ತಿರಸ್ಕಾರ

புல்லா திராஅப் புலத்தை அவருறும்
அல்லல்நோய் காண்கம் சிறிது.   (1301)

ಅವನನ್ನು (ಪ್ರಿಯತಮನನ್ನು) ಅಪ್ಪಿಕೊಲದೆ, ಪ್ರಾಣಯ ಕೋಪದಿಂದ ತಿರಸ್ಕರಿಸು! ಅವನು ಅನುಭವಿಸುವ ವಿರಹ ದುಃಖವನ್ನು ಸ್ವಲ್ಪ ನೋಡೋಣ.

உப்பமைந் தற்றால் புலவி அதுசிறிது
மிக்கற்றால் நீள விடல்.   (1302)

ಆಹಾರದಲ್ಲಿ ಉಪ್ಪು ಹಿತವಾಗಿ ಬರೆತಂತೆ ಪ್ರಣಯ ಕಲಹ ಕೂಡ; ಅದನ್ನು ಅತಿಯಾಗಿ ಬಳಸುವುದು, ಉಪ್ಪನ್ನು ಆಹಾರದಲ್ಲಿ ಸ್ವಲ್ಪ ಹೆಚ್ಚಾಗಿ ಸೇರಿಸಿದಂತೆ

அலந்தாரை அல்லல்நோய் செய்தற்றால் தம்மைப்
புலந்தாரைப் புல்லா விடல்.   (1303)

ಪ್ರಣಯ ಕಲಹದಿಂದ ಮುನಿಸಿಕೊಂಡು ದೂರವಿರುವ ಪ್ರಿಯತಮೆಯೊಂದಿಗೆ ಆಗ್ರಘಪಟ್ಟು, ಅವಳನ್ನು ಆಲಿಂಗನ ಮಾಡಿಕೊಳ್ಳದೆ ಬಿಡುವುದು, ಸುಃಖದಿಂದ ನೊಂದವರನ್ನು ಮತ್ತಷ್ಟು ವೇದನೆಗೆ ಗುರಿಮಾಡಿದಂತೆ.

ஊடி யவரை உணராமை வாடிய
வள்ளி முதலரிந் தற்று.   (1304)

ಪ್ರಣಯ ಕಲಹದಲ್ಲಿ ಮುನಿಸಿಕೊಂಡವರನ್ನು ಸಮಾಧಾನಪಡಿಸಿ ಪ್ರೀತಿ ತೋರದಿರುವುದು ಮೊದಲೇ ಬಾಡುತ್ತಿರುವ ಬಳ್ಳಿಯ ಬೇರನ್ನೇ ಕತ್ತರಿಸಿ ಹಾಕಿದಂತೆ.

நலத்தகை நல்லவர்க் கேஎர் புலத்தகை
பூவன்ன கண்ணார் அகத்து.   (1305)

ಹೂವಿನಂತಹ ಕಣ್ಣುಗಳುಳ್ಳ ಕಾಮಿನಿಯರು ತೋರುವ ಪ್ರಣಯದ ಮುನಿಸಿನ ಸೊಬಗು, ಒಳ್ಳೆಯ ಗುಣವುಳ್ಳ ಸತ್ವರುಷರಿಗೆ ಮರಗು ನೀಡುವುದು.

துனியும் புலவியும் இல்லாயின் காமம்
கனியும் கருக்காயும் அற்று.   (1306)

ಪ್ರಣಯದ ಮುನಿಸೂ, ತಿರಸ್ಕಾರವೂ ಇಲ್ಲದ ಕಾಮಸುಖ, ಕಳಿತ ಹಣ್ಣೆನಂತೆಯೂ ಇನ್ನೂ ಮಾಗದ ಮಿಡಿಕಾಯಂತೆಯೂ- ನಿಷ್ಫಲವಾಗಿ ಹೋಗುತ್ತದೆ.

ஊடலின் உண்டாங்கோர் துன்பம் புணர்வது
நீடுவ தன்றுகொல் என்று.   (1307)

ಕೂಡಿ ಸುಖಿಸುವ ಪ್ರೀತಿಯು ಇನ್ನು ಮೇಲೆ ಹೆಚ್ಚು ಕಾಲ ಇರುವುದೋ ಇಲ್ಲವೋ ಎಂದು ಪರಿತಾಪದಿಂದ ಆಲೋಚಿಸುವುದರಿಂದ, ಪ್ರಣಯ ಕೋಪದಲ್ಲಿಯೂ ಕೂಡ ಒಂದು ವಿಧವಾದ ದುಃಖವು ಹುದುಗಿರುತ್ತದೆ.

நோதல் எவன்மற்று நொந்தாரென் றஃதறியும்
காதலர் இல்லா வழி.   (1308)

ತನ್ನಿಂದ ಪ್ರಿಯನು ನೊಂದಿರುವನೆಂದು, ಅರಿಯಬಲ್ಲ ಪ್ರಿಯತಮೆಯು ಇಲ್ಲದಿರುವಾಗ, ಹಾಗೆ ದುಃಖಿಸುವುದರಿಂದ ಫಲವೇನು?

நீரும் நிழல தினிதே புலவியும்
வீழுநர் கண்ணே இனிது.   (1309)

ತಂಪಾದ ನೆಳಲಲ್ಲಿರುವ ನೀರು ಸಿಹಿಯಾಗಿರುವಂತೆ ಪ್ರಿಯರಾದವರೆಡೆಯಲ್ಲಿ ಪ್ರಣಯದ ಮುನಿಸೂ ಮಧುರವೆನ್ನಿಸುತ್ತದೆ.

ஊடல் உணங்க விடுவாரோ டென்னெஞ்சம்
கூடுவேம் என்ப தவா.   (1310)

ಪ್ರಣಯದ ಮುನಿಸಿನಲ್ಲಿ, ಅರ್ಥಮಾಡಿಕೊಳ್ಳದೆ ಸೊರಗಿ ಬಿಟ್ಟುಹೋಗಿತ್ತಿರುವ, ಪ್ರಿಯತಮೆಯಲ್ಲಿ ನನ್ನ ಮನಸ್ಸು ಕೂಡಲೆಳಸುವುದಕ್ಕೆ ಕಾರಣ, ಅವಳ ಮೇಲಿನ ಪ್ರಬಲವಾದ ಇಚ್ಚೆಯಲ್ಲದೆ, ಬೇರೆಯಲ್ಲ.