ಪುರುಷ ಯತ್ನ ಪಡೆದಿರುವುದು

அருமை உடைத்தென்று அசாவாமை வேண்டும்
பெருமை முயற்சி தரும்.   (611)

ಇದು ಮುಗಿಸಲು ಕಷ್ಟಸಾಧ್ಯವಾದುದು ಎಂದು ಅಧೀರತೆಗೊಳಗಾಗಬಾರದು; ಪ್ರಯತ್ನದಿಂದ ಹಿರಿಮೆಯು ಲಇಸುತ್ತದೆ.

வினைக்கண் வினைகெடல் ஓம்பல் வினைக்குறை
தீர்ந்தாரின் தீர்ந்தன்று உலகு.   (612)

ಕೆಲಸವನ್ನು ಪೂರ್ತಿಮಾಡದೆ ಅರ್ಧದಲ್ಲಿ ಕೈಬಿಟ್ಟವರನ್ನು ಲೋಕವೂ ಕೈಬಿಡುವುದು; ಅದರಿಂದ ಹಿಡಿದ ಕೆಲಸದಲ್ಲಿ ಬರುವ ಎಡರುತೊಡರುಗಳನ್ನೂ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು.

தாளாண்மை என்னும் தகைமைக்கண் தங்கிற்றே
வேளாண்மை என்னுஞ் செருக்கு.   (613)

ಪರೋಪಕಾರವೆನ್ನುವ ಸಿರಿಯು, ಮಾನುಷ ಪ್ರಯತ್ನವೆನ್ನುವ ಹಿರಿಯ ಗುಣದಲ್ಲಿ ನೆಲಸಿರುವುದು.

தாளாண்மை இல்லாதான் வேளாண்மை பேடிகை
வாளாண்மை போலக் கெடும்.   (614)

ಮನುಷ್ಯ ಪ್ರಯತ್ನವಿಲ್ಲದವನ ಪರೋಪಕಾರವು, ಹೇಡಿಯು ಕೈಯಲ್ಲಿ ಕತ್ತಿ ಹಿಡಿದು ಬಲ್ಲಾಳ್ತನವನ್ನು ತೋರಿದಂತೆ ವ್ಯರ್ಥವಾಗುವುದು.

இன்பம் விழையான் வினைவிழைவான் தன்கேளிர்
துன்பம் துடைத்தூன்றும் தூண்.   (615)

ತನ್ನ ಸುಖವನ್ನು ಬಯಸದೆ, ಕೈಕೊಂಡ ಕೆಲಸವನ್ನು ಪ್ರೀತಿಸುವವನು ತನ್ನ ಬಂಧುಗಳ ಸಂಕಟವನ್ನು ತೊಡೆದು ಹಾಕಲು ತಾಳಿನಿಲ್ಲುವ ಆಧಾರ ಕಂಬವಾಗುವನು.

முயற்சி திருவினை ஆக்கும் முயற்றின்மை
இன்மை புகுத்தி விடும்.   (616)

ಪ್ರಯತ್ನದಿಂದ ಸಿರಿಯು ಬೆಳೆಯುವುದು; ಪ್ರಯತ್ನವಿಲ್ಲದಿದ್ದರೆ ದಾರಿದ್ರ್ಯವು ಹೋಗುವುದು.

மடியுளாள் மாமுகடி என்ப மடியிலான்
தாளுளான் தாமரையி னாள்.   (617)

ಒಬ್ಬನ ಆಲಸ್ಯದಲ್ಲಿ ದರಿದ್ರಲಕ್ಷ್ಮಿ ನೆಲಸಿ ಆಳುವಳು. ಆಲಸ್ಯವಿಲ್ಲದವನ ಪ್ರಯತ್ನದಲ್ಲಿ ಭಾಗ್ಯಲಕ್ಷ್ಮಿ ನೆಲೆಸುವಳು ಎಂದು (ಬಲ್ಲವರು) ಹೇಳುತ್ತಾರೆ.

பொறியின்மை யார்க்கும் பழியன்று அறிவறிந்து
ஆள்வினை இன்மை பழி.   (618)

ದಾರಿದ್ರ್ಯವು ಯಾರಿಗೂ ದೋಷವಲ್ಲ; ಅರಿವಿನಿಂದ ವಿಚಾರಮಾಡಿ ಪ್ರಯತ್ನ ಮಾಡದಿದ್ದರೆ ಅದು ದೋಷವಾಗುವುದು.

தெய்வத்தான் ஆகா தெனினும் முயற்சிதன்
மெய்வருத்தக் கூலி தரும்.   (619)

ದೈವವಿಧಿಯ ಕಾರಣದಿಂದ ಒಂದು ಕೆಲಸ ಫಲಿಸದೆ ಹೋದರೂ ಪ್ರಯತ್ನವು ತನ್ನ ಶರೀರಶ್ರಮದ ಕೂಲಿಯಾಗಿ ಫಲವನ್ನು ನೀಡುತ್ತದೆ.

ஊழையும் உப்பக்கம் காண்பர் உலைவின்றித்
தாழாது உஞற்று பவர்.   (620)

ದಣೆವಿಲ್ಲದೆ, ಎದೆಗುಂದದೆ ಪ್ರಯತ್ನಶೀಲರಾಗಿರುವವರು (ತಮ್ಮನ್ನು ಕಾಡುವ) ವಿಧಿಯನ್ನು ತಮ್ಮ ಬೆನ್ನ ಹಿಂದೆ ಕಾಣುವರು. (ವಿಧಿಯಿಂದ ಪಾರಾಗುವರು)