ಕೂಡುಗೆ

வறியார்க்கொன்று ஈவதே ஈகைமற் றெல்லாம்
குறியெதிர்ப்பை நீர துடைத்து.   (221)

ಬಡತನದಲ್ಲಿರುವವರಿಗೆ ಒಂದು ವಸ್ತುವನ್ನು ನೀಡಿದರೆ ಅದೇ ನಿಜವಾದ ಕೊಡುಗೆ; ಉಳಿದವರಿಗೆ ಕೊಡುವುದು ಎಲ್ಲ ಪ್ರತಿ ನಿರೀಕ್ಷಿಯಿಂದ ಕೊಟ್ಟ ಕೊಡುಗೆ ಎನಿಸಿಕೊಳ್ಳುವುದು.

நல்லாறு எனினும் கொளல்தீது மேலுலகம்
இல்லெனினும் ஈதலே நன்று.   (222)

ಬೇರೆಯವರಿಂದ ಬೇಡಿ ಪಡೆದುಕೊಳ್ಳುವುದು ಒಳ್ಳೆಯ ಮಾರ್ಗವೆಂದು ಹಲವರು ಹೇಳಿದರೂ ಅದು ಪಾಪಕರ; ಕೊಡುವುದರಿಂದ ಮೇಲುಲೋಕ (ಸ್ವರ್ಗ) ವು ತನಗೆ ಇಲ್ಲ ಎಂದರೂ ಈಯುವುದೇ ಒಳ್ಳೆಯ ಮಾರ್ಗ.

இலனென்னும் எவ்வம் உரையாமை ஈதல்
குலனுடையான் கண்ணே யுள.   (223)

ತನ್ನಲ್ಲಿ ಏನು ಇಲ್ಲವಾದರೂ ಆ ದುಃಖವನ್ನು ಯಾರಲ್ಲಿಯೂಹೇಳಿಕೊಳ್ಳದೆ ಇತರರಿಗೆ ಕೊಡುವ ಗುಣವು ಕುಲವುಳ್ಳವನ ಲಕ್ಷಣವೆನಿಸಿಕೊಳ್ಳುವುದು.

இன்னாது இரக்கப் படுதல் இரந்தவர்
இன்முகங் காணும் அளவு.   (224)

ಬೇಡುವವರ ಆರ್ತತೆಯ ಅಹಿತರವಾದುದು; ಅವರ ಮನಸ್ಸು ತೃಪ್ತಿಯಾಗಿ ಮುಖವು ನಗೆಯಿಂದ ಅರಳುವವರೆಗೂ ಕೊಡುಗೈಯಿಂದ ಕೊಡಬೇಕು.

ஆற்றுவார் ஆற்றல் பசிஆற்றல் அப்பசியை
மாற்றுவார் ஆற்றலின் பின்.   (225)

ತಪೋಬಲವೆಂದರೆ ಹಸಿವನ್ನು ಅಡಗಿಸಿಕೊಳ್ಳುವ ಶಕ್ತಿ. ಆದರೆ ಹಸಿವಿನಿಂದ ಕೆಂಗೆಟ್ಟವರಿಗೆ ಉಣವಿತ್ತು ಅವರ ಹಸಿವನ್ನು ಕಳೆಯುವುದರಿಂದ ಅದು ಎರೆಡನೆಯದು.

அற்றார் அழிபசி தீர்த்தல் அஃதொருவன்
பெற்றான் பொருள்வைப் புழி.   (226)

ಆರ್ತರಾದವರ ಕಡು ಹಸಿವನ್ನು ತೀರಿಸಬೇಕು; ಅದೇ ಪಡೆದವನು ತನ್ನ ಸಿರಿಯನ್ನು ಕೂಡಿಡುವ ನೆಲೆ.

பாத்தூண் மரீஇ யவனைப் பசியென்னும்
தீப்பிணி தீண்டல் அரிது.   (227)

ತಾನು ಪಡೆದ ಸೊತ್ತನ್ನು ಇತರರೊಡನೆ ಪಾಲ್ಗೊಂಡು ಉಣ್ಣುವವನನ್ನು ಹಸಿವೆನ್ನುವ ಕ್ರೂರ ಬಾಧೆ ತಟ್ಟುವುದಿಲ್ಲ.

ஈத்துவக்கும் இன்பம் அறியார்கொல் தாமுடைமை
வைத்திழக்கும் வன்க ணவர்.   (228)

ತಾವು ಗಳಿಸಿರುವ ಸೊತ್ತನ್ನು ಬಚ್ಚಿಟ್ಟು ಕಳೆಯುವ ಕಲ್ಲು ಮನಸ್ಸಿನವರು ಕೊಟ್ಟು ನಲಿಯುವ ಸುಖವನ್ನು ಅರಿಯಲಾರರೆ?

இரத்தலின் இன்னாது மன்ற நிரப்பிய
தாமே தமியர் உணல்.   (229)

ಕೂಡಿಟ್ಟುದನ್ನು ಇತರರಿಗೆ ಕೊಡದೆ ತಾವೇ ತನಿಯಾಗಿ ಉಂಟು ಅನುಭವಿಸುವುದು, ಬೇಡಿ ಉಣ್ಣುವುದಕ್ಕಿಂತ ಕೀಳು.

சாதலின் இன்னாத தில்லை இனிததூஉம்
ஈதல் இயையாக் கடை.   (230)

ಸಾಯುವುದಕ್ಕಿಂತ ಸಂಕಟಕರವಾದುದು ಬೇರೆ ಇಲ್ಲ; ಆದರೆ ಕೊಡಲು ಸಾಧ್ಯವಾಗದಿರುವ ಕಡೆ ಆ ಸಾವೇ ಸುಖಕರವೆನಿಸುವುದು.