ಅನುಚಿತ ನಡೆವಳಿಕೆ

வஞ்ச மனத்தான் படிற்றொழுக்கம் பூதங்கள்
ஐந்தும் அகத்தே நகும்.   (271)

ವಂಚನೆಯ ಮನಸ್ಸುಳ್ಳವನ ಹುಸಿ ನಡೆವಳಿಕೆಯನ್ನು ಕಂಡು ಅವನ ಶರೀರ ದೊಳಗಿರುವ ಪಂಚಭೂತಗಳು ತಮ್ಮೊಳಗೇ ನಗುತ್ತವೆ.

வானுயர் தோற்றம் எவன்செய்யும் தன்னெஞ்சம்
தான்அறி குற்றப் படின்.   (272)

ತಾನು ತಿಳಿದ ಅಪರಾಧಗಳಲ್ಲಿ ಮನಸ್ಸನ್ನು ತೊಡಗಿಸಿದರೆ, ಬಾನಿನೆತ್ತರದ ತೋರಿಕೆಯ ಬದುಕು ಇದ್ದರೂ ಅದು ಏನು ಫಲ ಸಾಧಿಸಬಲ್ಲುದು?(ಅದು ವ್ಯರ್ಥ ಬದುಕು ಎನಿಸಿಕೊಳ್ಳುತ್ತದೆ.

வலியில் நிலைமையான் வல்லுருவம் பெற்றம்
புலியின்தோல் போர்த்துமேய்ந் தற்று.   (273)

ಮನಸ್ಸನ್ನು ಇಂದ್ರಿಯಗಳ ಆಸೆಗಳಿಂದ ಅಡಗಿಸುವ ಬಲವಿಲ್ಲದವನು ಕೈಗೊಂಡ ಕಠಿಣ ತಪಸ್ಸು, ಹಸು ಚರ್ಮವನ್ನು ಹೊದ್ದುಕೊಂಡು ಹುಲ್ಲು ಮೇಯವಂತೆ, ಅಭಾಸಸಕರವಾದದ್ದು.

தவமறைந்து அல்லவை செய்தல் புதல்மறைந்து
வேட்டுவன் புள்சிமிழ்த் தற்று.   (274)

ತಪಶ್ಶಕ್ತೀಯ ಮರೆಯಲ್ಲಿ ಸಲ್ಲದ ಕೀಳು ಕೆಲಸಗಳನ್ನು ಮಾಡುವುದು, ಪೋದರ ಮರೆಯಲ್ಲಿ ಅವಿತುಕೊಂಡು ಬೇಡನು ಹಕ್ಕಿಗಳನ್ನು ಬಲೆಬೀಸಿ ಹಿಡಿದಂತೆ.

பற்றற்றேம் என்பார் படிற்றொழுக்கம் எற்றெற்றென்று
ஏதம் பலவுந் தரும்.   (275)

ಆಶೆಗಳನ್ನು ತೊರೆದಿದ್ದೇವೆ' ಎಂದುಕೊಳ್ಳುವವರ ಹುಸಿ ನಡವಳಿಕೆಯು, 'ನಾವು ಎಂಥ ತಪ್ಪು ಮಾಡಿದೆವು' ಎಂದು ಚಿಂತಿಸುವಂತೆ, ಹಲವು ತೆರದ ದುಃಖಗಳನ್ನು ಉಂಟು ಮಾಡುವುದು.

நெஞ்சின் துறவார் துறந்தார்போல் வஞ்சித்து
வாழ்வாரின் வன்கணார் இல்.   (276)

ಮನಸ್ಸಿನಲ್ಲಿ (ಆಶೆಗಳನ್ನು) ತೊರೆಯದೆ, ತೊರೆದವರಂತೆ ನಟಿಸುತ್ತ ವಂಚಿಸಿ ಬಾಳುವವರಿಗಿಂತ, ಕ್ರೂರ ಮನಸ್ಸಿನವರು ಬೇರೆ ಇಲ್ಲ.

புறங்குன்றி கண்டனைய ரேனும் அகங்குன்றி
முக்கிற் கரியார் உடைத்து.   (277)

ಹೊರಗೆ ತೋರಿಕೆಗೆ ಗುಲಗುಂಜಿ ಮಣಿಯಂತೆ ಕೆಂಪಾಗಿ ಕಂಡರೂ ಮನಸ್ಸಿನೊಳಗೆ ಆ ಮಣಿಯ ತಾದಿಯಲ್ಲಿರುವ ಕಪ್ಪಿನಂತೆ ತೋರಿಕೊಳ್ಳುವವರೂ ಈ ಲೋಕದಲ್ಲಿ ಇದ್ದಾರೆ.

மனத்தது மாசாக மாண்டார் நீராடி
மறைந்தொழுகு மாந்தர் பலர்.   (278)

ಮನಸ್ಸಿನೊಳಗೆ ಕೊಳೆ ತುಂಬಿಕೊಂಡು ಮಹಾಮಹಿಮರಂತೆ ನೀರಲ್ಲಿ ಮುಳುಗಿ ಏಳುವ ವಂಚನೆಯ ಬದುಕುಳ್ಳವರು ಈ ಲೋಕದಲ್ಲಿ ಹಲವರಿದ್ದಾರೆ.

கணைகொடிது யாழ்கோடு செவ்விதுஆங் கன்ன
வினைபடு பாலால் கொளல்.   (279)

ಬಾಣವು ನೋಡಲು ನೇರವಾಗಿದ್ದರೂ ಅದರ ಗುಣ ಕೊಂಕು, ಕ್ರೂರ. ವೀಣೆಯ ತೋರಿಕೆಯಲ್ಲಿ ದೊಂಕಾಗಿದ್ದರೂ ಅದು ಇಂಪು. ಅದೇ ರೀತಿಯಲ್ಲಿ ಜನರ ಗುಣಗಳನ್ನು ಅವರವರ ನಡವಳಿಕೆಯಿಂದ ಅರಿಯಬೇಕು.

மழித்தலும் நீட்டலும் வேண்டா உலகம்
பழித்தது ஒழித்து விடின்.   (280)

ಲೋಕವು ನಿಂದಿಸುವ ಕೆಟ್ಟ ನಡವಳಿಕೆಯನ್ನು ಬಿಟ್ಟುಬಿಟ್ಟರೆ, ತಮ್ಮ ವೈರಾಗ್ಯವನ್ನು ಸೂಚಿಸಲು, ತಲೆ ಬೋಳಿಸಿಕೊಳ್ಳುವುದಾಗಲೀ, ಜಟೆ ಬೆಳೆಸುವುದಾಗಲೀ ಬೇಕಿಲ್ಲ.