ಸ್ನೇಹ ಪರೀಕ್ಷೆ

நாடாது நட்டலிற் கேடில்லை நட்டபின்
வீடில்லை நட்பாள் பவர்க்கு.   (791)

ಪರೀಕ್ಷೆ ಮಾಡದೆ (ವಿಚಾರ ಮಾಡದೆ) ಬೆಳೆಸಿದ ಸ್ನೇಹಕ್ಕಿಂತ ಕೆಟ್ಟದು ಬೇರಿಲ್ಲ; ಸ್ನೇಹಶೀಲರಾದವರಿಗೆ ಒಮ್ಮ ಸ್ನೇಹ ಗಳಿಸಿದ ನಂತರ ಅದರಿಂದ ಬಿಡುಗಡೆಯಿಲ್ಲ.

ஆய்ந்தாய்ந்து கொள்ளாதான் கேண்மை கடைமுறை
தான்சாம் துயரம் தரும்.   (792)

ಹಲವು ಬಾರಿ ಪರೀಕ್ಷಿಸಿ ಸ್ನೇಹವನ್ನು ಕೈಗೊಳ್ಳದವನ ಗೆಳೆತನದ ಪರಿಣಾಮವೆಂದರೆ ತಾನು ಸಾಯುವ ತನಕ ದುಃಖವನ್ನು ಅನುಭವಿಸುವುದು.

குணமும் குடிமையும் குற்றமும் குன்றா
இனனும் அறிந்தியாக்க நட்பு.   (793)

ಒಬ್ಬನ ಗುಣವನ್ನೂ, ಕುಲೀನತೆಯನ್ನೂ, ಗುಣದೋಷಗಳನ್ನೂ, ಕುಂದದಿರುವ ಬಂಧುಗಳ ಸ್ವಭಾವವನ್ನು ಅರಿತು ಸ್ನೇಹವನ್ನು ಕೈಗೊಳ್ಳಬೇಕು.

குடிப்பிறந்து தன்கண் பழிநாணு வானைக்
கொடுத்தும் கொளல்வேண்டும் நட்பு.   (794)

ಒಳ್ಳೆಯ ಕುಲೀನನಾಗಿದ್ದು, ತನ್ನನ್ನು ಕುರಿತ ಬರುವ ನಿಂದೆಗಳಿಗೆ ನಾಚುವವನ ಸ್ನೇಹವನ್ನು ಏನಾದರೂ ಪ್ರತಿಫಲ ಕೊಟ್ಟಾದರೂ ಕೊಂಡುಕೊಳ್ಳಬೇಕು.

அழச்சொல்லி அல்லது இடித்து வழக்கறிய
வல்லார்நடபு ஆய்ந்து கொளல்.   (795)

ಲೋಕಾಚಾರವಲ್ಲದ ಕೆಲಸವನ್ನು ಮಾಡೀದಾಗ ಪಶ್ಚಾತ್ತಾಪ ಪಡುವಂತೆ ನಿಂದಿಸಿ ಹೇಳುವ, ಲೋಕದ ನಡೆಯನ್ನು ಅರಿಯುವಂತೆ ಮಾಡುವ ಸ್ನೇಹವನ್ನು ಶೋಧಿಸಿ ಪಡೆದುಕೊಳ್ಳಬೇಕು.

கேட்டினும் உண்டோர் உறுதி கிளைஞரை
நீட்டி அளப்பதோர் கோல்.   (796)

ಕೇಡಿನಲ್ಲಿಯೂ ಒಂದು ಒಳ್ಳೆಯ ಗುಣವುಂಟು; ಅದು ಗೆಳೆಯರ ಗುಣ ಸ್ವಭಾವಗಳನ್ನು ಹಾಸಿ ಅಳೆಯುವ ತೋರುಗೋಲಾಗುವುದು.

ஊதியம் என்பது ஒருவற்குப் பேதையார்
கேண்மை ஒரீஇ விடல்.   (797)

ಒಬ್ಬನಿಗೆ ಲಾಭದಾಯಕವಾದ ವಿಷಯವೆಂದರೆ, ಮೂರ್ಖರ ಗೆಳೆತನವನ್ನು ತ್ಯಜಿಸಿ ದೂರವಿರುವುದು.

உள்ளற்க உள்ளம் சிறுகுவ கொள்ளற்க
அல்லற்கண் ஆற்றறுப்பார் நட்பு.   (798)

ಮನಸನ್ನು ಅಸ್ಥಿರಗೊಳ್ಳುವ ಆಲೋಚನೆಗಳನ್ನು ಮನಸ್ಸಿನಲ್ಲಿ ನೆನೆಯದಿರಬೇಕು; (ಅದೇ ರೀತಿ) ಸಂಕಟದ ಸಮಯದಲ್ಲಿ ಕೈಬಿಡುವಂಥವರ ಸ್ನೇಹವನ್ನು ಕೈಗೊಳ್ಳದಿರಬೇಕು.

கெடுங்காலைக் கைவிடுவார் கேண்மை அடுங்காலை
உள்ளினும் உள்ளஞ் சுடும்.   (799)

ನಾವು ಕೆಟ್ಟ ಸಮಯದಲ್ಲಿ ಕೈಬಿಡುವವರ ಕೆಳೆಯನ್ನು ಸಾವು ನಮ್ಮನ್ನು ಸೆಳೆದೊಯ್ಯುವ ಸಮಯದಲ್ಲಿ ನೆನೆದರೂ ಕೂಡ ಮನಸ್ಸು ಸುಡುವುದು.

மருவுக மாசற்றார் கேண்மைஒன் றீத்தும்
ஒருவுக ஒப்பிலார் நட்பு.   (800)

ನಿಷ್ಠಳಂಕಿಗಳ ಗೆಳೆತನವನ್ನು ಅಪ್ಪಿ ಸ್ವೀಕರಿಸಬೇಕು; ಲೋಕದೊಂದಿಗೆ ಒಪ್ಪಿಲ್ಲದವರ ಗೆಳೆತನವನ್ನು ಪ್ರತಿಫಲ ಕೊಟ್ಟಾದರೂ ಕೈಬಿಡಬೇಕು.