ಸೌಂದರ್ಯ ಪ್ರಶಂಸೆ

நன்னீரை வாழி அனிச்சமே நின்னினும்
மென்னீரள் யாம்வீழ் பவள்.   (1111)

ಕೋಮಲ ಸ್ವಭಾವದ ಅನಿಚ್ಚೆ ಹೂವೇ ನೀ ಬಾಳು! ನಾನು ಪ್ರೀತಿಸುವ ಕೋಮಲೆ ನಿನಗಿಂತಲೂ ಸುಕುಮಾರ ಸ್ವಭಾವದವಳು.

மலர்காணின் மையாத்தி நெஞ்சே இவள்கண்
பலர்காணும் பூவொக்கும் என்று.   (1112)

ಇವಳ ಕಣ್ಣುಗಳು ಹಲವರು ಕಂಡು ಸಂತಸ ಪಡುವ ಹೂಗಳನ್ನು ಹೋಲುವುದೆಂದು ಭಾವಿಸಿ, ಆ ಹೂಗಳನ್ನು ಕಂಡಾಗ ಗೊಂದಲಕ್ಕೀಡಾಗುವೆಯಲ್ಲ ಓ ಮನಸ್ಸೆ!

முறிமேனி முத்தம் முறுவல் வெறிநாற்றம்
வேலுண்கண் வேய்த்தோ ளவட்கு.   (1113)

ಬಿದಿರಿನಂಥ ತೋಳುಗಳುಳ್ಳ ಈ ಎಳೆವೆಣ್ಣಿಗೆ, ತಳಿರಿನಂಥ ಒಡಲು ಮುತ್ತಿನಂಥ ಹಲ್ಲು, ಸುವಾಸನೆಯುಳ್ಳ ಉಸಿರು, ಶೂಲದಂತೆ (ಚುಚುವ) ಕಾಡಿಗೆಗಣ್ಣು.

காணின் குவளை கவிழ்ந்து நிலன்நோக்கும்
மாணிழை கண்ணொவ்வேம் என்று.   (1114)

ಕುವಲಯ ಪುಷ್ಪಕ್ಕೆ ನೋಡುವ ಕಣ್ಣುಗಳಿದ್ದರೆ, ಇವಳನ್ನು ಕಂಡು “ಈ ಚೆಲುವೆಯ ಕಣ್ಣುಗಳಿಗೆ ಸರಿದೊರೆಯಾಗಲಾರೆನೆ” ಎಂದು ನಾಚಿ ತಲೆತಗ್ಗಿಸಿ ನೆಲವನ್ನು ನೋಡುವುದು.

அனிச்சப்பூக் கால்களையாள் பெய்தாள் நுகப்பிற்கு
நல்ல படாஅ பறை.   (1115)

ಈ ಚೆಲುವ ತನ್ನ ಸುಕುಮಾರತೆಯನ್ನು ಅರಿಯದೆ ಕಾಂಡದೊಡನೆ ಅನಿಚ್ಚ ಹೂವನ್ನು ಮುಡಿಯಲ್ಲಿ ಮುಡಿದುಕೊಂಡಳು ; ಅದರಿಂದ ಅವಳ ಸುಕುಮಾರ ನಡುವು ಬಾಡಿ ಸೊರಗಿತು. ಅದರಿಂದ ಮಂಗಳ ವಾದ್ಯವು ಮೊಳಗಲಿಲ್ಲ.

மதியும் மடந்தை முகனும் அறியா
பதியின் கலங்கிய மீன்.   (1116)

ಚಂದ್ರನನ್ನೂ, ಈ ಎಳೆವೆಣ್ಣಿನ ಮುಖವನ್ನೂ ನಿರ್ಣಾಯಿಸಲಾರದೆ ತಾರೆಗಳು ನೆಲೆತಪ್ಪಿ ಪರಿಭ್ರಮಿತಗೊಂಡಿವೆ.

அறுவாய் நிறைந்த அவிர்மதிக்குப் போல
மறுவுண்டோ மாதர் முகத்து.   (1117)

ಮೊದಲು ಕ್ಷಯಿಸಿ ಆಮೇಲೆ ತುಂಬಿಕೊಂಡು ಬೆಳಗುವ ಚಂದ್ರನಲ್ಲಿರುವಂತೆ ಈ ಹೆಣ್ಣಿನ ಮುಖದಲ್ಲಿ ಕಳಂಕವುಂಟೆ?

மாதர் முகம்போல் ஒளிவிட வல்லையேல்
காதலை வாழி மதி.   (1118)

ಚಂದ್ರನೇ, ನೀನು ವರ್ಧಿಸು! ಈ ಬೆಡಗಿಯ ಮುಖದಂತೆ ನೀನೂ ಬೆಳಗಬಲ್ಲೆಯಾದರೆ ನೀನೂ ನನ್ನ ಪ್ರೀತಿ ಪಾತ್ರನಾಗುವೆ.

மலரன்ன கண்ணாள் முகமொத்தி யாயின்
பலர்காணத் தோன்றல் மதி.   (1119)

ಓ ಚಂದ್ರನೇ, ಅಲರನೇತ್ರಯಾದ ಈ ಎಳೆವೆಣ್ಣಿನ ಮುಖವನ್ನು ನೀನು ಹೋಲಬಯಸುವುದಾದರೆ, ಇತರರು ನಿನ್ನನ್ನು ಕಾಣುವಂತೆ ತೋರಿಕೊಳ್ಳಬೇಡ. ನಿನ್ನ ಸುಂದರ ವದನವು ನನಗೆ ಮಾತ್ರ ಮೀಸರಾಗಿರಲಿ.

அனிச்சமும் அன்னத்தின் தூவியும் மாதர்
அடிக்கு நெருஞ்சிப் பழம்.   (1120)

ಈ ಕೋಮಲೆಯ ಅಡಿಗಳಿಗೆ ಅನಿಚ್ಚ ಹೂವೂ, ಹಂಸತೊಲಿಕವೂ ನೆರುಂಜೆ ಮುಳ್ಳಿನಂತೆ ಇವೆ.