ಕಳ್ಳು ಕುಡಿಯದಿರುವುದು

உட்கப் படாஅர் ஒளியிழப்பர் எஞ்ஞான்றும்
கட்காதல் கொண்டொழுகு வார்.   (921)

ಕಳ್ಳನ್ನು ಪ್ರೀತಿಸಿ ಅದಕ್ಕೆ ದಾಸರಾಗಿರುವ ಅರಸರು ಯಾವಾಗಲೂ, ಹಗೆಗಳಲ್ಲಿ ಭೀತಿಯನ್ನುಂಟು ಮಾಡಲಾರರು; ಪ್ರತಿಯಾಗಿ ತಮ್ಮ ಕೀರ್ತಿಯನ್ನು ಕೆಡಿಸಿಕೊಳ್ಳುವರು.

உண்ணற்க கள்ளை உணில்உண்க சான்றோரான்
எண்ணப் படவேண்டா தார்.   (922)

ಕಳ್ಳನ್ನು ಕುಡಿಯಬಾರದು; ಸಜ್ಜನರ ಗೌರವಕ್ಕೆ ಪಾತ್ರರಾಗಲು ಇಚ್ಛಿಸದವರು ಬೇಕಾದರೆ ಕುಡಿಯಲಿ!

ஈன்றாள் முகத்தேயும் இன்னாதால் என்மற்றுச்
சான்றோர் முகத்துக் களி.   (923)

ಮಗ ಹೇಗ ನಡೆದುಕೊಂಡರೂ ತಾಯಿಗೆ ಇಷ್ಟವೇ ಆಗುವುದಾದರೂ ಕಳ್ಳು ಕುಡಿದು ಅಮಲಿನಲ್ಲಿ ಸ್ವೇಚ್ಛಿಯಾಗಿ ವರ್ತಿಸುವುದು ಅವಳಿಗೆ ಸಹಿಸದು; ಹಾಗಿರುವಾಗ ಸಜ್ಜನರ ಮುಂದೆ ಕುಡಿದು ಸ್ವೇಚ್ಛಿಯಾಗಿ ವರ್ತಿಸಿದರೆ ಹೇಗೆ ಸಹಿಸಬಲ್ಲರು?

நாண்என்னும் நல்லாள் புறங்கொடுக்கும் கள்ளென்னும்
பேணாப் பெருங்குற்றத் தார்க்கு.   (924)

ಕಳ್ಳು ಕುಡಿಯುವ, ತ್ಯಾಜ್ಯಾವಾದ ದೊಡ್ಡ ಅಪರಾಧ ಮಾಡೀದವರಿಗೆ ನಾಚಿಕೆಯೆಂಬ ಸಜ್ಜನ ವಧು ಬೆನ್ನು ತೋರಿಸಿ ಹೊರಟು ಹೋಗುವಳು.

கையறி யாமை உடைத்தே பொருள்கொடுத்து
மெய்யறி யாமை கொளல்.   (925)

ಹಣ ತೆತ್ತು ಮೈಯರಿಯದ ಸ್ಥಿತಿಯನ್ನು ತಂದುಕೊಳ್ಳುವುದು, ತಾನು ಮಾಡುವ ಕೆಲಸದ ಅರಿವುಗೇಡಿತನವನ್ನು ಸಂಪಾದಿಸಿದಂತೆಯೇ.

துஞ்சினார் செத்தாரின் வேறல்லர் எஞ்ஞான்றும்
நஞ்சுண்பார் கள்ளுண் பவர்.   (926)

ಕಳ್ಳಿನ ಅಮಲಿನಲ್ಲಿ ಮೈಮರೆತು ಮಲಗಿದವರು ಸತ್ತವರಿಗಿಂತ ಬೇರೆ ಅಲ್ಲ; ಕಳ್ಳು ಕುಡಿದವರು ನಂಜುಣ್ಣುವವರೆ ಆಗುತ್ತಾರೆ.

உள்ளொற்றி உள்ளூர் நகப்படுவர் எஞ்ஞான்றும்
கள்ளொற்றிக் கண்சாய் பவர்   (927)

ಕಳ್ಳಿಗೆ ಸೋತು ಬಲಿಯಾದವರು, (ತಮ್ಮ ಅಮಲಿನಿಂದ) ಯಾವಾಗಲೂ, ತಮ್ಮ ಮನಸ್ಸನ್ನು ಪ್ರಕಟಪಡಿಸಿ ಊರ ನಗೆಗೆ ಪಾತ್ರರಾಗುವರು.

களித்தறியேன் என்பது கைவிடுக நெஞ்சத்து
ஒளித்ததூஉம் ஆங்கே மிகும்.   (928)

ನಾನು ಕಳ್ಳು ಕುಡಿದರಿಯೆನು' ಎಂದು ಕಳ್ಳು ಕುಡಿಯುವವನು ಹೇಳುವುದನ್ನು ಕೈಬಿಡಬೇಕು; ಅವನು ಕಳ್ಳು ಕುಡಿದಾಗಲೇ ಅವನ ಮನಸ್ಸಿನೊಳಗಿನ ದೌರ್ಬಲ್ಯವೆಲ್ಲ ಹೊರಗೆ ಬರುವುದು.

களித்தானைக் காரணம் காட்டுதல் கீழ்நீர்க்
குளித்தானைத் தீத்துரீஇ அற்று.   (929)

ಕುಡಿದ ಅಮಲಿನಲ್ಲಿರುವವನಿಗೆ ಕಾರಣ ಹೇಳಿ ತಿಳಿಯಪಡಿಸುವುದು, ನೀರಿನಡಿಯಲ್ಲಿ ಮುಳುಗಿದವನನ್ನು, ಕೊಳ್ಳಿ ದೀಪವನ್ನು ಹಿಡಿದುಕೊಂಡು ಅರಸಿದಂತೆ.

கள்ளுண்ணாப் போழ்திற் களித்தானைக் காணுங்கால்
உள்ளான்கொல் உண்டதன் சோர்வு.   (930)

ಒಬ್ಬನು ತಾನು ಕಳ್ಳು ಕುಡಿಯದಿರುವಾಗ, ಕಳ್ಳಿನ ಅಮಲಿನಲ್ಲಿ ಇರುವವನನ್ನು ಕಂಡಾದ ಕಳ್ಳು ಕುಡಿಯುವುದರಿಂದ ಆಗುವ ಕೆಡುಕನ್ನು ಯೋಚಿಸಲಾರನೆ?