ಪ್ರಣಯದ ಮಹತ್ವ ಪ್ರಕಟಣೆ

பாலொடு தேன்கலந் தற்றே பணிமொழி
வாலெயிறு ஊறிய நீர்.   (1121)

ಮಧುರ ವಚನಗಳನ್ನು ಪಲುಕುವ ಈ ಎಳೆವೆಣ್ಣಿನ ಧವಳ ದಂತಗಂಳಿದೊಸರುವ ಲಾಲಾರಸವು ಹಾಲಿನೊಂದಿಗೆ ಜೇನು ಬೆರೆತಂತಿರುವುದು.

உடம்பொடு உயிரிடை என்னமற் றன்ன
மடந்தையொடு எம்மிடை நட்பு.   (1122)

ಈ ಎಳೆವೆಣ್ಣಿನೊಂದಿಗಿರುವ ನನ್ನ ಸ್ನೇಹವು ಒಡಲಿನೊಂದಿಗೆ ಪ್ರಾಣಕ್ಕೆ ಇರುವ ನಂಟಿನಂತೆ.

கருமணியிற் பாவாய்நீ போதாயாம் வீழும்
திருநுதற்கு இல்லை இடம்.   (1123)

ನನ್ನ ಕಣ್ಣಿನ ಪಾಪಯೊಳಗಿನ ನೆರಳೇ ನೀ ತೊಲಗು; ನಾನು ಬಯಸುವ ಈ ಅಂದದ ಹುಬ್ಬಿನ ಬಾಲೆಗೆ ಸ್ಥಳವಿಲ್ಲ.

வாழ்தல் உயிர்க்கன்னள் ஆயிழை சாதல்
அதற்கன்னள் நீங்கும் இடத்து.   (1124)

ಆರಿಸಿದ ಚೆಲುವಿನಾಭರಣಗಳನ್ನು ಧರಿಸಿದ ಈ ಸೊಬಗಿ ನನ್ನೊಡನೆ ಕೊಡುವಾಗ ಬಾಳಿಗೆ ಉಸಿರಿನಂತಿರುವಳು; ಅಗಲುವಾಗ ಅದಕ್ಕೆ ಸಾವಿನಂತಿರುವಳು.

உள்ளுவன் மன்யான் மறப்பின் மறப்பறியேன்
ஒள்ளமர்க் கண்ணாள் குணம்.   (1125)

ಮಿಂಚುವ ಹೋರ್ ಕಣ್ಣುಗಳ ಈ ಚೆಲುವೆಯ ಗುಣಗಳನ್ನು ನಾನು ಮರೆತರಲ್ಲವೆ ನೆನೆಯುವುದು! ಆದರೆ ನಾನು ಅವಳನ್ನು ಮರೆಯಲು ಸಾಧ್ಯವೇ ಇಲ್ಲ.

கண்ணுள்ளின் போகார் இமைப்பின் பருகுவரா
நுண்ணியர்எம் காத லவர்.   (1126)

ನನ್ನ ನಲ್ಲನು ನನ್ನ ಕಣ್ಣಿನೊಳಗಿಂದ ಹೋಗುವುದಿಲ್ಲ. ನಾನು ಅರಿಯದೆ ರೆಪ್ಪೆಯಲುಗಿಸಿದರೆ ಕೂಡ ನೋಯುವುದಿಲ್ಲ. ಅಷ್ಟು ಸೂಕ್ಷ್ಮರಾದವರು ಅವರು.

கண்ணுள்ளார் காத லவராகக் கண்ணும்
எழுதேம் கரப்பாக்கு அறிந்து.   (1127)

ನನ್ನ ಪ್ರಿಯತಮನ ನನ್ನ ಕಣ್ಣಲ್ಲಿ ನೆಲಸಿರುವನು; ಅದರಿಂದ ಅವನನ್ನು ಮರೆಸುವುದೆಂದು ಹೆದರಿ ನಾನು ಕಣ್ಣಿಗೆ ಕಾಡಿಗೆಯನ್ನು ಕೂಡ ಹಚ್ಚುವುದಿಲ್ಲ.

நெஞ்சத்தார் காத லவராக வெய்துண்டல்
அஞ்சுதும் வேபாக் கறிந்து.   (1128)

ನನ್ನ ಪ್ರಿಯತಮನು ನನ್ನ ಹೃದಯದಲ್ಲಿ ನೆಲಸಿರುವನು; ಅದರಿಂದಲೇ ಎಲ್ಲಿ ಅವರನ್ನು ಸುಡುವುದೋ ಎಂದು ನೆನೆದು ಬಿಸಿ ತಿನಿಸುಗಳನ್ನು ತಿನ್ನಲು ನಾನು ಅಂಜುವೆನು.

இமைப்பின் கரப்பாக்கு அறிவல் அனைத்திற்கே
ஏதிலர் என்னும்இவ் வூர்.   (1129)

ಕಣ್ಣು ಮುಚ್ಚಿದರೆ (ಪ್ರಿಯತಮನು) ಎಲ್ಲಿ ತಪ್ಪಿಸಿಕೊಳ್ಳುವನೋ ಎಂದು ತಿಳಿದು ಕಣ್ಣೆವೆ ಮುಚ್ಚದೆ ನೋಡುತ್ತಿದ್ದೇನೆ; ಅಷ್ಟು ಮಾತ್ರಕ್ಕೆ ಈ ಊರಿನ ಜನರು ಅವನನ್ನು ಪ್ರೀತಿಶೂನ್ಯನೆಂದು ಕರೆಯುವರು.

உவந்துறைவர் உள்ளத்துள் என்றும் இகந்துறைவர்
ஏதிலர் என்னும்இவ் வூர்.   (1130)

ನನ್ನ ಮನದನ್ನ ಸದಾ ನನ್ನ ಹೃದಯ ಮುಂದಿರದಲ್ಲಿ ಆನಂದದಿಂದ ವಾಸವಾಗಿರುವನು. (ಅದನ್ನು ಅರಿಯದೆ) ಈ ಊರಿನ ಜನರು ಅವನು ನನ್ನಿಂದ ದೂರ ಇದ್ದಾನೆಂದು ತಿಳಿದು “ಪ್ರೀತಿ ಇಲ್ಲದವನೆಂದು” ಹೇಳುವರು.