ಭಿಕ್ಷಾಟನೆ

இரக்க இரத்தக்கார்க் காணின் கரப்பின்
அவர்பழி தம்பழி அன்று.   (1051)

ಬೇಡಲು ತಕ್ಕವರನ್ನು ಕಂಡರೆ ಬೇಡಿಕೊಳ್ಳಬೇಕು; ಅವರು ಕೊಡಗೆ ತಿರಸ್ಕರಿಸಿದರೆ, ಆ ದೋಷವು ಅವರಿಗೇ ವಿನಾ ಬೇಡುವವನದಲ್ಲ.

இன்பம் ஒருவற்கு இரத்தல் இரந்தவை
துன்பம் உறாஅ வரின்.   (1052)

ಬೇಡಿನ ವಸ್ತುಗಳು ದುಃಖವುಂಟಾಗದೆ ಮನ ಮೆಚ್ಚಿ ಕೊಡಲ್ಪತ್ತರೆ, ಆ ಯಾಚನೆಯು ಬೇಡಿದವನಿಗೆ ಸುಖಕರವೇ ಆಗುತ್ತದೆ.

கரப்பிலா நெஞ்சின் கடனறிவார் முன்நின்று
இரப்புமோ ரேஎர் உடைத்து.   (1053)

ಮನಸ್ಸಿನಲ್ಲಿ ಕೈಪಣತೆಯಿಲ್ಲದೆ, ಕರ್ತವ್ಯವೆಂದು ತಿಳಿದು ಕೊಡುವ ದಾನಿಗಳಮುಂದೆ ನಿಂತು ಬೇಡುವುದರಲ್ಲೂ ಒಂದು ಬಗೆಯ ಸೊಬಗು ಇರುತ್ತದೆ.

இரத்தலும் ஈதலே போலும் கரத்தல்
கனவிலும் தேற்றாதார் மாட்டு.   (1054)

ಕೃಪಣತೆಯನ್ನು ಕನಸಿನಲ್ಲಿಯೂ ಅರಿಯದವರ ಬಳಿ ಬೇಡಿ ಪಡೆದುಕೊಳ್ಳುವುದು. ತಾವೇ ದಾನ ಮಾಡಿದುದಕ್ಕೆ ಸಮಾನ.

கரப்பிலார் வையகத்து உண்மையால் கண்ணின்று
இரப்பவர் மேற்கொள் வது.   (1055)

ಕೃಪಣ ಸ್ವಭಾವವಿಲ್ಲದವರು ಈ ಲೋಕದಲ್ಲಿ ಸಹಜವಾಗಿ ಇರುವುದರಿಂದಲೇ ಬೇಡುವವರು ಅವರ ಮುಂದೆ ನಿಂತು ಬೇಡಿಕೊಳ್ಳುವುದು.

கரப்பிடும்பை யில்லாரைக் காணின் நிரப்பிடும்பை
எல்லாம் ஒருங்கு கெடும்.   (1056)

ಜೆಪುಣತನವೆಂಬ ರೋಗವಿಲ್ಲದವರನ್ನು ಕಂಡರೆ, ಬಡತನವೆಂಬ ರೋಗವು ಒಂದೇ ಸಲಕ್ಕೆ ನಾಶವಾಗುವುದು.

இகழ்ந்தெள்ளாது ஈவாரைக் காணின் மகிழ்ந்துள்ளம்
உள்ளுள் உவப்பது உடைத்து.   (1057)

ತೆಗಳಿ ನಿಂದನೆ ಮಾಡದೆ ಕೊಡುಗೈಯಿಂದ ಕೊಡುವವರನ್ನು ಕಂಡರೆ ಬೇಡುವವರ ಮನಸ್ಸು ಆನಂದದಿಂದ ಒಳಗೊಳಗೇ ಸಂತೋಷಪಡುತ್ತದೆ.

இரப்பாரை இல்லாயின் ஈர்ங்கண்மா ஞாலம்
மரப்பாவை சென்றுவந் தற்று.   (1058)

ಬೇಡುವವರೇ ಇಲ್ಲವಾದರೆ, ಈ ತಂಪಾದ ವಿಶಾಲ ಭೂಮಿಯಲ್ಲಿ ವಾಸಿಸುವ ಜನರ ಚಲನೆಯು, ಸೂತ್ರದಿಂದ ಆಡಿಸುವ ಮರದ ಬೊಂಬೆಯ ಚಲನೆಗೆ ಹೋಲುವುದು.

ஈவார்கண் என்னுண்டாம் தோற்றம் இரந்துகோள்
மேவார் இலாஅக் கடை.   (1059)

ಬೇಡಿ ಪಡೆದುಕೊಳ್ಳುವವರೇ ಇಲ್ಲವಾದ ಪಕ್ಷದಲ್ಲಿ ಕೂಡುವ ಮನಸ್ಸುಳ್ಳವರಿಗೆ ಯಾವ ಕೀರ್ತಿ ಉಂಟಾಗುತ್ತದೆ?

இரப்பான் வெகுளாமை வேண்டும் நிரப்பிடும்பை
தானேயும் சாலும் கரி.   (1060)

ಬೇಡುವವನು ಕೋಪಿಸಿಕೊಳ್ಳದಿರಬೇಕು; ಅವನ ಪಡೆದಿರುವ ಬಡತನವೆಂಬ ದುಃಖವೇ ಅವನಿಗೆ ಅರಿವು ತೋರುವ ನಿಷ್ಛಳವಾದ ಸಾಕ್ಷಿ.