ಕೊಡದ ಸ್ನೇಹ

சீரிடம் காணின் எறிதற்குப் பட்டடை
நேரா நிரந்தவர் நட்பு.   (821)

ಮನಃಪೂರ್ವಕವಾಗಿ ಅಲ್ಲದೆ ಕೇವಲ ತೋರಿಕೆಗೆ ಹೊಂದಿಕೊಂಡವರ ಸ್ನೇಹವು ಸಮಯ ಬಂದಾಗ ಆಪತ್ತು ತರುವ ಬಲಿಗಲ್ಲಾಗುವುದು.

இனம்போன்று இனமல்லார் கேண்மை மகளிர்
மனம்போல வேறு படும்.   (822)

ಸ್ನೇಹಿತರಂತೆ ತೋರಿಸಿಕೊಂಡು, ಸ್ನೇಹಿತರಾಗದಿರುವವರ ಗೆಳೆತನವು, ಹೆಂಗಸರ ಮನಸ್ಸಿನಂತೆ, ಹೊರಗೊಂದು ಒಳಗೊಂದು ಆಗಿರುವುದು.

பலநல்ல கற்றக் கடைத்து மனநல்லர்
ஆகுதல் மாணார்க் கரிது.   (823)

ಹಲವು ಒಳೆಯ ಗ್ರಂಥಗಳನ್ನು ಓದಿಕೊಂಡು ವಿದ್ಯಾವಂತರಾಗಿದ್ದರೂ ಮನಸ್ಸಿನಲ್ಲಿ ಒಳ್ಳೆಯವರಾಗಿರುವುದು, ಅಲ್ಪ ಮನಸ್ಕರಿಗೆ (ಹಗೆಗಳಿಗೆ) ಅಸಾಧ್ಯ.

முகத்தின் இனிய நகாஅ அகத்தின்னா
வஞ்சரை அஞ்சப் படும்.   (824)

ಕಂಡಾಗ ಮುಖದಲ್ಲಿ ಸ್ನೇಹದ ನಗೆ ಸೂಸುತ್ತ ಹೃದಯದಲ್ಲಿ ಕೆಟ್ಟದ್ದನ್ನು ಎಣಿಸುವ ವಂಚಕರನ್ನು ಕಂಡು ಹೆದರಿ ದೂರವಿರಬೇಕು.

மனத்தின் அமையா தவரை எனைத்தொன்றும்
சொல்லினால் தேறற்பாற்று அன்று.   (825)

ತಮ್ಮೊಡನೆ ಮನಸ್ಸಿನಲ್ಲಿ ಹೊಂದಾಣಿಕೆ ಇಲ್ಲದವರ ಯಾವೊಂದು ಮಾತಿನಲ್ಲೂ ವಿಶ್ವಾಸವಿಡಕೂಡದು.

நட்டார்போல் நல்லவை சொல்லினும் ஒட்டார்சொல்
ஒல்லை உணரப் படும்.   (826)

ಹಗೆಗಳ ಮಾತು, ಸ್ನೇಹಿತರ ಮಾತಿನಂತೆ ಒಳ್ಳೆಯುದನ್ನೇ ಹೇಳಿದರೂ ಅದರಲ್ಲಿರುವ ಕೇಡಿನ ದನಿ, ಕೂಡಲೇ ಬಯಲಾಗುತ್ತದೆ.

சொல்வணக்கம் ஒன்னார்கண் கொள்ளற்க வில்வணக்கம்
தீங்கு குறித்தமை யான்.   (827)

ಬಿಲ್ಲಿನ ಡೊಂಕು ಅಥವಾ ಬಾಗುವಿಕೆಯು ಇನ್ನೊಬ್ಬರ ಪ್ರಾಣವನ್ನು ತೆಗೆಯುವುದರಿಂದ ಕೆಟ್ಟದ್ದನೇ ಸೂಚಿಸುವುದು; ಅದರಂತೆ, ಒಲ್ಲದವರ ಮಾತಿನ ವೆನಯ (ಡೊಂಕು) ಕೂಡ; ಅದನ್ನ್ಯ್ ಸ್ವೀಕರಿಸಬಾರದು.

தொழுதகை யுள்ளும் படையொடுங்கும் ஒன்னார்
அழுதகண் ணீரும் அனைத்து.   (828)

(ಹಗೆಗಳು) ಕೈಮುಗಿದು ನಮಸ್ಕರಿಸುವಾಗಲೂ ಕೈಯೊಳಗೆ ಆಯುಧವನ್ನು ಅಡಗಿಸಿಟ್ಟುಕೊಂಡಿರುತ್ತಾರೆ; ಅವರು ಅತ್ತು ಸುರಿಸುವ ಕಾಣ್ಣೀರು ಕೂಡ ಅದೇ ಬಗೆಯದು (ವಂಚನೆಯಿಂದ ಕೂಡಿದುದು)

மிகச்செய்து தம்மெள்ளு வாரை நகச்செய்து
நட்பினுள் சாப்புல்லற் பாற்று.   (829)

ಹೊರಗೆ ಮಿಗಿಲಾದ ಸ್ನೇಹವನ್ನು ತೋರಿಸುತ್ತ ಒಳಗೊಳಗೇ ತಮ್ಮನ್ನು ನಿಂದಿಸುವ ಹಗೆಗಳೊಡನೆ, ಅರಸನಾದವನು ತಾನೂ ಸ್ನೇಹವನ್ನು ಪ್ರಕಟಿಸಿ, ಒಳಗೇ ಆ ಸ್ನೇಹವು ನಶಿಸುವಂತೆ ವರ್ತಿಸಬೇಕು.

பகைநட்பாம் காலம் வருங்கால் முகநட்டு
அகநட்பு ஒரீஇ விடல்.   (830)

ಹಗೆಗಳು ಸ್ನೇಹಿತರಾಗುವ ಕಾಲ ಬಂದಾಗ, ಅರಸನು ಮುಖದಲ್ಲಿ ಸ್ನೇಹವನ್ನು ಪ್ರಕಟಿಸಿ, ಮನಸ್ಸಿನಲ್ಲಿ ಆ ಸ್ನೇಹವನ್ನು ತೊಡೆದು ಹಾಕಬೇಕು. ಸ್ವಲ್ಪ ಕಾಲದ ನಂತರ ಬಹಿರಂಗವಾಗಿಯೂ ಆ ಸ್ನೇಹವನ್ನು ಕೈಬಿಡಬೇಕು.