ಕೇಳುವಿಕೆ

செல்வத்துட் செல்வஞ் செவிச்செல்வம் அச்செல்வம்
செல்வத்து ளெல்லாந் தலை.   (411)

ಕಿವಿಯಿಂದ ಕೇಳರಿಯುವ ಸಿರಿ ಸಿರಿಯೊಳಗೆ ಸಿರಿಯೆನಿಸುವುದು; ಆ ಸಿರಿಯು ಸಿರಿಗಳಲ್ಲೆಲ್ಲಾ ಶ್ರೇಷ್ಠವಾದುದು.

செவுக்குண வில்லாத போழ்து சிறிது
வயிற்றுக்கும் ஈயப் படும்.   (412)

ಕಿವಿಗೆ ಆಹಾರ ಇಲ್ಲವೆಂದಾದ ಮೇಲೆ ಹೊಟ್ಟೆಗೂ ಸ್ವಲ್ಪವೇ ಆಹಾರ ಸಾಕು.

செவியுணவிற் கேள்வி யுடையார் அவியுணவின்
ஆன்றாரோ டொப்பர் நிலத்து.   (413)

ಕಿವಿಗೆ ಆಹಾರವಾದ ಕೇಳುವ ಗುಣವನ್ನು ಹೊಂದಿರುವವರು, ನೆಲದಲ್ಲಿ (ಬಾಳಿದರೂ) ಹವಿಸ್ಸನ್ನು ಉಣ್ಣುವ ದೇವರಿಗೆ ಸಮಾನರು.

கற்றில னாயினுங் கேட்க அஃதொருவற்கு
ஒற்கத்தின் ஊற்றாந் துணை.   (414)

ಕಲಿಯದವನಾದರೂ ಕಲಿತವರಿಂದ ಕೇಳಿ ಅರಿಯಬೇಕು. ಅದು ಒಬ್ಬನಿಗೆ ಕಷ್ಟಕಾಲದಲ್ಲ ಊರುಗೋಲಾಗಿ ಆಧಾರವೆನಿಸುವುದು.

இழுக்கல் உடையுழி ஊற்றுக்கோல் அற்றே
ஒழுக்க முடையார்வாய்ச் சொல்.   (415)

ಒಳ್ಳೆಯ ನಡೆಯುಳ್ಳ ಜಾಣರ ಸೊಲ್ಲುಗಳು, ಇಳಿಜಾರಾದ ಕುಸಿಯುವ ನೆಲದಲ್ಲಿ ಊರುಗೋಲಿನಂತೆ, ಬಾಳಿನಲ್ಲಿ ನೆರವಾಗುವುವು.

எனைத்தானும் நல்லவை கேட்க அனைத்தானும்
ஆன்ற பெருமை தரும்.   (416)

ಎಷ್ಟೇ ಕಿರಿದಾದರೂ ಒಳಿತನ್ನು ಕೇಳರಿಯುಬೇಕು; ಕೇಳಿದ ಪ್ರಮಾಣಕ್ಕನು ಗುಣವಾಗಿ ಅದು ತುಂಬಿದ ಹಿರಿಮೆಯನ್ನು ತರುವುದು.

பிழைத்துணர்ந்தும் பேதைமை சொல்லா ரிழைத்துணர்ந்
தீண்டிய கேள்வி யவர்.   (417)

(ಗ್ರಂಥಗಳನ್ನು ಓದಿ) ಸೂಕ್ಷ್ಮವಾಗಿ ಅರಿತು, ಬೇರೆಯವರಿಂದಲೂ ಕೇಳಿ ತಿಳಿದುಕೊಂಡವರು, ಒಂದು ವಿಷಯವನ್ನು ತಪ್ಪಾಗಿ ಗ್ರಹಿಸಿದ್ದರೂ, ಅದನ್ನು ವ್ಯಕ್ತಪಡಿಸುವಾಗ ದಡ್ಡತನವನ್ನು ತೋರುವುದಿಲ್ಲ.

கேட்பினுங் கேளாத் தகையவே கேள்வியால்
தோட்கப் படாத செவி.   (418)

ಕೇಳಿ, ಕೇಳಿ ಸಂಸ್ಕಾರಗೊಳ್ಳದ ಕಿವಿ, ಇದ್ದೂ ಕಿವುಡಾದಂತೆ.

நுணங்கிய கேள்விய ரல்லார் வணங்கிய
வாயின ராதல் அரிது.   (419)

ಸುಸಂಸ್ಕೃತ ವಿಚಾರಗಳನ್ನು ಕೇಳರಿಯದವರು, ವಿನಯಪರವಾದ ಮಾತುಗಳನ್ನಾಡುವುದು ಸಾಧ್ಯವಿಲ್ಲ.

செவியிற் சுவையுணரா வாயுணர்வின் மாக்கள்
அவியினும் வாழினும் என்.   (420)

ಕಿವಿಯಿಂದ ಕೇಳುವ ಸವಿಯಿಲ್ಲದೆ, ಬಾಯ ಸವಿ ಮಾತ್ರ ತಿಳಿದವರು ಸತ್ತರೇನು, ಬದುಕ್ಕಿದ್ದರೇನು?