ಮಂತ್ರಿ ಗುಣ

கருவியும் காலமும் செய்கையும் செய்யும்
அருவினையும் மாண்டது அமைச்சு.   (631)

ಕೆಲಸಕ್ಕೆ ತಕ್ಕ ಸಾಧನವನ್ನೂ, ತಕ್ಕ ಕಾಲವನ್ನೂ ಕೆಲಸ ಮಾಡಲು ತಕ್ಕ ವೆಧಾನವನ್ನೂ, ಕಷ್ಟಸಾಧ್ಯವಾದ ಕೆಲಸವನ್ನೂ ಅರಿತು ವಿಶಿಷ್ಟ ರೀತಿಯಲ್ಲಿ ಮಾಡ ಬಲ್ಲವನೇ ಮಂತ್ರಿಯು.

வன்கண் குடிகாத்தல் கற்றறிதல் ஆள்வினையோடு
ஐந்துடன் மாண்டது அமைச்சு.   (632)

ಮೇಲಿನ ಐದು ಗುಣಗಳೊಂದಿಗೆ ನಿರ್ಭೀತ ದೃಷ್ಟಿ, ಪ್ರಚಾರಕ್ಷಣೆ, ನಿಖರವಾದ ಜ್ಞಾನ, ಪ್ರಮಾಣಿಕ ಪ್ರಯತ್ನ ಇವುಗಳನ್ನು ವಿಶಿಷ್ಟವಾಗಿ ಹೊಂದಿರುವವನು ಮಂತ್ರಿಯು.

பிரித்தலும் பேணிக் கொளலும் பிரிந்தார்ப்
பொருத்தலும் வல்ல தமைச்சு.   (633)

ಹಗೆಗಳಿಗೆ ನೆರವಾಗುವವರನ್ನು ದೊರಮಾಡಿ, ತನ್ನೊಡನೆ ಇರುವವರನ್ನು ರಕ್ಷಿಸುತ್ತ ತನ್ನಿಂದ ದೊರವಾದವರನ್ನು ಮತ್ತೆ ಸೇರಿಸಿಕೊಳ್ಳಬಲ್ಲವನೇ ಮಂತ್ರಿಯು.

தெரிதலும் தேர்ந்து செயலும் ஒருதலையாச்
சொல்லலும் வல்லது அமைச்சு.   (634)

ಮಾಡುವ ಕೆಲಸಗಳನ್ನು ಚೆನ್ನಾಗಿ ತಿಳಿದುಕೊಂಡು, ಅದಕ್ಕೆ ಬೇಕಾದ ಮಾರ್ಗಗಳನ್ನು ಆಲೋಚಿಸಿ ಕೈಕೊಂಡು, ನಿಷ್ಚಯವಾಗಿ ಅಭಿಪ್ರಾಯಗಳನ್ನು ಹೇಳಬಲ್ಲವನೇ ಮಂತ್ರಿಯು.

அறனறிந்து ஆன்றமைந்த சொல்லான்எஞ் ஞான்றுந்
திறனறிந்தான் தேர்ச்சித் துணை.   (635)

ಧರ್ಮವನ್ನು ತಿಳಿದು, ಪೂರ್ಣ ಜ್ಞಾನದಿಂದ ಮಾತಾಡ ಬಲ್ಲವನಾಗಿ, ಮಾಡುವ ಕೆಲಸದ ಮರ್ಮವನ್ನು ಅರಿತವನಾಗಿಯೂ ಇರಬಲ್ಲವನೇ ಅರಸನ ಮಂತ್ರಾಲೋಚನೆಗೆ ಸಹಾಯಕನೆನಿಸುವನು.

மதிநுட்பம் நூலோடு உடையார்க்கு அதிநுட்பம்
யாவுள முன்நிற் பவை.   (636)

ಶಾಸ್ತ್ರ ಜ್ಞಾನದೊಂದಿಗೆ ಸ್ವಾಭಾವಿಕವಾದ ಸೂಕ್ಷ್ಮ ಬುದ್ದಿಯುಳ್ಳವರಿಗೆ ಎದುರಿಸಿ ನಿಲ್ಲಬೇಕಾದಂಥ ಅತಿ ಸೂಕ್ಷ್ಮ ವಿಚಾರಗಳು ಯಾವುವಿವೆ?

செயற்கை அறிந்த கடைத்தும் உலகத்து
இயற்கை அறிந்து செயல்.   (637)

ಪುಸ್ತಕ ಜ್ಞಾನದಿಂದ ಕೆಲಸ ಮಾಡುವ ಬಗೆ ತಿಳಿದಿದ್ದರೂ ಲೋಕದ ಸ್ವಭಾವವನ್ನು ತಿಳಿದು ಕೆಲಸ ಮಾಡಬೇಕು.

அறிகொன்று அறியான் எனினும் உறுதி
உழையிருந்தான் கூறல் கடன்.   (638)

ಅರಸನಾದವನು ಪೂರ್ತಿ ಅಜ್ಞಾನಿಯಾಗಿದ್ದರೂ ಅವನಿಗೆ ಖಚಿತವಾಗ ಸಲಹೆಗಳನ್ನು, ಕೊಡುವುದು ಮಂತ್ರಿಯಾದವನ ಕರ್ತವ್ಯ.

பழுதெண்ணும் மந்திரியின் பக்கததுள் தெவ்வோர்
எழுபது கோடி உறும்.   (639)

ಸನಿಹದಲ್ಲೇ ಇದ್ದು (ಅರಸನ) ನಾಶವನ್ನು ಬಯಸುವ ಮಂತ್ರಿಗಿಂತ, ಎಪ್ಪತ್ತು ಕೋಟಿ ಹಗೆಗಳು ಇದ್ದರೂ ಅದು ಉತ್ತಮವೇ.

முறைப்படச் சூழ்ந்தும் முடிவிலவே செய்வர்
திறப்பாடு இலாஅ தவர்.   (640)

ಕಾಯದಕ್ಷತೆಯಿಲ್ಲದ ಮಂತ್ರಿಗಳು, ತಾವು ಕೈಗೊಂಡ ಕೆಲಸದಲ್ಲಿ ಮುಂಚಿತವಾಗಿ ಸಾಕಷ್ಟು ಸಲಹೆಗಳನ್ನು ಪಡೆದಿದ್ದರೂ, ಅದನ್ನು ಮುಗಿಸಲಾರದೇ ಕೈಬಿಡುತ್ತಾರೆ.