ಸ್ವಗತ ಸಂಭಾಷಣೆ

நினைத்தொன்று சொல்லாயோ நெஞ்சே எனைத்தொன்றும்
எவ்வநோய் தீர்க்கும் மருந்து.   (1241)

ಓ ಮನಸ್ಸೇ, ಈ ಸಹಿಸಲಾರದ ವಿರಹ ಯಾತನೆಯನ್ನು ಪರಿಹರಿಸುವ ಮದ್ದೊಂದನ್ನು ನೀನು ಆಲೋಚಿಸಿ ಹೇಳಲಾರೆಯಾ?

காதல் அவரிலர் ஆகநீ நோவது
பேதைமை வாழியென் நெஞ்சு.   (1242)

ಓ ನನ್ನ ಮನಸ್ಸೇ ನೀನು ಬಾಳು! ಅವರು ಪ್ರೀತಿತಿಲ್ಲದವರಾಗಿರುವಾಗ ನೀನು ಮಾತ್ರ ಅವರಿಗಾಗಿ ವ್ಯಥೆ ಪಡುತ್ತಿರುವುದು ನಿನ್ನ ಮೂರ್ಖತನವಲ್ಲವೆ!

இருந்துள்ளி என்பரிதல் நெஞ்சே பரிந்துள்ளல்
பைதல்நோய் செய்தார்கண் இல்.   (1243)

ಓ ಮನಸ್ಸೇ, ನನ್ನೊಡನಿದ್ದು ನೀನು ಅವರನ್ನು ನೆನೆದು ದುಃಖಿಸುವುದೇಕೆ ಈ ದಾರುಣವಾದ ಯಾತನೆಯನ್ನುಂಟು ಮಾಡಿದ ಅವರಲ್ಲಿ (ಸ್ವಲ್ಪ ಮಾತ್ರವೂ) ಪ್ರೇಮ ಸ್ಮರಣೆ ಇಲ್ಲವಲ್ಲ!

கண்ணும் கொளச்சேறி நெஞ்சே இவையென்னைத்
தின்னும் அவர்க்காணல் உற்று.   (1244)

ಓ ಮನಸ್ಸೇ! ನೀನು ಅವರ ಬಳಿ ಸಾರುವಾಗ ನನ್ನ ಕಣ್ಣುಗಳನ್ನೂ ಕರೆದುಕೊಂಡು ಹೋಗು! ಅವರನ್ನು ಕಾಣಬೇಕೆಂಬ ತವಕದಿಂದ ಇವು ನನ್ನನ್ನು ಹಿಡಿದು ತಿನ್ನುತ್ತಿವೆ.

செற்றார் எனக்கை விடல்உண்டோ நெஞ்சேயாம்
உற்றால் உறாஅ தவர்.   (1245)

ಓ ಮನಸ್ಸೇ! ನಾವು ಪ್ರೀತಿ ತೋರಿದರೂ, ನಮ್ಮನ್ನು ಪ್ರೀತಿಸದ ಅವರು ನಿರ್ದಯರೆಂದು ಅವರನ್ನು ಕೈಬಿಡಲು ಸಾಧ್ಯವೆ?

கலந்துணர்த்தும் காதலர்க் கண்டாற் புலந்துணராய்
பொய்க்காய்வு காய்திஎன் நெஞ்சு.   (1246)

ಓ ಮನಸ್ಸೆ! ಹಿಂದೆ ನೀನು ಕಾಮಾತುರತೆಯಿಂದ ಕೂಡಿ ರಮಿಸಲು ಬಂದ ಇನಿಯನನ್ನು ಕಂಡಾಗಲೆಲ್ಲ ಹುಸಿ ಮುನಿಸಿನಿಂದ ದೂರ ಸರಿಯುತ್ತದ್ದೆ! ಈಗ ಆಗಲಿಕೆಯಲ್ಲೂ ಅದೇ ಹುಸಿ ಮುನಿಸನ್ನು ಪ್ರಕಟಿಸುತ್ತಿರುವೆಯಲ್ಲ!

காமம் விடுஒன்றோ நாண்விடு நன்னெஞ்சே
யானோ பொறேன்இவ் விரண்டு.   (1247)

ಓ ಮೃದು ಮನಸ್ಸೇ, ಅವರ ಮೇಲಿನ ಮೋಹವನ್ನು ತೊರೆದುಬಿಡು; ಇಲ್ಲವೇ ನಾಚಿಕೆಯನ್ನು ಬಿಟ್ಟುಬಿಡು, ಇವೆರಡನ್ನೂ ಒಟ್ಟಿಗೇ ಸಹಿಸಿಕೊಳ್ಳೂವ ಶಕ್ತಿ ನನ್ನಲ್ಲಿ ಇಲ್ಲವಾಗಿದೆ.

பரிந்தவர் நல்காரென்று ஏங்கிப் பிரிந்தவர்
பின்செல்வாய் பேதைஎன் நெஞ்சு.   (1248)

ಮನಸ್ಸೇ! ವಿರಹದಲ್ಲಿ ತೊಳಲಿದ ನಮ್ಮನ್ನು ಇನಿಯನು ಬಂದು ಕರುಣೆ ತೋರಿ ರಮಿಸಲಿಲ್ಲವೆಂದು ಕೊರಗುವ ನೀನು, ದೂರವಾದ ಅವರ ಹಿಂದೆಯೇ ಸಾರುತ್ತಿರುವೆಯಲ್ಲ! ನೀನೊಂದು ಪೆದ್ದು!

உள்ளத்தார் காத லவரால் உள்ளிநீ
யாருழைச் சேறியென் நெஞ்சு.   (1249)

ಮನಸ್ಸೇ! ಇನಿಯನು ನಿನ್ನಲ್ಲಿಯೇ ನೆಲಸಿರುವಾಗ, ಅವರನ್ನು ನೆನೆದು ನೀನು ಯಾರ ಬಳಿಗೆ ಸಾರುತ್ತಿರುವೆ?

துன்னாத் துறந்தாரை நெஞ்சத்து உடையேமா
இன்னும் இழத்தும் கவின்.   (1250)

ನಮ್ಮೊಡನೆ ಕೂಡಿರಲಾರದೆ ತೊರೆದು ಹೋದ ಪ್ರಿಯತಮನನ್ನು ಅಂತರಂಗದಲ್ಲಿ ಅಡಗಿಸಿಟ್ಟುಕೊಂಡುದರಿಂದ, ಈ ಮೊದಲು ಕಳಿದುಕೊಂಡ ಅಂಗಲಾವಣ್ಯದೊಂದಿಗೆ, ಮನನಲ್ಲಿವೂ ನಾಶವಾಗುತ್ತಿದೆ.