ದುಃಖಪೂರಿತ ನೇತ್ರಗಳು

கண்தாம் கலுழ்வ தெவன்கொலோ தண்டாநோய்
தாம்காட்ட யாம்கண் டது.   (1171)

ಕಣ್ಣುಗಳು (ಅವನನ್ನು) ನನಗೆ ತೋರಿಸಿದುದರಿಂದ ಈ ತೀರದ ಕಾಮವೇದನೆಯು ಬೆಳೆಯಿತು; ನನಗೆ (ಅವನನ್ನು) ತೋರಿಸಿದ ಆ ಕಣ್ಣುಗಳೇ ಈಗ ಅಳುವುದೇಕೆ?

தெரிந்துணரா நோக்கிய உண்கண் பரிந்துணராப்
பைதல் உழப்பது எவன்.   (1172)

ಮುಂದಾಗುವುದನ್ನು ಆಲೋಚನೆ ಮಾಡದೆ (ಅವನನ್ನು) ನೋಡಿ ಪ್ರೇಮ ಪರವಶವಾದ ಈ ಕಣ್ಣುಗಳು ಈಗ ಪ್ರೇಮಶೂನ್ಯವಾಗಿ ಸಹನೆಯಳಿದು ದುಃಖವನ್ನು ಅನುಭವಿಸುವುದು ಏಕೆ?

கதுமெனத் தாநோக்கித் தாமே கலுழும்
இதுநகத் தக்க துடைத்து.   (1173)

ಅಂದು ನಲ್ಲನನ್ನು ತಾವೇ ಬಯಕೆಯಿಂದ ಮುಂದಾಗಿ ನೋಡಿದ ಈ ಕಣ್ಣುಗಳು ಇಂದು ಕಣ್ಣೀರು ಸುರಿಸುತ್ತಿವೆ; ಇದು ನಗೆಪಾಟಲಲ್ಲವೆ?

பெயலாற்றா நீருலந்த உண்கண் உயலாற்றா
உய்வில்நோய் என்கண் நிறுத்து.   (1174)

ಈ ನನ್ನ ಕಾಡಿಗೆ ಕಣ್ಣುಗಳು ತಪ್ಪಿಸಿಕೊಳ್ಳಲು ಮಾರ್ಗವಿಲ್ಲದ, ತೀರದ ಕಾಮ ವೇದನೆಗೆ ನನ್ನನ್ನು ಗುರಿಮಾಡಿ, ಈಗ ಕಣ್ಣೀರು ಸುರಿಸಲಾರದೆ ಒಣಗಿ ಬರಡಾಗಿವೆ.

படலாற்றா பைதல் உழக்கும் கடலாற்றாக்
காமநோய் செய்தஎன் கண்.   (1175)

ಕಡಲನ್ನೂ ಮಿಕ್ಕಿದ ಕಾಮ ವೇದನೆಯನ್ನು ತಂದೊಡ್ಡಿದ ನನ್ನ ಕಣ್ಣುಗಳು ಇಂದು ನಿದ್ರಿಸಲಾರದೆ ದುಃಖದಿಂದ ಕ್ಲೇಶಪಡುತ್ತಿವೆ.

ஓஒ இனிதே எமக்கிந்நோய் செய்தகண்
தாஅம் இதற்பட் டது.   (1176)

ನನಗೆ ಈ ಕಾಮ ವೇದನೆಯನ್ನುಂಟು ಮಾಡಿದ ಕಣ್ಣುಗಳು ತಾವೇ ಆ ಅವಸ್ಥೆಯಲ್ಲಿ ಪಾಡು ಪಡುತ್ತಿರುವುದು ನನಗೆ ಬಹಳ ಸಂತೋಷವನ್ನುಂಟು ಮಾಡಿದೆ ಹಾಯ್!

உழந்துழந் துள்நீர் அறுக விழைந்திழைந்து
வேண்டி அவர்க்கண்ட கண்.   (1177)

ಅಂದು ಮನ ನಲಿದು, ಮೃದುವಾಗಿ ಬಯಕೆಯಿಂದ ಅವರನ್ನು ಒಂದೇ ಸಮನೆ ಕಂಡು ತಣಿದ ಕಣ್ಣುಗಳಲ್ಲಿ, ಇಂದು, ಅತ್ತು ಅತ್ತು ಒಳಗೆ ತುಂಬಿರುವ ನೀರೆಲ್ಲ ಇಂಗಿಹೋಗಲಿ.

பேணாது பெட்டார் உளர்மன்னோ மற்றவர்க்
காணாது அமைவில கண்.   (1178)

ಹೃದಯಪೂರ್ವಕವಾಗಿ ಪ್ರೀತಿಸದೆ, ಬರಿಯ ತೋರಿಕೆಗೆ ಪ್ರೀತಿಸಿದವರು ಒಬ್ಬರಿದ್ದಾರೆ; ಅವರನ್ನು ಕಾಣದೆ ನನ್ನ ಈ ಕಣ್ಣೂಗಳು ಅತೃಪ್ತವಾಗಿವೆ.

வாராக்கால் துஞ்சா வரின்துஞ்சா ஆயிடை
ஆரஞர் உற்றன கண்.   (1179)

ನನ್ನ ನಲ್ಲನು ಬಾರದಿರುವಾಗ ನಿರೀಕ್ಷೆಯಲ್ಲಿ ನಿದ್ರಿಸವು; ಬಂದಾಗಲೂ ಅಗಲುವರೆಂಬ ಭೀತಿಯಲ್ಲಿ ನಿದ್ರಿಸವು; ಇಬ್ಬಗೆಯಲ್ಲೂ, ಮಿಗಿಲಾದ ದುಃಖದಿಂದ ನನ್ನ ಕಣ್ಣುಗಳು ತಪ್ಪವಾಗಿವೆ.

மறைபெறல் ஊரார்க்கு அரிதன்றால் எம்போல்
அறைபறை கண்ணார் அகத்து.   (1180)

ಧ್ವನಿಗೈವ ನಗಾರಿಯಂತೆ ಮನಸ್ಸಿನ ವೇದನೆಯನ್ನು ಸಾರುತ್ತಿರುವ ಕಣ್ಣುಗಳಿರುವಾಗ, ನಮ್ಮ ಪ್ರಣಯ ರಹಸ್ಯವನ್ನು ಊರವರಿಗೆ ಅರಿತುಕೊಳ್ಳುವುದು ಕಷ್ಟವೇನಲ್ಲ!