ಸ್ವೇಚ್ಛಾ ಸ್ತ್ರೀಯರು (ವೇ

அன்பின் விழையார் பொருள்விழையும் ஆய்தொடியார்
இன்சொல் இழுக்குத் தரும்.   (911)

ಪ್ರೀತಿಯನ್ನು ಬಯಸದೆ (ಕೇವಲ) ಹಣವನ್ನು ಬಯಸುವ ಚೆಲುವ ಸ್ತ್ರೀಯರ (ವೇಶ್ಯೆಯರ) ಇನಿದಾದ ಮಾತುಗಳು ಒಬ್ಬನಿಗೆ ದುಃಖವನ್ನು ತರುತ್ತವೆ.

பயன்தூக்கிப் பண்புரைக்கும் பண்பின் மகளிர்
நயன்தூக்கி நள்ளா விடல்.   (912)

ಲಾಭವನ್ನು ತೂಗಿ ನೋಡಿ ಅದಕ್ಕೆ ತಕ್ಕಂತೆ ನಯವಾದ ಮಾತುಗಳನ್ನಾಡುವ ಗುಣವುಳ್ಳ ಸ್ತ್ರೀಯರ ವರ್ತನೆಯನು ತೂಗಿ ನೋಡಿ, ಅವರ ಪ್ರೀತಿಯನ್ನು ಅಲಕ್ಷಿಸ ಬೇಕು.

பொருட்பெண்டிர் பொய்ம்மை முயக்கம் இருட்டறையில்
ஏதில் பிணந்தழீஇ அற்று   (913)

ಹಣವನ್ನೇ ಗುರಿಯಾಗುಳ್ಳ ವೇಶ್ಯಾ ಸ್ತ್ರೀಯರ ಹುಸಿ ಆಲಿಂಗನವು ಕತ್ತಲೆ ಕೋಣೆಯಲ್ಲಿ ಅಪರಿಚಿತ ಹೆಣವೊಂದನ್ನು ತಬ್ಬಿಕೊಂಡಂತೆ.

பொருட்பொருளார் புன்னலந் தோயார் அருட்பொருள்
ஆயும் அறிவி னவர்.   (914)

ದೈವ ಕೃಪೆಯ ಸಿರಿಯನ್ನು ಅರಸುವ ವಿಚಾರವಂತರು, ಹಣವನ್ನೇ ಮುಖ್ಯವಾಗಿ ಬಯಸುವ ವೇಶ್ಯೆಯರು ಕೂಡುವ ಕೀಳು ಸುಖವನ್ನು ಆಶಿಸುವುದಿಲ್ಲ.

பொதுநலத்தார் புன்னலம் தோயார் மதிநலத்தின்
மாண்ட அறிவி னவர்.   (915)

ಬುದ್ಧಿ ಸಾಮರ್ಥ್ಯದಿಂದ ಶ್ರೇಷ್ಠ ಅರಿವುಳ್ಳವರಾರೂ ಹಣದಾಸೆಗೆ ಎಲ್ಲರಿಗೂ ಪ್ರೀತಿ ತೋರುವ ವೇಶ್ಯೆಯರ ಅಳಿಯೊಲಿವಿಗೆ ದಾಸರಾಗುವುದಿಲ್ಲ.

தந்நலம் பாரப்பார் தோயார் தகைசெருக்கிப்
புன்னலம் பாரிப்பார் தோள்.   (916)

ಆತ್ಮೋನ್ನತಿಯನ್ನು ಅರಸುವವರು, ತಮ್ಮ ಚೆಲುವಿನಿಂದ ಮರುಳುಗೊಳಿಸಿ ಕೀಳು ಸುಖ ನೀಡುವ ವೇಶ್ಯೆಯರ ತೋಳ ಅಪ್ಪುಗೆಯಲ್ಲಿ ಸೇರುವುದಿಲ್ಲ.

நிறைநெஞ்சம் இல்லவர் தோய்வார் பிறநெஞ்சிற்
பேணிப் புணர்பவர் தோள்.   (917)

ಅನಂಭವದಿಂದ ಶ್ರಿಮಂತವಾದ ಮನಸ್ಸು, ಇಲ್ಲದವರು, ತಮ್ಮ ಮನಸ್ಸಿನಲ್ಲಿ ಇತರ ವಸ್ತುಗಳನ್ನು ಬಯಸಿ ಕೂಡಲೆಳಸುವ ವೇಶ್ಯೆಯರ ತೋಳ್ತೆಕ್ಕೆಯಲ್ಲಿ ಸೆರೆಯಾಗುವರು.

ஆயும் அறிவினர் அல்லார்க்கு அணங்கென்ப
மாய மகளிர் முயக்கு.   (918)

ವಿಚಾರ ಮಾಡಿ ನೋಡುವ ಶಕ್ತಿಯಿಲ್ಲದವರಿಗೆ, ಮಾಯಾಂಗನೆಯರ (ವೇಶ್ಯೆಯರ) ಅಪ್ಪುಗೆಯು, ಮೋಹಿನಿ ಹಿಡಿದ ಹಾಗೆ ಎಂದು ಬಲ್ಲವರು ಹೇಳುವರು.

வரைவிலா மாணிழையார் மென்தோள் புரையிலாப்
பூரியர்கள் ஆழும் அளறு.   (919)

ದೊಡ್ಡವರು, ಅಲ್ಪರು ಎನ್ನದೆ ಬೆಲೆಕೊಟ್ಟು ಕೊಳ್ಳುವ ಯಾರನ್ನೂ ಅಪ್ಪುವ ಲಜ್ಜೆಗೆಟ್ಟ ವೇಶ್ಯಾಂಗನೆಯರ ಮೆದುದೋಳು, ಹಿರಿಮೆಯಿಲ್ಲದೆ ಕೀಳು ಜನರು ಬೀಳುವ ಸರಕದಂತೆ.

இருமனப் பெண்டிரும் கள்ளும் கவறும்
திருநீக்கப் பட்டார் தொடர்பு.   (920)

ಇಬ್ಬಗೆಯ ಮನಸ್ಸುಳ್ಳ ವೇಶ್ಯಾಂಗನೆಯರು, ಕಳ್ಳು ಮತ್ತು ಜೂಜು ಇವು ಮೂರೂ ಸಿರಿಯಳಿದ ದರಿದ್ರರ ಒಡನಾಡೀಗಳು.