ಕಳದಿರುವುದು

எள்ளாமை வேண்டுவான் என்பான் எனைத்தொன்றும்
கள்ளாமை காக்கதன் நெஞ்சு.   (281)

ಇತರರ ದೃಷ್ಟಿಯಲ್ಲಿ ಕೀಳಾಗಬಾರದೆಂದು ಬಯಸುವವನು, ಅತಿ ಸಣ್ಣವಸ್ತುವವನ್ನೂ ವಂಚಿಸಿ ಕದಿಯದಿರುವಂತೆ ತನ್ನ ಮನಸ್ಸನ್ನು ಕಾಪಾಡಿಕೊಳ್ಳಬೇಕು.

உள்ளத்தால் உள்ளலும் தீதே பிறன்பொருளைக்
கள்ளத்தால் கள்வேம் எனல்.   (282)

ಮನಸ್ಸಿನಿಂದ ಕೆಟ್ಟದನ್ನು ನೆನೆಯುವುದೂ ಪಾಪವೇ; ಅದರಿಂದ ಹೆರರ ಒಡವೆಯನ್ನು ಅವರಿಗೆ ಗೊತ್ತಿಲ್ಲದಂತೆ 'ಅಪಹರಿಸೋಣ' ಎಂಬ ಭಾವನೆ ಮನಸ್ಸಿನಲ್ಲಿ ಬಾರದಂತಿರಬೇಕು.

களவினால் ஆகிய ஆக்கம் அளவிறந்து
ஆவது போலக் கெடும்.   (283)

ಕಳವಿನಿಂದ ಉಂಟಾದ ಸಂಪತ್ತು, ಬೆಳೆಯುವಂತೆ ತೋರಿ ಕೊನೆಗೆ ಸಂಪೂರ್ಣ ನಾಶವಾಗುವುದು.

களவின்கண் கன்றிய காதல் விளைவின்கண்
வீயா விழுமம் தரும்.   (284)

ಕಳವಿನಿಂದ ಹೆರರ ಸಂಪತ್ತನ್ನು ದಕ್ಕಿಸಿಕೊಳ್ಳುವುದರಲ್ಲಿ ಪಕ್ವವಾದ ಒಲವು ಪರಿಣಾಮದಲ್ಲಿ ಕೊನೆಯಿಲ್ಲದ ದುಃಖವನ್ನು ತರುವುದು.

அருள்கருதி அன்புடைய ராதல் பொருள்கருதிப்
பொச்சாப்புப் பார்ப்பார்கண் இல்.   (285)

ಪರರ ಒಡವೆಯನ್ನು ಕಬಳಿಸಲು ಎಣಿಸಿ ಅದರು ಮೈಮರೆವುದನ್ನೇ ಎದುರು ನೋಡುವವರ ಬಳಿ ಕರುಣೆಯಿಂದ ಪ್ರೀತಿ ತೋರುವ ಗುಣ ಇರುವುದಿಲ್ಲ.

அளவின்கண் நின்றொழுகல் ஆற்றார் களவின்கண்
கன்றிய காத லவர்.   (286)

ಕಳ್ಳತನದಿಂದ ಪರರ ಸೊತ್ತನ್ನು ವಂಚಿಸುವುದರಿಲ್ಲ ನುರಿತ ಒಲವುಳ್ಳವರು ವಿವೇಕದಿಂದ ಧರ್ಮಮಾರ್ಗದಲ್ಲಿ ನಡೆಯಲಾರರು.

களவென்னும் காரறி வாண்மை அளவென்னும்
ஆற்றல் புரிந்தார்கண்ட இல்.   (287)

ಕಳ್ಳತನಕ್ಕೆ ಕಾರಣವಾದ ಕತ್ತಲೆಯ ಅರಿವು (ವ್ಯಾಮೋಹ), ವಿವೇಕದ ಬಲವನ್ನು ಬಯಸುವವರಲ್ಲಿ ಇರುವುದಿಲ್ಲ.

அளவறிந்தார் நெஞ்சத் தறம்போல நிற்கும்
களவறிந்தார் நெஞ்சில் கரவு.   (288)

ವಿವೇಕವುಳ್ಳವರ ಹೃದಯದಲ್ಲಿ ಧರ್ಮವು ನೆಲೆಯೂರಿರುವಂತೆ, ಕಳ್ಳರ ಹೃದಯದಲ್ಲಿ ವಂಚನೆಯು ನೆಲೆಯೂರಿರುತ್ತದೆ.

அளவல்ல செய்தாங்கே வீவர் களவல்ல
மற்றைய தேற்றா தவர்.   (289)

ವಂಚನೆಯಲ್ಲದೆ ಬೇರೆ ಒಳ್ಳೆಯ ಮಾರ್ಗಗಳನ್ನು ಅರಿಯದವರು, ವಿವೇಕವಲ್ಲದ ಕಾರ್ಯಗಳನ್ನು ಮಾಡಿ ಒಡನೆಯೇ ಕೆಟ್ಟು ನಾಶವಾಗುವವರು.

கள்வார்க்குத் தள்ளும் உயிர்நிலை கள்வார்க்குத்
தள்ளாது புத்தே ளுளகு.   (290)

ಕಳ್ಳತನ ಮಾಡುವವರಿಗೆ ಭೂಮಿಯಲ್ಲಿ ಉಸಿರೊಂದಿಗೆ ಬಾಳುವ ನೆಲೆಯೂ ತಪ್ಪಿಹೋಗುತ್ತದೆ. ಕಳ್ಳತನ ಮಾಡದವರನ್ನು ದೇವಲೋಕವೂ ಆದರಿಸುತ್ತದೆ.