ನ್ಯಾಯಾಡಳಿತ

ஓர்ந்துகண் ணோடாது இறைபுரிந்து யார்மாட்டும்
தேர்ந்துசெய் வஃதே முறை.   (541)

ಯಾರೆಲ್ಲ ಆಗಲಿ ತಪ್ಪು ಯಾವುದೆಂದು ಪರಿಶೀಲಿಸಿ, ಪಕ್ಷಪಾತವೆಣಿಸದೆ ವಿಚಾರಮಾಡಿ ನಡೆದುಕೊಳ್ಳುವುದೇ ನ್ಯಾಯವೆನಿಸುವುದು.

வானோக்கி வாழும் உலகெல்லாம் மன்னவன்
கோல்நோக்கி வாழுங் குடி.   (542)

ಲೋಕದಲ್ಲಿರುವ ಜೀವಿಗಳೆಲ್ಲ ಮಳೆಯನ್ನು ನಿರೀಕ್ಷಿಸಿ ಬಾಳುವರು; ಅದೇ ರೀತಿ ಪ್ರಜೆಗಳೆಲ್ಲಾ ಅರಸನ (ನ್ಯಾಯಪಾಲನೆಯ) ರಾಜದಂಡವನ್ನು ನಿರೀಕ್ಷಿಸಿ ಬಾಳುವರು.

அந்தணர் நூற்கும் அறத்திற்கும் ஆதியாய்
நின்றது மன்னவன் கோல்.   (543)

ಬಾಹ್ಮಣರ ವೇದಗಳಿಗೂ, ಧರ್ಮಕ್ಕೂ ಅಡಿಗಲ್ಲಾಗಿ ನಿಂತು (ಕಾಪಾಡುವುದು) ಅರಸನ ರಾಜದಂಡ.

குடிதழீஇக் கோலோச்சும் மாநில மன்னன்
அடிதழீஇ நிற்கும் உலகு.   (544)

ಪ್ರಜೆಗಳನ್ನು (ಪ್ರೀತಿಯಿಂದ) ತಪ್ಪಿಕೊಂಡು, ರಾಜದಂಡದಿಂದ ನ್ಯಾಯವನ್ನು ನಡೆಸುವ ಅರಸನ ಅಡಿಗಳನ್ನು ಲೋಕವೇ ತಬ್ಬಿಕೊಂಡು ಬಾಳುವುದು.

இயல்புளிக் கோலோச்சும் மன்னவன் நாட்ட
பெயலும் விளையுளும் தொக்கு.   (545)

ನೀತಿಧರ್ಮಗಳಿನುಸಾರವಾಗಿ ತನ್ನ ರಾಜದಂಡವನ್ನು ನಿರ್ವಿಹಿಸುವ ಅರಸನ ನಾಡಿನಲ್ಲಿ (ಸಕಾಲದಲ್ಲಿ) ಮಳೆಯೂ ಸಮೃದ್ದಿಯಾದ ಬೆಳೆಯೂ ಒಟ್ಟಿಗೇ ನೆಲಸುತ್ತದೆ.

வேலன்று வென்றி தருவது மன்னவன்
கோலதூஉங் கோடா தெனின்.   (546)

ಅರಸನಿಗೆ ಜಯಗಳಿಸಿ ತರುವುದು ಆಯುಧಗಳಲ್ಲ; ಪಕ್ಷಪಾತವಿಲ್ಲದ ಅವನ ರಾಜದಂಡದ ಬಲ.

இறைகாக்கும் வையகம் எல்லாம் அவனை
முறைகாக்கும் முட்டாச் செயின்.   (547)

ಲೋಕವನ್ನೆಲ್ಲಾ ಅರಸನು ಕಾಪಾಡುವನು; ನೀತಿಧರ್ಮ ಕೆಡದಂತೆ ಆಡಳಿತ ನಡೆಸುವವನಾದರೆ ಅರಸನನ್ನು ಆ ಧರ್ಮವೇ ಕಾಪಾಡುವುದು.

எண்பதத்தான் ஓரா முறைசெய்யா மன்னவன்
தண்பதத்தான் தானே கெடும்.   (548)

ಭೋಳೇ ಸ್ವಭಾವದಿಂದ, ವಿಚಾರ ಮಾಡದೆ, ನೀತಿ ಧರ್ಮವನ್ನು ನಡೆಸದಿರುವ ಅರಸನು, ಕೀಳು ಸ್ಥಿತಿಗೆ ಬಂದು ತಾನೇ ಕೆಡುತ್ತಾನೆ.

குடிபுறங் காத்தோம்பிக் குற்றம் கடிதல்
வடுவன்று வேந்தன் தொழில்.   (549)

ಪ್ರಜೆಗಳನ್ನು ಇತರರು ಬಾಧೆಪಡಿಸದಂತೆ ಕಾಪಾಡಿ ಅವರನ್ನು ಸಲಹಿ, ಅಪರಾಧಗಳಿಗೆ ತಕ್ಕ ದಂಡನೆ ವಿಧಿಸುವುದು ಅರಸನ ಕರ್ತವ್ಯವೇ ಹೊರತು ಅದು ಅವನ ದೋಷದಲ್ಲ.

கொலையிற் கொடியாரை வேந்தொறுத்தல் பைங்கூழ்
களைகட் டதனொடு நேர்.   (550)

ಅರಸನಾದವನು ಕೆಡುಕನ್ನು ಮಾಡುವ ಪ್ರಜೆಗಳಿಗೆ ಕೋಲೆದಂಡನೆಯಿಂದ ದಂಡಿಸುವುದು, ಪಯಿರನ್ನು ಕಾಪಾಡಲು ಕೆಳೆಯನ್ನು ನಿವಾರಿಸುವುದಕ್ಕೆ ಸಮಾನವಾದುದು.