ಹಗೆಯ ರೀತಿಯನರಿವುದು

பகைஎன்னும் பண்பி லதனை ஒருவன்
நகையேயும் வேண்டற்பாற்று அன்று.   (871)

ಹಗೆ ಎನ್ನುವ ಕೇಡಿನ ಸ್ವಭಾವವನ್ನು ಒಬ್ಬನು ಸಕ್ಕು ಹೊತ್ತು ಕಳೆಯುವ ಆಟವೆಂದು ಬಗೆಯಲಾಗದು.

வில்லேர் உழவர் பகைகொளினும் கொள்ளற்க
சொல்லேர் உழவர் பகை.   (872)

ಬಿಲ್ಲನ್ನೇ ನೇಗಿಲಾಗಿ ಉಳುವವರ (ಯೋಧರ) ಹಗೆಯನ್ನು ಪಡೆದುಕೊಂಡರೂ, ಮಾತನ್ನೇ ನೇಗಿಲಾಗಿ ಉಳುವವರ (ಬುದ್ಧಿಮತಿಗಳ)ಹಗೆಯನ್ನು ಕೊಳ್ಳಬಾರದು.

ஏமுற் றவரினும் ஏழை தமியனாய்ப்
பல்லார் பகைகொள் பவன்.   (873)

ತಾನುಏಕಾಕಿಯಾಗಿದ್ದು ಹಲವು ಜನರ ಹಗೆತನವೆನ್ನೇ ಸಂಪಾದಿಸಿಕೊಳ್ಳುವವನು ಹುಚ್ಚರಿಗಿಂತ ಮಿಗಿಲಾದ ಅರಿವುಗೇಡಿಯಾಗುವನು.

பகைநட்பாக் கொண்டொழுகும் பண்புடை யாளன்
தகைமைக்கண் தங்கிற்று உலகு.   (874)

ಹಗೆತನವನ್ನು ಸ್ನೇಹವಾಗಿ ಪರಿವರ್ತಿಸಿಕೊಂಡು ನಡೆದುಕೊಳ್ಳುವ ಗುಣವುಳ್ಳ ಅರಸನ ಹಿರಿಮೆಯೊಳಗೆ ಇಡೀ ಲೋಕವೇ ತಂಗಿರುತ್ತದೆ.

தன்துணை இன்றால் பகையிரண்டால் தான்ஒருவன்
இன்துணையாக் கொள்கவற்றின் ஒன்று.   (875)

ತನಗೆ ಬೆಂಬಲವಾಗುವ ಸಹಾಯಕರೊಬ್ಬರು ಇಲ್ಲದೆ, ಹಗೆಯೂ ಎರಡು ಕಡೆಯಲ್ಲಿದ್ದು ತಾನು ಒಭ್ಭನೇ ಆಗಿರುವಾಗ, ಆ ಎರಡು ಹಗೆಗಳಲ್ಲಿ ಒಂದನ್ನು ತನ್ನ ಹಿತವನ್ನು ಬಯಸುವ ಬೆಂಬಲವಾಗಿ ಪಡೆದುಕೊಳ್ಳಬೇಕು.

தேறினும் தேறா விடினும் அழிவின்கண்
தேறான் பகாஅன் விடல்.   (876)

ಹಗೆಯಾದವನನ್ನು ಈ ಮೊದಲು ಬಲಪರೀಕ್ಷೆ ಮಾಡಿ ತಿಳಿಯದಿದ್ದರೂ, ತನಗೆ ಆಪತ್ತು ಬಂದ ಕಾಲದಲ್ಲಿ ಅವನ ಸ್ನೇಹವನ್ನೂ ಗಳಿಸದೆ ಹಗೆತನವನ್ನೂ ಸಾಧಿಸದೆ ಮಧ್ಯವರ್ತಿಯಾಗಿರಬೇಕು.

நோவற்க நொந்தது அறியார்க்கு மேவற்க
மென்மை பகைவர் அகத்து.   (877)

ನೋವನ್ನು ಅರಿಯದ ಸ್ನೇಹಿತರಲ್ಲಿ ತಮ್ಮ ನೋವನ್ನು ತಾವಾಗಿಯೇ ಹೇಳಿಕೊಳ್ಳಬಾರದು; ಹಗೆಗಳ ಬಳಿ ತಮ್ಮ ದೌರ್ಬಲ್ಯವನ್ನು ವ್ಯಕ್ತಪಡಿಸಬಾರದು.

வகையறிந்து தற்செய்து தற்காப்ப மாயும்
பகைவர்கண் பட்ட செருக்கு.   (878)

ಕೆಲಸ ಮಾಡುವ ರೀತಿಯನ್ನುರಿತು, ತನ್ನನ್ನು ಬಲಪಡಿಸಿಕೊಂಡು, ರಕ್ಷಿಸಿ ಕೊಂಡಲ್ಲಿ, ಹಗೆಗಳಲ್ಲುಂಟಾದ ಗರ್ವವು ತಾನಾಗಿಯೇ ನಾಶವಾಗುತ್ತದೆ.

இளைதாக முள்மரம் கொல்க களையுநர்
கைகொல்லும் காழ்த்த இடத்து.   (879)

ಮುಳ್ಳಿನ ಮರವನ್ನುಎಳೆಯದಾಗಿರುವಾಗಲೆ ಕತ್ತರಿಸಿ ಹಾಕಬೇಕು; ಅದು ಬಲವಾಗಿ ಬೆಳೆದ ನಂತರ, ಕಡಿಯಲು ಹೋದವರ ಕೈಯನ್ನೇ ಕತ್ತರಿಸುತ್ತದೆ.

உயிர்ப்ப உளரல்லர் மன்ற செயிர்ப்பவர்
செம்மல் சிதைக்கலா தார்.   (880)

ಹಗೆಗಳ ಸೊಕ್ಕನ್ನು ಮುರಿಯಲಾರದ ಅರಸರು ಉಸಿರಾಡಿಕೊಂಡಿರಲೂ ಕೂಡ ಅಸಮರ್ಥರು.