ದಡ್ಡತನ

பேதைமை என்பதொன்று யாதெனின் ஏதங்கொண்டு
ஊதியம் போக விடல்.   (831)

ತನಗೆ ಕೆಡುಕಾದುದನ್ನು ಕೈಗೊಂಡು ತನಗೆ ಪ್ರಯೋಜನ ತರುವುದನ್ನು ಕೈಬಿಡುವುದೇ ದಡ್ಡತನ ಎನಿಸಿಕೊಳ್ಳುವುದು.

பேதைமையுள் எல்லாம் பேதைமை காதன்மை
கையல்ல தன்கட் செயல்.   (832)

ತನ್ನ ನಡತಗೆ ಒಗ್ಗದ ಕೆಲಸಗಳನ್ನು ಬಯಸಿ ಕೈಗೊಳ್ಳುವುದು ದಡ್ಡತನದ ಪರಮಾವಧಿಯೆನಿಸುವುದು.

நாணாமை நாடாமை நாரின்மை யாதொன்றும்
பேணாமை பேதை தொழில்.   (833)

ಲಜ್ಜೆಗೇಡಿತನ, ಗೊತ್ತುಗುರಿ ಇಲ್ಲದಿರುವಿಕೆ, ಪ್ರೇಮಶೂನ್ಯತೆ, ಯಾವ ವಿಷಯದಲ್ಲೂ ಆಸಕ್ತಿ ಇಲ್ಲದಿರುವಿಕೆ- ಇವು ದಡ್ಡತನದ ಲಕ್ಷಣಗಳು.

ஓதி உணர்ந்தும் பிறர்க்குரைத்தும் தானடங்காப்
பேதையின் பேதையார் இல்.   (834)

ಹಲವು ಗ್ರಂಥಗಳನ್ನು ಓದಿ, ಗ್ರಹಿಸಿ, ಇತರರಿಗೆ ಅದನ್ನು ಬೋಧಿಸಿಯೂ ತಾನು ಮಾತ್ರ ತ್ರಿಕರಣ ಶುದ್ಧಿಯಿಂದ ದಡ್ಡನಿಗಿಂತ ಮಿಗಿಲಾದ ದಡ್ಡ ಬೇರಿಲ್ಲ.

ஒருமைச் செயலாற்றும் பேதை எழுமையும்
தான்புக் கழுந்தும் அளறு.   (835)

ದಡ್ಡನಾದವನು ಏಳು ಜನ್ಮದಲ್ಲಿ ಉಂಟಾಗುವ ದುಃಖ, ನರಕ ಯಾತನೆಗಳನ್ನು ಒಂದೇ ಜನ್ಮದಲ್ಲಿ ತನಗುಂಟಾಗುವಂತೆ ಮಾಡಿಕೊಳ್ಳಬಲ್ಲನು.

பொய்படும் ஒன்றோ புனைபூணும் கையறியாப்
பேதை வினைமேற் கொளின்.   (836)

ಕೆಲಸದ ವಿಧಾನವನ್ನು ಅರಿಯದ ದಡ್ಡನು ಒಂದು ಕೆಲಸವನ್ನು ಕೈಗೊಂಡರೆ, ಆ ಕೆಲಸವು ನಿಷ್ಫಲವಾಗುವುದು ಮಾತ್ರವಲ್ಲ, ಆ ಕೆಲಸದಿಂದ ಅವನು 'ತಪ್ಪಿತಸ್ಥ' ನೆನಿಸಿ ಬೇಡಿ ತೊಡಿಸಿಕೊಳ್ಳುವನು.

ஏதிலார் ஆரத் தமர்பசிப்பர் பேதை
பெருஞ்செல்வம் உற்றக் கடை.   (837)

ದಡ್ಡನಾದವನು ಹೇರಳವಾದ ಸಿರಿಯನ್ನು ಸಂಪಾದಿಸಿದಾಗ, ಅಪರಚಿತರು ಅದರ ಲಾಭ ಪಡೆದುಕೊಳ್ಳುವರು; ಹತ್ತಿರದ ಸಂಬಂಧಿಗಳು ಹಸಿವಿನಲ್ಲಿ ಬೀಳುವರು.

மையல் ஒருவன் களித்தற்றால் பேதைதன்
கையொன்று உடைமை பெறின்.   (838)

ದಡ್ಡನ ಕೈಯಲ್ಲಿರುವ ಒಡವೆಯೆಂಬುದು ಹುಚ್ಚನೊಬ್ಬನ ಕೈಯಲ್ಲಿ ಸಿಕ್ಕಿದ ಕಳ್ಳಿನಂತೆ.

பெரிதினிது பேதையார் கேண்மை பிரிவின்கண்
பீழை தருவதொன் றில்.   (839)

ದಡ್ಡರೊಂದಿಗೆ ಮಾಡುವ ಗೆಳೆತನವು ಅತಿ ಮಧುರವಾಗಿರುತ್ತದೆ; ಏಕೆಂದರೆ ಅಗಲಿಕೆಯ ಸಮಯದಲ್ಲಿ ಯಾವೊಂದು ದುಃಖವನ್ನು ಅದು ಉಂಟು ಮಾಡುವುದಿಲ್ಲ.

கழாஅக்கால் பள்ளியுள் வைத்தற்றால் சான்றோர்
குழாஅத்துப் பேதை புகல்.   (840)

ಬಲ್ಲವರ ಸಭೆಯಲ್ಲಿ ದಡ್ಡನಾದವನು ಹೊಗುವುದು, ಅಶುದ್ಧವಾದ ಕಾಲನ್ನು ತೊಳೆಯದೆ (ಮಲಗಲು) ಹಾಸಿಗೆಯ ಕಾಲಿಟ್ಟಂತೆ.