ಭಿಕ್ಷಾಟನೆಯ ಭಯ

கரவாது உவந்தீயும் கண்ணன்னார் கண்ணும்
இரவாமை கோடி உறும்.   (1061)

ತಿರಸ್ಕಾರ ಮಾಡದೆ ಸಂತೋಷದಿಂದ ದಾನ ಮಾಡುವ, ಕರುಣೆಯ ಕಣ್ಣುಳ್ಳವರ ಬಳಿಯೂ, ಭಿಕ್ಷೆ ಬೇಡದಿರುವುದೇ ಕೋಟಿ ಪಾಲು ಉತ್ತಮ.

இரந்தும் உயிர்வாழ்தல் வேண்டின் பரந்து
கெடுக உலகியற்றி யான்.   (1062)

ಲೋಕವನ್ನು ಸೃಷ್ಟಿಸಿದವನು ಜನರು ಭಿಕ್ಷೆ ಬೇದಿ ಜೀವನ ಬಡೆಸಬೇಕೆಂದು ಇಚ್ಛಿಸಿದಲ್ಲಿ ಅವನೂ ಬೇಡುವವರಂತೆ ತಿರಿದು ಅಲೆದಾಡಿ ಕೆಡಲಿ!

இன்மை இடும்பை இரந்துதீர் வாமென்னும்
வன்மையின் வன்பாட்ட தில்.   (1063)

ಬಡತನವೆಂಬ ದುಃಖವನ್ನು ಭಿಕ್ಷೆ ಬೇಡಿ ತೀರಿಸುತ್ತೇವೆ ಎಂದು ಯೋಚಿಸಿ ಪ್ರಯತ್ನಶೀಲತೆಯನ್ನು ಕೈಬಿಡುವ ಕಠಿಣತೆಗಿಂತ, ಕಠಿಣವಾದುದು ಬೇರೊಂದು ಇಲ್ಲ.

இடமெல்லாம் கொள்ளாத் தகைத்தே இடமில்லாக்
காலும் இரவொல்லாச் சால்பு.   (1064)

ಬಾಳುವ ಮಾರ್ಗವಿಲ್ಲದಿರುವ ಸಮಯದಲ್ಲಿಯೂ ಭಿಕ್ಷೆ ಬೇಡದಿರುವ ದೊಡ್ಡ ಗುಣವು ಎಲ್ಲ ಲೋಕಗಳಲ್ಲಿಯೂ ಮಿಗಿಲಾದ ಹಿರಿಮೆಯುಳ್ಳದು.

தெண்ணீர் அடுபுற்கை ஆயினும் தாள்தந்தது
உண்ணலின் ஊங்கினிய தில்.   (1065)

ಬೇಯಿಸಿಟ್ಟ ತಿಳಿ ನೀರಿನ ಗಂಜೆಯೇ ಆದರೂ ಪ್ರಯತ್ನಪೂರ್ವಕವಾಗಿ ದೊರೆತುದನ್ನು ಊಟ ಮಾಡುವುದಕ್ಕಿಂತ ಹೆಚ್ಚು ಸವಿಯಾದುದು ಬೇರಿಲ್ಲ.

ஆவிற்கு நீரென்று இரப்பினும் நாவிற்கு
இரவின் இளிவந்த தில்.   (1066)

ಸಾಯುವ ಸ್ಥಿತಿಯಲ್ಲಿರುವ ಹಸುವಿಗಾಗಿ ಕರುಣೆಯಿಂದ ನೀರನ್ನು ಬೇಡುವ ಸ್ಥಿತಿ ಬಂದರೂ ಬೇಡುವ ನಾಲಿಗೆಗೆ ಅದಕ್ಕಿಂತ ಅವನತಿ ಬೇರಿಲ್ಲ.

இரப்பன் இரப்பாரை எல்லாம் இரப்பின்
கரப்பார் இரவன்மின் என்று.   (1067)

ಬೇಡುವವರಿಲ್ಲ (ನನ್ನದೊಂದು) ಬೇಡಿಕೆ- 'ಬೇಡುವುದಾದರೂ, ಕೊಡಲು ಮನಸ್ಸಿಲ್ಲದವರ ಬಳಿ ಬೇಡದಿರಿ' ಎಂದು

இரவென்னும் ஏமாப்பில் தோணி கரவென்னும்
பார்தாக்கப் பக்கு விடும்.   (1068)

ಬೇಡುವಿಕೆಯೆನ್ನುವ ಕಾವಲಿಲ್ಲದ ದೋಣಿಯು, ತಿರಸ್ಕಾರವೆನ್ನುವ ಹೆಬ್ಬಂಡೆಯನ್ನು ತಗುಲಿದಾಗ ಒಡೆದು ಚೂರಾಗುವುದು.

இரவுள்ள உள்ளம் உருகும் கரவுள்ள
உள்ளதூஉம் இன்றிக் கெடும்.   (1069)

ಬೇಡುವುದರ ನೆಲೆಯನ್ನು ನೆನೆಸಿಕೊಂಡರೆ ಹೃದಯವು ಕರಗಿ ಹೋಗುತ್ತದೆ; ಇರುವುದನ್ನು ಕೊಡದೆ ತಿರಸ್ಕರಿಸುವ ನಿರ್ದಯ ಮನಸ್ಸನ್ನು ನೆನೆಸಿಕೊಂಡರೆ ಕರಗಿ ಉಳಿದ ಹೃದಯವೂ ಇಲ್ಲದಂತೆ ನಾಶವಾಗುತ್ತದೆ.

கரப்பவர்க்கு யாங்கொளிக்கும் கொல்லோ இரப்பவர்
சொல்லாடப் போஒம் உயிர்.   (1070)

ಬೇಡುವವರಿಗೆ 'ಇಲ್ಲ' ಎಂದು ಹೇಳಿದ ಕೊಡಲೇ ಜೀವವು ಹೋಗಿ ಬಿಡುವುದು; ಇರುವುದನ್ನು ಇಲ್ಲ ಎಂದು ಹೇಳಿ ಅಟ್ಟುವ (ಜಿಪುಣರ), ಪ್ರಾಣವು ಎಲ್ಲಿ ಅವಿತುಕೊಂಡಿರುತ್ತದೆಯೂ!