ಕೆಲಸ ಮಾಡುವ ಬಗೆ

சூழ்ச்சி முடிவு துணிவெய்தல் அத்துணிவு
தாழ்ச்சியுள் தங்குதல் தீது.   (671)

ಒಂದು ಕೆಲಸ ಬಗ್ಗೆ, ಹಲವರಲ್ಲಿ ಆಲೋಚಿಸಿ ವಿಚಾರ ಮಾಡಿ ನಿರ್ಧಾರವನ್ನು ಕೈಗೊಳ್ಳಬೇಕು; ಆ ರೀತಿ ಕೈಗೊಂಡ ನಿರ್ಧಾರವನ್ನು ಕಾಲಹರಣದಿಂದ ನಿರ್ಧಾನಿಸಿದರೆ ಅದರಿಂದ ಕೆಡುಕೇ ಆಗುವುದು.

தூங்குக தூங்கிச் செயற்பால தூங்கற்க
தூங்காது செய்யும் வினை.   (672)

ಕಾಲವನ್ನು ತಾಳಿ ನಿಧಾನಿಸಿ ಮಾಡಬೇಕಾದ ಕೆಲಸವನ್ನು ನಿಧಾನಿಸಿಯೇ ಮಾಡಬೇಕು. ಆಲಸ್ಯವಿಲ್ಲದೆ ಕೂಡಲೇ ಮಾಡಬೇಕಾದ ಕೆಲಸವನ್ನು ಒಡನೆಯೇ (ಆಲಸ್ಯವಿಲ್ಲವೆ) ಮಾಡಿ ಪೂರೈಸಬೇಕು.

ஒல்லும்வா யெல்லாம் வினைநன்றே ஒல்லாக்கால்
செல்லும்வாய் நோக்கிச் செயல்.   (673)

ಸಾಧ್ಯವಿರುವ ಎಡೆಯಲ್ಲೆಲ್ಲ ಕೆಲಸಮಾಡಿ ಮುಗಿಸುವುದು ಒಳ್ಳೆಯುದು. ಸಾಧ್ಯವಾಗದ ಎಡೆಯಲ್ಲಿ ಫಲಪ್ರದವಾಗಬಲ್ಲ್ ಉಛಿತ ವಿಧಾನಗಳನ್ನು ನೋಡಿ ಅನುಸರಿಸಿ ಮಾಡಬೇಕು.

வினைபகை என்றிரண்டின் எச்சம் நினையுங்கால்
தீயெச்சம் போலத் தெறும்.   (674)

ತೊಡಗಿದ ಕೆಲಸ, ಹಗೆತನ, ಈ ಎರಡರ ಉಳಿಕೆಗಳು, ವಿಚಾರ ಮಾಡಿ ನೋಡಿದಾಗ, ಕಿಚ್ಚಿನ ಅವಶೇಷದಂತೆ ಅರಿವಾಗದಂತೆ ವ್ಯಾಪಿಸಿ ಕೆಡುಕುಂಟು ಮಾಡುತ್ತವೆ.

பொருள்கருவி காலம் வினையிடனொடு ஐந்தும்
இருள்தீர எண்ணிச் செயல்.   (675)

ಹಣ, ಸಾಧನ, ಕಾಲ, ಕೆಲಸ, ಸ್ಥಳ- ಈ ಐದರ ವಿಷಯದಲ್ಲಿಯೂ ವಿಸ್ತರಣೆಗೆ ಎಡೆಕೊಡದೆ, ಆಲೋಚಿಸಿ ಮಾಡಬೇಕು.

முடிவும் இடையூறும் முற்றியாங்கு எய்தும்
படுபயனும் பார்த்துச் செயல்.   (676)

ಕೆಲಸವನ್ನು ಮುಗಿಸುವ ರೀತಿ, ನಡುವೆ ಬರುವ ಅಡಚಣೆಗಳು, ಮುಗಿದ ಮೇಲೆ ದೊರೆಯುವ ಹಿರಿಯ ಪ್ರಯೋಜನ ಇವುಗಳನ್ನು ವಿಚಾರಮಾಡೀ ಕೆಲಸದಲ್ಲಿ ತೊಡಗಬೇಕು.

செய்வினை செய்வான் செயன்முறை அவ்வினை
உள்ளறிவான் உள்ளம் கொளல்.   (677)

ಒಂದು ಕೆಲಸದಲ್ಲಿ ತೊಡಗಿದವನು ಮಾಡಬೇಕಾದ ಕರ್ತವ್ಯವೆಂದರೆ, ಆ ಕೆಲಸದ ರಹಸ್ಯವನ್ನು ಚೆನ್ನಾಗಿ ತಿಳಿದವನ ಸಲಹೆಯನ್ನು ಪಡೆದುಕೊಳ್ಳುವುದು.

வினையான் வினையாக்கிக் கோடல் நனைகவுள்
யானையால் யானையாத் தற்று.   (678)

ಒಂದು ಕೆಲಸದಿಂದ ಮತ್ತೊಂದು ಕೆಲಸವು ಆಗುವಂತೆ ಮಾಡೀಕೊಳ್ಳುವುದು. ಮದವುಳ್ಳ ಆನೆಯ ಸಹಾಯದಿಂದ ಮತ್ತೊಂದು ಆನೆಯನ್ನು ಹಿಡಿಯವಂತೆ.

நட்டார்க்கு நல்ல செயலின் விரைந்ததே
ஒட்டாரை ஒட்டிக் கொளல்.   (679)

ಸ್ನೇಹಿತರಾದವರಿಗೆ ಒಳ್ಳೆಯುದು ಮಾಡದಕ್ಕಿಂತ ಮುಖ್ಯವಾಗಿ ಮೊದಲು ಮಾಡಬೇಕಾದ ಕೆಲಸವೆಂದರೆ, ಶತ್ರುಗಳನ್ನು ತಮ್ಮ ಸಮೀಪಕ್ಕೆ ಸೆಳೆದುಕೊಳ್ಳುವುದು.

உறைசிறியார் உள்நடுங்கல் அஞ்சிக் குறைபெறின்
கொள்வர் பெரியார்ப் பணிந்து.   (680)

ಸಣ್ಣಪುಟ್ಟ ಮಾಡಲಿಕರಾದವರು, ತಮ್ಮ ಪ್ರಜೆಗಳು ಶತ್ರುಗಳಿಂದ ಭೀತರಾದಾಗ, ತಮಗಿಂತ ಬಲಿಷ್ಠರಾದ ಹಗೆಗಳು ತಮಗೆ ಕ್ಷಮೆತೋರಿ ಸಂಧಿಗೆ ಅವಕಾಶ ಕೊಟ್ಟರೆ ಅವರ ಸಾಮಂತಿಕೆಯನ್ನು ತೆಲೆಬಾಗಿ ಒಪ್ಪಿಕೊಳ್ಳುತ್ತಾರೆ.