ಪಡೆಗಳ ಹಿರಿಮೆ

உறுப்பமைந்து ஊறஞ்சா வெல்படை வேந்தன்
வெறுக்கையுள் எல்லாம் தலை.   (761)

ಚತುರಂಗ ಬಲವನ್ನು ಕೂಡಿಕುಂಡು, ಗಾಯಗಳಿಗೆ ಅಂಜದೆ ಶತ್ರುಗಳೊಂದಿಗೆ ಹೋರಾಡಿ ಜಯ ತರುವಂಥ್ ಪಡೆಯು ಅರಸನ ಸೊತ್ತುಗಳಲ್ಲೆಲ್ಲಾ ಮಿಗಿಲಾದುದೆನಿಸುವುದು.

உலைவிடத்து ஊறஞ்சா வன்கண் தொலைவிடத்துத்
தொல்படைக் கல்லால் அரிது.   (762)

ತನ್ನ ಬಲ ಕುಂದಿ ಹೋರಾಟದಲ್ಲಿ ಅಳಿವು ಬಂದಾಗಲೂ, ಸಂಕಟಗಳಿಗೆ ಹೆದರದೆ ಅರಸನ ಬೆಂಗಾವಲಿಗೆ ನಿಲ್ಲುವ ಎದೆಗಾರಿಕೆ, ಪರಂಪರಾಗತವಾದ ಹಿರಿಮೆಯುಳ್ಳ ಪಡೆಗಲ್ಲದೆ ಬೇರೆ ಪಡೆಗಳಿಗೆ ಸಾಧ್ಯವಿಲ್ಲ.

ஒலித்தக்கால் என்னாம் உவரி எல§ப்பகை
நாகம் உயிர்ப்பக் கெடும்.   (763)

ಇಲಿಗಳ ಸಮೂಹವು (ಶತ್ರುಸೇನೆ) ಭೋರ್ಗರೆವ ಕಡಲಿನಂತೆ ಗರ್ಜಿಸಿದರ ನಾಗರಹಾವಿಗೆ ಹಾನಿಯೇನು? ಆ ನಾಗರಹಾವು ಒಮ್ಮೆ ಉಸಿರು ಬಿಟ್ಟರೆ ಸಾಕು ಇಲಿಗಳೆಲ್ಲ ನಾಶವಾಗುವುದು.

அழிவின்றி அறைபோகா தாகி வழிவந்த
வன்க ணதுவே படை.   (764)

ಯುದ್ಧ ಕಣದಲ್ಲಿ ಅಳಿವಿಲ್ಲದೆ, ಹಗೆಗಳ ವಂಚನೆಗೆ ತುತ್ತಾಗದೆ, ಪರಂಪರೆಯಿಂದ ಬಂದ ಪರಾಕ್ರಮವುಳ್ಳದೆ ಅರಸನ ಪಡೆಯೆನಿಸಿಕೊಳ್ಳುವುದು.

கூற்றுடன்று மேல்வரினும் கூடி எதிர்நிற்கும்
ஆற்ற லதுவே படை.   (765)

ಯಮನೇ ಕೋಪಗೊಂಡು ಮೇಲೆ ಬಿದ್ದರೂ, ಒಂದಾಗಿ ಕೂಡಿ ಎದುರಿಸಿ ನಿಲ್ಲುವ ಎದೆಗಾರಿಕೆಯುಳ್ಳದೇ ಪಡೆ ಎನಿಸಿಕೊಳ್ಳುವುದು.

மறமானம் மாண்ட வழிச்செலவு தேற்றம்
எனநான்கே ஏமம் படைக்கு.   (766)

ಪರಾಕ್ರಮ, ಅಭಿಮಾನ, ತನ್ನ ಹಿಂದಿನ ವೀರರು ತುಳಿದ ಹಾದಿಯಲ್ಲಿ ಮುನ್ನುಗ್ಗುವ ನಡೆ, ಅರಸನ ವಿಶ್ವಾಸ ಮನ್ನುವ ನಾಲ್ಕು ಗುಣಗಳೇ ಪಡೆಗೆ ಬೆಂಗಾವಲಾಗುವುದು.

தார்தாங்கிச் செல்வது தானை தலைவந்த
போர்தாங்கும் தன்மை அறிந்து.   (767)

ತನ್ನ ಮೇಲೆ ಬೀಳಲು ಬಂದ ಹಗೆಗಳ ಪಡೆಯನ್ನು ಹಿಮ್ಮೆಟ್ಟಿಸುವ ನೆಲೆಯನ್ನು ತಿಳಿದುಕೊಂಡು, ಶತ್ರು ಪಡೆ ತನ್ನ ಬಳಿ ಸಾರುವ ಮುನ್ನವೇ ತಾನೇ ಮುನ್ನುಗ್ಗಿ ನಡೆಯುವುದು ಪಡೆ.

அடல்தகையும் ஆற்றலும் இல்லெனினும் தானை
படைத்தகையால் பாடு பெறும்.   (768)

ಮೇಲೆ ಬಿದ್ದು ಹೋರಾಡುವ ಕೆಚ್ಚು, ಪರಾಕ್ರಮವೂ ಇಲ್ಲವಾದರೂ, ಪಡೆಯು ತಾನು ಯುದ್ಧವನ್ನು ಎದುರಿಸಲು ಮಾಡಿಕೊಳ್ಳುವ ಸಿದ್ಧತ್ರ್ಯಿಂದಲೇ ಹಿರಿಮೆಯನ್ನು ಪಡೆಯುವುದು.

சிறுமையும் செல்லாத் துனியும் வறுமையும்
இல்லாயின் வெல்லும் படை.   (769)

(ಗಾತ್ರದಲ್ಲಿ) ಕಿರಿದಾಗಿರುವುದು, ಅನುಚಿತವಾದ ಕೋಪ ಮತ್ತು ಬಡತನ ಇವು ಇಲ್ಲವಾದಲ್ಲಿ ಪಡೆಯು ಯುದ್ಧದಲ್ಲಿ ಗೆಲ್ಲುತ್ತದೆ.

நிலைமக்கள் சால உடைத்தெனினும் தானை
தலைமக்கள் இல்வழி இல்.   (770)

ಸ್ಥೈರ್ಯವುಳ್ಳ ವೀರರು ಹಲವು ಮುಂದಿ ಇದ್ದರೂ, ಸರಿಯಾದ ನಾಯಕರು ಇಲ್ಲವಾದಲೇ ಆ ಪಡೆಗೆ ಹಿರಿಮೆ ಇಲ್ಲವಾಗುವುದು.