ಹಗೆತನ

இகலென்ப எல்லா உயிர்க்கும் பகலென்னும்
பண்பின்மை பாரிக்கும் நோய்.   (851)

(ಲೋಕದಲ್ಲಿರುವ) ಜೀವಿಗಳು ಪರಸ್ಪರ ಹೊಂದಿಕೊಳ್ಳದಂತೆ ಬೇರ್ಪಡಿಸುವ ಕೆಟ್ಟ ಜಾಡ್ಯವೇ ಹಗೆತನವೆಂದು (ತಿಳಿದವರು) ಹೇಳುವರು.

பகல்கருதிப் பற்றா செயினும் இகல்கருதி
இன்னாசெய் யாமை தலை.   (852)

ಒಬ್ಬನು ತನಗೆ ಆಗದವರ ಸಬಂಧದಲ್ಲಿ ಅಗಲಿಕೆಯನ್ನು ಬಯಸಿ ಅಹಿತವನ್ನು ಉಂಟು ಮಾಡಿದರೂ, ಅವರಲ್ಲಿ ಹಗೆತನ ಬೆಳೆಸಿ ಕೇಡುಂಟು ಮಾಡದಿರುವುದೇ ಮೇಲು.

இகலென்னும் எவ்வநோய் நீக்கின் தவலில்லாத்
தாவில் விளக்கம் தரும்.   (853)

ಹಗೆಯನವೆನ್ನುವ ದುಃಖಕರವಾದ ನೋವನ್ನು ಒಬ್ಬನು ನೀಗಿದಲ್ಲಿ, ಅಳಿವಿಲ್ಲದ ನೆಲೆಯಾದ ಕೀರ್ತಿಯನ್ನು ಪಡೆಯುವನು.

இன்பத்துள் இன்பம் பயக்கும் இகலென்னும்
துன்பத்துள் துன்பங் கெடின்.   (854)

ಹಗೆತನವೆನ್ನುವ ಅತಿ ಸಂಕಟಕರವಾದ ದುಃಖವನ್ನು ತೊಡೆದು ಹಾಕುವುದರಿಂದ, ಸುಖ ಪ್ರಾಪ್ತಿಯಲ್ಲೀ ಮಿಗಿಲಾದ ಶಾಶ್ವತ ಆನಂದವು ಲಭಿಸುತ್ತದೆ.

இகலெதிர் சாய்ந்தொழுக வல்லாரை யாரே
மிக்லூக்கும் தன்மை யவர்.   (855)

ಮನದಲ್ಲಿ ತೋರುವ ಹಗೆ ತನಕ್ಕೆ ಎಡೆಕೊಡದೆ. ಅದರೆದುರು ನಾಚಿ ತಲೆತಗ್ಗಿಸಿ ನಡೆಯುವವರನ್ನು ಗೆಲ್ಲಬೇಕೆಂಬ ಅಭಿಲಾಶೆಯುಳ್ಳವರಾದರೂ ಯಾರಿದ್ದರೆ?

இகலின் மிகலினிது என்பவன் வாழ்க்கை
தவலும் கெடலும் நணித்து.   (856)

ಹಗೆತನವನ್ನು ಸಾಧಿಸುವುದರಿಂದ ಸಂತೋಷವಿದೆ ಎಂದು ತಿಳಿಯುವವನ ಬಾಳುವೆಯು ಅತಿ ಶೀಘ್ರದಲ್ಲಿಯೇ ಸೋಲನ್ನು ಅಳಿವನ್ನು ಪಡೆಯುವುದು.

மிகல்மேவல் மெய்ப்பொருள் காணார் இகல்மேவல்
இன்னா அறிவி னவர்.   (857)

ಹಗೆತನವನ್ನೇ ಬಯಸುವ ಕೆಟ್ಟ ಅರಿವುಳ್ಳವರು, ಜಯ ಸಾಧಕವಾದ ಸತ್ಯವನ್ನು ಕಾಣಲಾರರು.

இகலிற்கு எதிர்சாய்தல் ஆக்கம் அதனை
மிக்லூக்கின் ஊக்குமாம் கேடு.   (858)

ಮನದಲ್ಲಿ ತೋರುವ ಹಗೆತನಕ್ಕೆ ನಾಚಿ, ಅದರೆದುರು ತಲೆತಗ್ಗಿಸಿ ನಡೆದರೆ ಅದೇ ಐಶ್ವರ್ಯ; ಆ ಹಗೆತನವನ್ನು ಬಯಸಿ ಕೈಕೊಂಡರೆ ಅದೇ ಕೇಡಿಗೆ ಕಾರಣ.

இகல்காணான் ஆக்கம் வருங்கால் அதனை
மிகல்காணும் கேடு தரற்கு.   (859)

(ಒಬ್ಬನಿಗೆ) ಐಶ್ವರ್ಯವು ಬರುವಾಗ, ಹಗೆತನವನ್ನು ಕಾಣಲಾರನು (ಎಣಿಸುವುದಿಲ್ಲ). ಆದರೆ, ತನಗೆ ಕೇಡು ಬರುವ ಕಾಲದಲ್ಲಿ ಆ ಹಗೆತನವನ್ನು ವೃದ್ಧಿಪಡಿಸಿಕೊಳ್ಳುತ್ತಾನೆ.

இகலானாம் இன்னாத எல்லாம் நகலானாம்
நன்னயம் என்னும் செருக்கு.   (860)

ಒಬ್ಬನಿಗೆ ಹಗೆತನದಿಂದ ದುಃಖವನ್ನು ತರುವ ಕೇಡುಗಳೆಲ್ಲವೂ ಉಂಟಾಗುತ್ತದೆ. ಆದರೆ ಮನವರಳಿಸುವ ಪ್ರೀತಿಯಿಂದ ಸದ್ಭಾವನೆಯೆಂಬ ಹಿರಿಮೆಯುಂಟಾಗುತ್ತದೆ.