ವಿರಹವನ್ನು ತಾಳದಿರುವುದು

செல்லாமை உண்டேல் எனக்குரை மற்றுநின்
வல்வரவு வாழ்வார்க் குரை.   (1151)

ನನ್ನನು ಅಗಲಿ ಹೋಗುವುದಿಲ್ಲ ಎಂದಿದ್ದರೆ ನನಗೆ ಹೇಳು ಇಲ್ಲದೆ, ಅಗಲಿ ಬೇಗ ಹಿಂದಿರುಗುವುದು ಇದ್ದರೂ ಉಸಿರು ಹಿಡಿದು ಜೀವಿಸುವವರಿಗೆ ಹೇಳು.

இன்கண் உடைத்தவர் பார்வல் பிரிவஞ்சும்
புன்கண் உடைத்தால் புணர்வு.   (1152)

ಈ ಮೊದಲು ಅವರ ನೋಟವೇ ಸುಖವನ್ನು ಕೊಡುತ್ತಿತ್ತು. ಈಗ ಲಾದರೋ ಮುಂದೆ ಬರುವ ವಿರಹವನ್ನು ನೆನೆದು ಭಯದಿಂದ ಇನಿಯರ ಕೂಟವೂ ಯಾತನೆಯನ್ನು ಕೊಡುತ್ತಿದೆ!

அரிதரோ தேற்றம் அறிவுடையார் கண்ணும்
பிரிவோ ரிடத்துண்மை யான்.   (1153)

ಅಗಲಿಕೆ, ಯಾತನೆಗಳ ಅರಿವುಳ್ಳ ನಲ್ಲನಲ್ಲಿಯೂ ವಿರಹವು ಒಂದು ವೇಳೆ ನಿಜವಾದ ಪಕ್ಷದಲ್ಲಿ ಅವರ (ಮಾತಿನಲ್ಲಿ) ವಿಶ್ವಾಸವಿಡುವುದು ಅರಿದಲ್ಲವೆ?

அளித்தஞ்சல் என்றவர் நீப்பின் தெளித்தசொல்
தேறியார்க்கு உண்டோ தவறு.   (1154)

ಪ್ರೇಮವನ್ನು ಹರಿಸುತ್ತ 'ಭಯ ಪಡಬೇಡ' ವೆಂದು ಮೊದಲು ಭರವಸೆಯಿತ್ತವರು ಅಗಲಿದರೆ, ಅವರ ಭರವಸೆಯ ಮಾತಿನಲ್ಲಿ ವಿಶ್ವಾಸವಿಟ್ಟವರ ತಪ್ಪೇನು?

ஓம்பின் அமைந்தார் பிரிவோம்பல் மற்றவர்
நீங்கின் அரிதால் புணர்வு.   (1155)

ನನ್ನನ್ನು ಕಾದುಕೊಳ್ಳುವುದಾದರೆ, ನನ್ನ ಉಸಿರಿನೊಡನೆ ಬೆರೆತ ಪ್ರಿಯನ ಅಗಲಿಕೆಯು ಸಂಭವಿಸದಂತೆ ನಿಲ್ಲಿಸಬೇಕು. ಅವನು ಅಗಲಿದರೆ, ಮತ್ತೆ ನಮ್ಮಿಬ್ಬರ ಮಿಲನವು ದುಸ್ಸಾಧ್ಯವಾಗುವುದು.

பிரிவுரைக்கும் வன்கண்ணர் ஆயின் அரிதவர்
நல்குவர் என்னும் நசை.   (1156)

ನನ್ನನ್ನು ಅಗಲಿ ಹೋಗುವೆನೆಂದು ತಿಳಿಯ ಪಡಿಸುವಷ್ಟು ಅವನು ಕಲ್ಲೆದೆಯವನಾದರೆ, ಮತ್ತೆ ಹಿಂದಿರುಗಿ ಬಂದು ನನ್ನನ್ನು ಪ್ರೇಮಿಸುವನೆಂಬ ಆಶೆ ವ್ಯರ್ಥವೇ.

துறைவன் துறந்தமை தூற்றாகொல் முன்கை
இறைஇறவா நின்ற வளை.   (1157)

ಕೃಶವಾಗಿ ನನ್ನ ಮುಂಗೈಯ ಗಂಟನಿಂದ ಕಳಚಿ ನಿಂತ ಬಳೆಯು ನನ್ನನ್ನು ಪ್ರಿಯನು ತೊರೆದು ಹೋಗುವ ಸುದ್ದಿಯನ್ನು ಸಾರದಿರುವುದೆ?

இன்னாது இனன்இல்ஊர் வாழ்தல் அதனினும்
இன்னாது இனியார்ப் பிரிவு.   (1158)

ಕೆಳೆಯಿಲ್ಲದ ಊರಿನಲ್ಲಿ ಬಾಳುವುದು ಕಷ್ಟಕರ; ಅದಕ್ಕಿಂತಲೂ ಅಸಹನೀಯವಾದುದು ಇನಿಯನ್ನನ್ನು ಅಗಲಿ ಬಾಳುವುದು.

தொடிற்சுடின் அல்லது காமநோய் போல
விடிற்சுடல் ஆற்றுமோ தீ.   (1159)

ಬೆಂಕಿಯು ತನ್ನನ್ನು ಮುಟ್ಟಿದಾಗ ಮಾತ್ರ ಸುಡುವುದಲ್ಲದೆ ಕಾಮ ವೇದನೆಯಂತೆ ದೂರವಿದ್ದಾಗಲೂ ಸುಡಬಲ್ಲುದೆ?

அரிதாற்றி அல்லல்நோய் நீக்கிப் பிரிவாற்றிப்
பின்இருந்து வாழ்வார் பலர்.   (1160)

(ಇನಿಯನ್ನು) ವಿರಹವನ್ನು ಕುರಿತು ತಿಳಿಸುವಾಗ, ಅದನ್ನು ಸಹಿಸಿಕೊಂಡು, ಕಷ್ಟ ಪರುಪರೆಗಳನ್ನು ಮರೆತು, ಉಂಟಾದ ವಿರಹವನ್ನೂ ತಾಳಿಕೊಂಡು ಆಮೇಲೂ ಉಸಿರೊಡನೆ ಬಾಳುವ ಹೆಣ್ಣು ಕುಲದವರು ಹಲವರಿದ್ದಾರೆ! ವಿಚಿತ್ರ.