ಸಂಜೆಯ ವೇಳೆಯನ್ನು ಕಂಡು ದ

மாலையோ அல்லை மணந்தார் உயிருண்ணும்
வேலைநீ வாழி பொழுது.   (1221)

ಸಂಧ್ಯಾ ಸಮಯವೇ ನೀನು ನೂರ್ಗಾಲ ಬಾಳು! ನೀನು ಸಂಧ್ಯಾ ಕಾಲವೆ? ಅಲ್ಲ, ವಿರಹದಿಂದ ಸೊರಗಿದ ವಿವಾಹಿತ ಸ್ತ್ರೀಯರ ಪ್ರಾಣವನ್ನು ಹೀರುವ ಪ್ರಳಯ ಕಾಲ ನೀನು!

புன்கண்ணை வாழி மருள்மாலை எம்கேள்போல்
வன்கண்ண தோநின் துணை.   (1222)

ಮರುಳು ಸಂಧ್ಯಾ ಸಮಯವೇ ನೀನು ನನ್ನಂತೆ ಮ್ಲಾನವಾಗಿ ದುಃಖಿಸುತ್ತರುವೆಯಲ್ಲ! ನಿನ್ನ ಒಡನಾಡಿಯೂ ನನ್ನ ಇನಿಯನಂತೆ ಕಠಿಣ ಮನಸ್ಕನಾದ ನಿರ್ದಯಿಯೋ!

பனிஅரும்பிப் பைதல்கொள் மாலை துனிஅரும்பித்
துன்பம் வளர வரும்.   (1223)

(ಇನಿಯನೊಡಗೂಡಿ ಇರುವಾಗ) ಹನಿದೋರಿ ಹಸಿರು ಹೊದ್ದು ಬರುತ್ತಿದ್ದೆ ಸಂಧ್ಯಾ ಸಮಯವು ಇಂದು ಜುಗ್ಯ್ಪ್ಸೆ ತೋರಿ ದುಃಖವನ್ನು ಹೆಚ್ಚಿಸಲು ಬರುತ್ತಿದೆ.

காதலர் இல்வழி மாலை கொலைக்களத்து
ஏதிலர் போல வரும்.   (1224)

ನನ್ನ ಇನಿಯನು ಇಲ್ಲದ ಈ ಸಮಯದಲ್ಲಿ ಸಂಧ್ಯೆಯು ವಧ್ಯಸ್ಥಾನಕ್ಕೆ ಕಟುಕನು ಬರುವಂತೆ ಆಗಮಿಸುತ್ತಿದೆ!

காலைக்குச் செய்தநன்று என்கொல் எவன்கொல்யான்
மாலைக்குச் செய்த பகை.   (1225)

ನಾನು ಪ್ರಾತಃಕಾಲ ಸಮಯಕ್ಕೆ ಮಾಡಿದ ಒಳಿತೇನು? (ನನ್ನನ್ನು ದುಃಖಕ್ಕೀಡು ಮಾಡುತ್ತಿರುವ) ಸಂಧ್ಯಾ ಸಮಯಕ್ಕೆ ಮಾಡಿದ ಕೆಡುಕೇನು?

மாலைநோய் செய்தல் மணந்தார் அகலாத
காலை அறிந்த திலேன்.   (1226)

ಸಂಧ್ಯಾ ಸಮಯವು (ಇಪ್ಪೊಂದು) ದುಃಖವುಂಟು ಮಾಡಬಲ್ಲುದೆಂಬುದನ್ನು ಇನಿಯನು ನನ್ನನ್ನು ಬಿಟ್ಟು ಅಗಲದೆ ನನ್ನ ಬಳಿಯಲ್ಲೇ ಇರುವಾಗ ನಾನು ಅರಿಯಲಿಲ್ಲ.

காலை அரும்பிப் பகலெல்லாம் போதாகி
மாலை மலரும்இந் நோய்.   (1227)

ಈ ಕಾಮವೇದನೆಯು, ಪ್ರಾತಃಕಾಲದಲ್ಲಿ ಮೊಗ್ಗಾಗಿ ಮೊಳೆತು, ಹಗಲೆಲ್ಲ ಬೆಳೆದು, ಸಾಯು ಸಮಯದಲ್ಲಿ (ಹೂವಾಗಿ) ಅರಳಿಕೊಳ್ಳುವುದು.

அழல்போலும் மாலைக்குத் தூதாகி ஆயன்
குழல்போலும் கொல்லும் படை.   (1228)

ಕುರುಂಬನ ಕೊಳಲದನಿಯು, ಕಿಚ್ಚಿನಂತೆ ವ್ಯಾಪಿಸುತ್ತ ಸಂಕಟಪಡಿಸುವ ಸಾಯುಕಾಲಕ್ಕೆದೂತನಾಗಿ, ನನ್ನನ್ನು ಕೊಲ್ಲಲು ಬರುವ ಪಡೆಯನ್ನು ಹೋಲುತ್ತಿದೆ.

பதிமருண்டு பைதல் உழக்கும் மதிமருண்டு
மாலை படர்தரும் போழ்து.   (1229)

ಸಂಧ್ಯಾ ಕಾಲವು, ಚಿತ್ತಭ್ರಮೆಯನ್ನು ಕವಿಸಿವ ರೋತಿಯಲ್ಲಿ ಹರಡುತ್ತಿರುವಾಗ ನನ್ನಂತೆ ಊರೆಲ್ಲವು ಚಿತ್ತ ವಿಕಲ್ಪದಿಂದ ದುಃಖವನ್ನು ಅನುಭವಿಸುತ್ತಿದೆ.

பொருள்மாலை யாளரை உள்ளி மருள்மாலை
மாயும்என் மாயா உயிர்.   (1230)

ಇನಿಯನ ವಿರಹದಿಂದ ಇದುವರೆಗೆ ನಶಿಸದೆ ಉಳಿದಿರುವ ನನ್ನ ಪ್ರಾಣವು, ಹಣದ ಗಳಿಕೆಯೇ ಮುಖ್ಯವಾಗಿ ಅಗಲಿದ ಅವನನ್ನು ನೆನೆನೆನೆದು, ಕೃಶವಾಗಿ, ಈ ಮರುಳು ಹಿಡಿಸುವ ಸಂಧ್ಯೆಯ ಹೊತ್ತಿನಲ್ಲಿ ಹಾರಿಹೋಗುತ್ತಿದೆ!