ಕೃತಜ್ಞತೆಯ ಅರಿಕೆ

செய்யாமல் செய்த உதவிக்கு வையகமும்
வானகமும் ஆற்றல் அரிது.   (101)

ಬೇರೊಬ್ಬರಿಂದ ನಮಗೆ ಉಪಕಾರವಾಗದಿದ್ದರೂ ನಾವು ಅವರಿಗೆ ಮಾಡಿದ ಉಪಕಾರಕ್ಕೆ, ಭೂಲೋಕವಾಗಲಿ ದೇವಲೋಕವಾಗಲೀ ಪ್ರತಿಯಾಗಿ ಬೆಲೆ ಕಟ್ಟಲು ಸಾಧ್ಯವಿಲ್ಲ.

காலத்தி னாற்செய்த நன்றி சிறிதெனினும்
ஞாலத்தின் மாணப் பெரிது.   (102)

ಸಕಾಲದಲ್ಲಿ ಮಾಡಿದ ಉಪಕಾರ ಕಿರಿದಾಗಿದ್ದರೂ ಈ ಲೋಕದ ವಿಸ್ತಾರಕ್ಕಿಂತ ಮಿಗಿಲಾಗಿ ಹಿರಿದೆನಿಸಿಕೊಳ್ಳುತ್ತದೆ.

பயன்தூக்கார் செய்த உதவி நயன்தூக்கின்
நன்மை கடலின் பெரிது.   (103)

ಫಲವನಳೆಯದೆ ಮಾಡಿದ ಉಪಕಾರದ ಭಾವನೆಯನ್ನು ಅಳೆದರೆ, ಅದು ಕಡಲಿಗಿಂತ ಹಿರಿದಾಗುತ್ತದೆ.

தினைத்துணை நன்றி செயினும் பனைத்துணையாக்
கொள்வர் பயன்தெரி வார்.   (104)

ಒಂದು ಸಣ್ಣ ತೆನೆಯಷ್ಟು ಉಪಕಾರವೆಸಗಿದರೂ ಅದರ ಫಲವನ್ನರಿತವರು ಅದನ್ನು ಹನೆಮರದಷ್ಟು ದೊಡ್ಡದಾಗಿ ಭಾವಿಸುತ್ತಾರೆ.

உதவி வரைத்தன்று உதவி உதவி
செயப்பட்டார் சால்பின் வரைத்து.   (105)

ಉಪಕಾರಕ್ಕಾಗಿ ಪ್ರತಿ ಉಪಕಾರ ಮಾಡುವುದು ಉಪಕಾರವೆನಿಸುವುದಿಲ್ಲ; ಉಪಕಾರ ಹೊಂದಿದವರ ಅರ್ಹತೆಯೇ ಉಪಕಾರವನ್ನು ಅಳೆಯುವ ಮಾನದಂಡ

மறவற்க மாசற்றார் கேண்மை துறவற்க
துன்பத்துள் துப்பாயார் நட்பு.   (106)

ಕುಂದಿಲ್ಲದವರ ಗೆಳೆತನವನ್ನು ಮರೆಯಲಾಗದು, ಕಷ್ಟಕಾಲದಲ್ಲಿ ನೆರವಾದವರನಂಟನ್ನು ತೊರೆಯಲಾಗದು.

எழுமை எழுபிறப்பும் உள்ளுவர் தங்கண்
விழுமந் துடைத்தவர் நட்பு.   (107)

ತಮ್ಮ ದುಃಖಗಳನ್ನು ದೂರಮಾಡಲು ನೆರವು ನೀಡಿದವರ ಸ್ನೇಹವನ್ನು ಏಳೇಳು ಜನ್ಮಗಳಲ್ಲೂ ನೆನೆಯುವರು.

நன்றி மறப்பது நன்றன்று நன்றல்லது
அன்றே மறப்பது நன்று.   (108)

ಮಾಡಿದ ಉಪಕಾರವನ್ನು ಮರೆಯುವುದು ಒಳಿತಲ್ಲ(ಧರ್ಮವಲ್ಲ) ; ಉಪಕಾರವಲ್ಲದುದನ್ನು (ಅಪಕಾರ) ಅಂದೇ ಮರೆಯುವದು ಲೇಸು.

கொன்றன்ன இன்னா செயினும் அவர்செய்த
ஒன்றுநன்று உள்ளக் கெடும்.   (109)

ಮುಂಚೆ ಉಪಕಾರ ಮಾಡಿದವರು, ಮುಂದೆ ಕೊಲ್ಲುವಂಥ (ಕಡು) ಕಷ್ಟಗಳನ್ನು ತಂದೊಡ್ಡಿದರೂ ಅವರು ಹಿಂದೆ ಮಾಡಿದ ಒಂದೇ ಒಂದು ಉಪಕಾರವನ್ನು (ಒಳಿತನ್ನು) ನೆನೆದರೆ ಸಾಕು. ಕಷ್ಟಗಳು ಪರಿಹಾರವಾಗುತ್ತದೆ.

எந்நன்றி கொன்றார்க்கும் உய்வுண்டாம் உய்வில்லை
செய்ந்நன்றி கொன்ற மகற்கு.   (110)

ಯಾವ ಅಧರ್ಮ ಕೆಲಸಗಳನ್ನು ಮಾಡಿದವರಿಗೂ ಉದ್ಧಾರದ ಹಾದಿಯುಂಟು. ಒಬ್ಬರು ಮಾಡಿದ ಉಪಕಾರವನ್ನು ನೆನೆಯದೆ ಅಪಕಾರ ಮಾಡುವವನಿಗೆ ಉದ್ಧಾರವೇ ಇಲ್ಲ.