ಹೆಣ್ಣು ಹೇಳಿದಂತೆ ಕೇಳುವು

மனைவிழைவார் மாண்பயன் எய்தார் வினைவிழையார்
வேண்டாப் பொருளும் அது.   (901)

ಹೆಂಡತಿ ಹೇಳಿದಂತೆ ಕೇಳಿ ನಡೆಯುವವರು ಶ್ರೇಷ್ಠವಾದ ಫಲವನ್ನು ಪಡೆಯಲಾರರು. ನಿಜವಾದ ಕರ್ತವ್ಯವನ್ನು ಬಯಸುವವರಿಗೆ ಬೇಡವಾದ ಸಂಗತಿ ಅದುವೆ.

பேணாது பெண்விழைவான் ஆக்கம் பெரியதோர்
நாணாக நாணுத் தரும்.   (902)

ಕರ್ತವ್ಯವನ್ನು ಮರೆತು ಹೆಂಡತಿಯ ಹೆಣ್ತನಕ್ಕೆ ಮನಸೋತವನ ಐಶ್ವರ್ಯವು ನಾಚಿಕೆಗೇಡಿನವಾಗಿ ಅವಮಾನವನ್ನು ತರುತ್ತದೆ.

இல்லாள்கண் தாழ்ந்த இயல்பின்மை எஞ்ஞான்றும்
நல்லாருள் நாணுத் தரும்.   (903)

ಗೃಹಿಣಿಯಾದವಳಿಗೆ ಹೆದರಿ ವಿವೇಚನೆಯಿಲ್ಲದೆ ನಡೆದುಕೊಳ್ಳುವವನು ಸಂಪನ್ನರ ನಡುವೆ ಅವಹೇಳನಕ್ಕೆ ಗುರಿಯಾಗುತ್ತಾನೆ.

மனையாளை அஞ்சும் மறுமையி லாளன்
வினையாண்மை வீறெய்த லின்று.   (904)

ಗೃಹಿಣಿಯಾದವಳಿಗೆ ಅಂಜಿ, ಪರಲೋಕದ ಫಲವನ್ನು ಕಳೆದುಕೊಂಡವನಿಗೆ, ಕಾರ್ಯವನ್ನು ಸಾಧಿಸುವ ಶಕ್ತಿ ಇದ್ದರೂ ಅದು ಸಜ್ಜನರ ಗೌರವಕ್ಕೆ ಪಾತ್ರವಾಗುವುದಿಲ್ಲ.

இல்லாளை அஞ்சுவான் அஞ்சுமற் றெஞ்ஞான்றும்
நல்லார்க்கு நல்ல செயல்.   (905)

ಮನೆಯೊಡತಿಗೆ ಅಂಜಿ ಬಾಳುವವನು, ಯಾವಾಗಲೂ, ಸಜ್ಜನರಿಗೆ ಒಳ್ಳೆಯದನ್ನು ಮಾಡಲು ಅಂಜುವನು.

இமையாரின் வாழினும் பாடிலரே இல்லாள்
அமையார்தோள் அஞ்சு பவர்.   (906)

ಮನೆಯಾಕೆಯ ಬಿದಿರು ಕಾಂಡದಂಥ ನಳಿದೊಳಿನ ತೆಕ್ಕೆಗೆ ಅಂಜಿ ಬಾಳುವವರು ದೇವತೆಗಳಂತೆ (ಈ ಲೋಕದಲ್ಲಿ) ಬಾಳಿದರೂ ಹಿರಿಮೆ ಇಲ್ಲದವರೇ ಆಗುತ್ತಾರೆ.

பெண்ணேவல் செய்தொழுகும் ஆண்மையின் நாணுடைப்
பெண்ணே பெருமை உடைத்து.   (907)

ಹೆಣ್ಣಿನ ಆಜ್ಞೆಯನ್ನು ಶಿರಸಾವಹಿಸಿ ನಡೆಯುವವನ ಪುರುಷತ್ವಕ್ಕಿಂತ, ನಾಚಿಕೆಯೇ ಸ್ವಭಾವವಾಗುಳ್ಳ ಹೆಣ್ಣಿನ ಹಿರಿಮೆಯೇ ದೊಡ್ಡದು.

நட்டார் குறைமுடியார் நன்றாற்றார் நன்னுதலாள்
பெட்டாங்கு ஒழுகு பவர்.   (908)

ಮೃದು ನೊಸಲಿನ ಮನೆಯಾಕೆಯ ಇಚ್ಛೆಯಂತೆ ನಡೆದುಕೊಳ್ಳುವವರು, ತಮ್ಮ ಸ್ನೇಹಿತರಿಗೆ ಒದಗಿದ ಕಷ್ಟಗಳನ್ನು ನೀಗಿಸಲಾರರು; ಒಳ್ಲೆಯ ಕೆಲಸಗಳನ್ನೂ ಮಾಡಲಾರರು.

அறவினையும் ஆன்ற பொருளும் பிறவினையும்
பெண்ஏவல் செய்வார்கண் இல்.   (909)

ಒಳ್ಳೆಯ ಧರ್ಮ ಕಾರ್ಯಗಳೂ, ಅದರಿಂದ ಗಳಿಸಿದ ಸಿರಿ ಸಂಪಾದನೆಯೂ, ಮತ್ತಿತರ ಕರ್ತವ್ಯಗಳೂ, ಹೆಣ್ಣಿನ ಆಜ್ಞಾಧಾರಿಗಳಾದವರಲ್ಲಿ ಸೇರುವುದಿಲ್ಲ.

எண்சேர்ந்த நெஞ்சத் திடனுடையார்க்கு எஞ்ஞான்றும்
பெண்சேர்ந்தாம் பேதைமை இல்.   (910)

ಒಳ್ಳೆಯದನ್ನು ಆಲೋಚಿಸುವ ಮನಸ್ಸೂ ಅದರಿಂದ ಪಡೆದ ಸಿರಿಯೂ ಉಳ್ಳವರಲ್ಲಿ, ಹೆಣ್ಣಿನ ದಾಸ್ಯತೆಯಿಂದ ಉಂಟಾಗುವ ಆಜ್ಞಾನವಿರುವುದಿಲ್ಲ.