ಅಂಗಗಳು ಕೃಶವಾಗುವುದು

சிறுமை நமக்கொழியச் சேட்சென்றார் உள்ளி
நறுமலர் நாணின கண்.   (1231)

ನಮ್ಮನ್ನು ಈ ವಿರಹ ದುಃಖವು ಬಾಧಿಸುವಂತೆ, ಬಹು ದೂರ ಅಗಲಿ ಹೋದ ನಿನ್ನ ಪ್ರಿಯತಮಯನ್ನು ನೆನೆದು ಅತ್ತು ಸೊರಗಿರುವ ನಿನ್ನ ಕಣ್ಣುಗಳು; ಸೌಂದರ್ಯವನ್ನು ಕಳೆದುಕೊಂಡು, ನರುಗುಂಪಿನ ಹೊಗಳನ್ನು ಕಂಡು ನಾಚಿಗೊಳ್ಳುತ್ತಿವೆ.

நயந்தவர் நல்காமை சொல்லுவ போலும்
பசந்து பனிவாரும் கண்.   (1232)

ಹಳದಿ ಬಣ್ಣವನ್ನು ತಾಳಿ ಕಂಬಿನ ಸುರಿಸುವ ನಿನ್ನ ಕಣ್ಣುಗಳು, ನಾವು ಕೋರಿದ ಪ್ರಿಯತಮನು ಪ್ರೀತಿ ತೋರದ ನಿಲುವನ್ನು ಸಾರಿ ಹೇಳುವಂತಿವೆ.

தணந்தமை சால அறிவிப்ப போலும்
மணந்தநாள் வீங்கிய தோள்.   (1233)

ವಿವಾಹ ಬಂಧನದಿಂದ ಕೂಡಿದ್ದ ದಿನಗಳಲ್ಲಿ ಉಬ್ಬಿ ಪುಷ್ಪವಾಗಿದ್ದ ನಿನ್ನ ತೋಳುಗಳು, ಈಗ ಪ್ರಿಯತಮನ ವಿರಹವನ್ನು ಸೂಚಿಸುತ್ತಿವೆಯೇ ಎಂಬಂತೆಕೃಶಗೊಂಡಿವೆ.

பணைநீங்கிப் பைந்தொடி சோரும் துணைநீங்கித்
தொல்கவின் வாடிய தோள்.   (1234)

ಬಾಳ ಸಂಗಾತಿಯಾಗಿದ್ದ ಇನಿಯನ ಅಗಲಿಕೆಯಿಂದ ಹಿಂದಿನ ಕಾಂತಿಯನ್ನು ಕಳೆದುಕೊಂಡು ಬಾಡಿದ ನಿನ್ನ ತೋಳುಗಳು, ಪುಷ್ಪವಾದ ಮಾಂಸಲ ಭಾಗವಿಲ್ಲದೆ ತೊಟ್ಟ ಚಿಮ್ಮದ ಬಳೆಗಳು ಸಡಿಲಗೊಂಡು ಜಾರುತ್ತಿವೆ!

கொடியார் கொடுமை உரைக்கும் தொடியொடு
தொல்கவின் வாடிய தோள்.   (1235)

ಬಳೆಗಳು ಸಡಿಲವಾಗಿ ಹಿಂದಿನ ಚೆಲುವಳಿದು ಬಾಡಿದ ನಿನ್ನ ತೋಳುಗಳು (ನಿನ್ನ ದುಃಖವನ್ನು ಗ್ರಹಿಸದೆ) ನಿರ್ದಯನಾದ ಇನಿಯನ ಹೃದಯದ ಕಾಠಿಣ್ಯವನ್ನು ಸಾರಿ ಹೇಳುತ್ತಿವೆ.

தொடியொடு தோள்நெகிழ நோவல் அவரைக்
கொடியர் எனக்கூறல் நொந்து.   (1236)

ಬಳೆಗಳು ಸಡಿಲವಾಗುವಂತೆ ತೋಳುಗಳು ಕೃಶವಾದುದರಿಂದ, ನೀನು ನನ್ನ ಇನಿಯನನ್ನು ನಿರ್ದಯನೆಂದು ಹೇಳುವುದನ್ನು ಕೇಳಿ ನಾನು ದುಃಖಪಡುತ್ತಿದ್ದೇನೆ.

பாடு பெறுதியோ நெஞ்சே கொடியார்க்கென்
வாடுதோட் பூசல் உரைத்து.   (1237)

ಓ ನನ್ನ ಹೃದಯವೇ! ನಿರ್ದಯನಾದ ಇನಿಯನಿಗೆ ನನ್ನ ಕೃಶವಾದ ತೋಳುಗಳ ಗೋಳನ್ನು ಒರೆದು ಪುಣ್ಯವನ್ನು ಕಟ್ಟಿಕೊಳ್ಳಲಾರೆಯಾ?

முயங்கிய கைகளை ஊக்கப் பசந்தது
பைந்தொடிப் பேதை நுதல்.   (1238)

ಅಪ್ಪಿಕೊಂಡ ನನ್ನ ಕೈಗಳನ್ನು ಸಡಿಲಿಸಿದೊಡನೆಯೇ ಚಿನ್ನದ ಬಳೆಗಳನ್ನು ತೊಟ್ಟ ಕಾಮಿನಿಯ ನೊಸಲು (ಅಲ್ಪ ವಿರಹವನ್ನೂ ಸಹಿಸಲಾರದೆ) ವಿವರ್ಣವಾಯಿತು.

முயக்கிடைத் தண்வளி போழப் பசப்புற்ற
பேதை பெருமழைக் கண்.   (1239)

ಆಲಿಂಗನದ ಎಡೆಯಲ್ಲಿ ತಣ್ಣೆಲರು ನುಸುಳಿ ಮ್ಬಂದೊಡನೆಯೇ (ಅದನ್ನು ಸಹಿಸಲಾರದೆ), ಕಾಮಿನಿಯ ನೀಲಮೇಘವನ್ನು ಹೋಲುವ ಕಣ್ಣುಗಳು ವಿವರ್ಣವನ್ನು ತಾಳಿದುವು.

கண்ணின் பசப்போ பருவரல் எய்தின்றே
ஒண்ணுதல் செய்தது கண்டு.   (1240)

ಕಾದಲೆಯ ಕಾಂತಿಯುಕ್ತವಾದ ನೊಸಲು ವಿವರ್ಣವಾದುದನ್ನು ಕಂಡು, ಅವಳ ಕಣ್ಣುಗಳ ವೈವರ್ಣ್ಯವೂ ದುಃಖವನ್ನು ತಾಳಿತ್ತಲ್ಲವೆ?