು ಹೇಗೆ ಮಾಡೂವುದೇನೋ!

கயலுண்கண் யானிரப்பத் துஞ்சிற் கலந்தார்க்கு
உயலுண்மை சாற்றுவேன் மன்.   (1212)

ನನ್ನ ಕಪ್ಪಾದ ಮೀನ್ಗಣ್ಣುಗಳು ನನ್ನ ಕೋರಿಕೆಯಂತೆ ನಿದ್ರಾವಶವಾದರೆ, ಕನಸಿನಲ್ಲಿ ಸಂಧಿಸುವ ನನ್ನ ಪ್ರಿಯತಮನಿಗೆ ನಾನು ವಿರಹವೇದನೆಯಲ್ಲಿ ಪಾರಾಗಿ ಉಳಿದಿರುವ ಸಂಗತಿಯನ್ನು ಸಾರಿ ಹೇಳುವನು.

நனவினால் நல்கா தவரைக் கனவினால்
காண்டலின் உண்டென் உயிர்.   (1213)

ನನಸಿದಲ್ಲಿ ನನ್ನನ್ನು ಪ್ರೀತಿಸದ ಪ್ರಿಯತಮನನ್ನು ಕನಸಿನಲ್ಲಿ ಕಾಣುವುದರಿಂದಲೇ ನಾನು ಜೀವಂತವಾಗಿ ಉಳಿದಿದ್ದೇನೆ.

கனவினான் உண்டாகும் காமம் நனவினான்
நல்காரை நாடித் தரற்கு.   (1214)

ನನಸಿನಲ್ಲಿ ನನ್ನನ್ನು ಪ್ರೀತಿಸದ ಪ್ರಿಯತಮನನ್ನು ಕನಸಿದಲ್ಲಿ ಆರಸಿ ಕರೆದುಕೊಂಡು ಬರುವುರಿಂದಲೇ ನನಗೆ ಆ ಕನಸಿನಿಂದ ಕಾಮಸುಖವುಂಟಾಗುತ್ತಿದೆ.

நனவினால் கண்டதூஉம் ஆங்கே கனவுந்தான்
கண்ட பொழுதே இனிது.   (1215)

(ಹಿಂದೆ) ನನಸಿನಲ್ಲಿ ಪ್ರಿಯತಮನನ್ನು ಕಾಣುವಾಗ ಉಂಟಾದ ಮಧುರ ಅನುಭವವೇ ಕನಸಿನಲ್ಲಿ ಅವನನ್ನು ಕಾಣುವಾಗಲೂ ನನಗೆ ಸಿಗುತ್ತಿದೆ!

நனவென ஒன்றில்லை ஆயின் கனவினால்
காதலர் நீங்கலர் மன்.   (1216)

ನನಸು ಎನ್ನುವ ಸ್ಥಿತಿಯೊಂದು ಇಲ್ಲ ಎಂದಾದರೆ ಕನಸಿನಲ್ಲಿ ಕೊಡಿದ ನನ್ನ ಪ್ರಿಯತಮನು ನನ್ನನ್ನು ತೊರೆದು ಎಂದಿಗೂ ಆಗುವುದಿಲ್ಲ.

நனவினால் நல்காக் கொடியார் கனவனால்
என்எம்மைப் பீழிப் பது.   (1217)

ನನಸಿನಲ್ಲಿ ಪ್ರೀತಿಯ ಕರುಣೆ ತೋರದ ಕಠಿಣ ಮನಸ್ಸುಳ್ಳ ಪ್ರಿಯತಮನು ಕಾಸಿನಲ್ಲಿ (ಮಾತ್ರ) ಬಂದು ನನ್ನನ್ನು ಪೀಡಿಸುವುದೇಕೆ?

துஞ்சுங்கால் தோள்மேலர் ஆகி விழிக்குங்கால்
நெஞ்சத்தர் ஆவர் விரைந்து.   (1218)

ನಾನು ನಿದ್ರಿಸಿರುವಾಗ (ಕನಸಿನಲ್ಲಿ ಬಂದು) ನನ್ನ ತೋಳ ಮೇಲೆ ಒರಗಿದವರು, ನನಗೆ ಎಚ್ಚರವಾದೊಡನೆಯೇ ತ್ವರೆಯಾಗಿ ಬಂದು ನನ್ನ ಹೃದಯದಲ್ಲಿ ಸೇರಿಕೊಳ್ಳುವರು.

நனவினால் நல்காரை நோவர் கனவினால்
காதலர்க் காணா தவர்.   (1219)

ಪ್ರೇಮದ ಅನುಭವವಿಲ್ಲದೆ, ಕನಸಿನಲ್ಲಿ ಇನಿಯನನ್ನು ಕಾಣಲಾರದ ಬೆಡಗಿಯರು, ನನಸಿನಲ್ಲಿ ನನಗೆ ಪ್ರೇಮವನ್ನು ಕರುಣಿಸದ ನಲ್ಲನ ಕಲ್ಲೆದೆಯನ್ನು ಕುರಿತು ನಿಂದಿಸಿ ಆಡುವರು.

நனவினால் நம்நீத்தார் என்பர் கனவினால்
காணார்கொல் இவ்வூ ரவர்.   (1220)

ನನಸಿನಲ್ಲಿ ನನ್ನನ್ನು ಅವರು ತೊರೆದು ಹೋದರೆಂದು ಈ ಊರವರು ನಿಂದಿಸಿ ಮಾತಾಡುವರಲ್ಲ! ನನ್ನ ಕನಸಿನಲ್ಲಿ ಅವರು ಬಂದು ಹೋಗುವುದನ್ನು ಕಾಣಲಾರರೆ?