ಅರಿತು ನಂಬುವ ಬಗೆ

அறம்பொருள் இன்பம் உயிரச்சம் நான்கின்
திறந்தெரிந்து தேறப் படும்.   (501)

(ಒಬ್ಬನ) ಧಾರ್ಮಿಕ ನಡತೆ, ಧನಾಸಕ್ತಿ, ಕಾಮಾಸಕ್ತಿ, ಜೀವಭಯ- ಈ ನಾಲ್ಕು ಗುಣಗಳನ್ನು ಶೋಧಿಸಿದ ತರುವಾಯವೇ ಅವನನ್ನು (ಮಂತ್ರಿ) ಕೆಲಸಕ್ಕೆ ಅರ್ಹನೆಂದು ತೀರ್ಮಾನಿಸಬೇಕು.

குடிப்பிறந்து குற்றத்தின் நீங்கி வடுப்பரியும்
நாணுடையான் சுட்டே தெளிவு.   (502)

ಉತ್ತಮ ಕುಲದಲ್ಲಿ ಹುಟ್ಟಿ, ದೋಷಗಳನ್ನು ನೀಗಿಕೊಂಡು ನಿಂದಾತ್ಮಕ ಕಾರ್ಯಗಳನ್ನು ಮಾಡಲಂಜುವ, ಲಜ್ಜೆಯುಳ್ಳವನನ್ನೇ ನಂಬಿ (ಒಂದು ಕೆಲಸಕ್ಕೆ) ತೀರ್ಮಾನಿಸಬೇಕು.

அரியகற்று ஆசற்றார் கண்ணும் தெரியுங்கால்
இன்மை அரிதே வெளிறு.   (503)

ದುರ್ಲಭ ಗ್ರಂಥಗಳನ್ನು ಓದಿ ತಿಳಿದು, ದೋಷಗಳನ್ನು ನಿವಾರಿಸಿಕೊಂಡವರನ್ನು ಪರೀಕ್ಷಿಸುವಾಗಲೂ (ಅವರಲ್ಲಿ) ಅಜ್ಞಾನವಿಲ್ಲದಿರುವುದು ಅಪರೂಪವೆಂಬುದು ಕಂಡು ಬರುವುದು.

குணம்நாடிக் குற்றமும் நாடி அவற்றுள்
மிகைநாடி மிக்க கொளல்.   (504)

(ಅರಸನಾದವನು) (ಒಬ್ಬನ) ಗುಣ, ದೋಷಗಳನ್ನು ಪರೀಕ್ಷಿಸಿ, ಅವನಲ್ಲಿ ಉಳಿದ ಗುಣಗಳೇನೆಂಬುದು ವಿಚಾರಿಸಿ, ಅವುಗಳಿಂದ ಅರ್ಹತೆಯನ್ನು ಕುರಿತು ತೀರ್ಮಾನಕ್ಕೆ ಬರಬೇಕು.

பெருமைக்கும் ஏனைச் சிறுமைக்கும் தத்தம்
கருமமே கட்டளைக் கல்.   (505)

ಒಬ್ಬನಲ್ಲಿರುವ ಹಿರಿಯ ಗುಣಗಳಿಗೂ, ಅಲ್ಪ ಗುಣಗಳಿಗೂ, ಅವನಿಗೆ ದತ್ತವಾಗಿ ಬಂದ ಕರ್ಮವೇ ಒರೆಗಲ್ಲಾಗುವುದು.

அற்றாரைத் தேறுதல் ஓம்புக மற்றவர்
பற்றிலர் நாணார் பழி.   (506)

ತಮ್ಮವರು ಎಂಬ ಸಂಬಂಧವೇ ಇಲ್ಲದಿರುವವರನ್ನು ಅರಸನಾದನು ನಂಬದೆ ದೂರವಿರಿಸಬೇಕು; ಏಕೆಂದರೆ ಅಂಥವರು ಯಾರ ಅಂಕೆಯೂ ಇಲ್ಲದೆ ತಪ್ಪು ಮಾಡಲೂ ನಾಚುವುದಿಲ್ಲ.

காதன்மை கந்தா அறிவறியார்த் தேறுதல்
பேதைமை எல்லாந் தரும்.   (507)

ಪ್ರೀತಿ, ಪಕ್ಷಪಾತಗಳಿಂದ ಏನೂ ಅರಿಯದ ಮೂರ್ಖರನ್ನು ನಂಬಿ ಒಂದು ಕೆಲಸಕ್ಕೆ ಅರಿಸುವುದು, ಮೂರ್ಖತನದ ಪರಮಾವಧಿಯೆನಿಸುತ್ತದೆ.

தேரான் பிறனைத் தெளிந்தான் வழிமுறை
தீரா இடும்பை தரும்.   (508)

ಬೇರೊಬ್ಬನ ಬಗ್ಗೆ ಒಂದೂ ತಿಳಿಯದೆ ಒಂದು ಕೆಲಸಕ್ಕೆ ನಿರ್ಧರಿಸುವ ಅರಸನು, (ಅವನಿಗೆ ಮಾತ್ರವಲ್ಲದೆ) ಅವನ ಸಂತತಿಗೂ ತೀರದ ದುಃಖವನ್ನು ತರುತ್ತಾನೆ.

தேறற்க யாரையும் தேராது தேர்ந்தபின்
தேறுக தேறும் பொருள்.   (509)

ಅರಸನಾದವನು ಯಾರನ್ನೂ ಹಿನ್ನೆಲೆ ಅರಿಯದೆ ನಂಬಕೂಡದು. ಚೆನ್ನಾಗಿ ಪರಿಶೀಲಿಸಿದ ಮೇಲೆ ಅವರಲ್ಲಿ ನಂಬತಕ್ಕ ಗುಣಗಳನ್ನು ಕಂಡು ನಂಬಬೇಕು.

தேரான் தெளிவும் தெளிந்தான்கண் ஐயுறவும்
தீரா இடும்பை தரும்.   (510)

(ಒಬ್ಬನನ್ನು) ತಿಳಿಯದೆ ನಂಬುವುದೂ, ನಂಬಿದ ಮೇಲೆ ಅವನನ್ನು ಸಂದೇಹಿಸುವುದೂ ಅರಸನಿಗೆ ತೀರದ ದುಃಖವನ್ನು ಉಂಟುಮಾಡುತ್ತವೆ.